Welcome to Lokayatha
ಲೋಕಾಯತಕ್ಕೆ ಸ್ವಾಗತ
ಸಂಗೀತ, ಚರಿತ್ರೆ, ಅರ್ಥಶಾಸ್ತ್ರ, ಅನುವಾದ ಹೀಗೆ ಹಲವು ಕ್ಷೇತ್ರಗಳಲ್ಲಿ ಅವಕಾಶ ಸಿಕ್ಕಾಗ ಒಂದಿಷ್ಟು ಓದುತ್ತಾ, ಬರೆಯುತ್ತಾ ಸಾಗುತ್ತಿದ್ದೇವೆ. ಈ ಹಾದಿಯಲ್ಲಿ ರಾಗಮಾಲಾ, ಅರ್ಥ ಇವೆಲ್ಲಾ ಹುಟ್ಟಿಕೊಂಡವು. ಬರೆದದ್ದು ಒಂದೆಡೆ ಇರಲಿ ಅಂದುಕೊಂಡು ಲೋಕಾಯತದಲ್ಲಿ ಹಾಕುತ್ತಿದ್ದೇವೆ. ಲೋಕಾಯತದ ಓದಿನಿಂದೊಂದಿಗೆ ಈ ಹುಚ್ಚು ಪ್ರಾರಂಭವಾಗಿದ್ದರಿಂದ ಈ ತಾಣವನ್ನು ಲೋಕಾಯತ ಎಂದು ಕರೆದಿದ್ದೇವೆ.

ಅರ್ಥ
ಆರ್ಥಿಕತೆಗೆ ಪ್ರಶ್ನೆಗಳು ತೀರಾ ಮುಖ್ಯವಾದ ಪ್ರಶ್ನೆಗಳು. ಇವುಗಳನ್ನು ಪರಿಹರಿಸುವ ಕೆಲಸವನ್ನು ಕೆಲವು ಅರ್ಥಶಾಸ್ತ್ರಜ್ಞರಿಗೆ ಹಾಗೂ ಪರಿಣತರಿಗೆ ಬಿಡುವುದು ಸರಿಯಲ್ಲ. ಇದರ ವಿಶ್ಲೇಷಣೆಯಲ್ಲಿ ಇತಿಹಾಸಜ್ಞರು, ಸಮಾಜಶಾಸ್ತ್ರಜ್ಞರು, ರಾಜಕೀಯ ವಿಜ್ಞಾನಿಗಳು, ಮಾನವಶಾಸ್ತ್ರಜ್ಞರು ಇತ್ಯಾದಿ ಸಮಾಜ ವಿಜ್ಞಾನಿಗಳು ತೊಡಗಿಕೊಳ್ಳಬೇಕು. ಅಷ್ಟೇ ಅಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಕ್ರಿಯೆಯಲ್ಲಿ ಜನರು ಪಾಲ್ಗೊಳ್ಳಬೇಕು. ಆರ್ಥಿಕ ಹಾಗೂ ಚಾರಿತ್ರಿಕ ಜ್ಞಾನ ಪ್ರಜಾಸತ್ತಾತ್ಮಕಗೊಳ್ಳಬೇಕು. ಅಂತಹ ಮಾಹಿತಿಗಳು ಹಾಗೂ ಪುರಾವೆಗಳು ಇಡೀ ಸಮಾಜವನ್ನು ಪ್ರಜಾಸತ್ತಾತ್ಮಕಗೊಳಿಸುವ, ಅಧಿಕಾರದ ಸಮಾನ ಹಂಚಿಕೆಗಾಗಿ ನಡೆಯುವ ಹೋರಾಟದ ಭಾಗವಾಗಬೇಕು.
ರಾಗಮಾಲ
ಕೆಲವು ಸಂಗೀತ ಸಂಸ್ಥೆಗಳೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದರಿಂದ, ಅವು ತರುತ್ತಿದ್ದ ಪತ್ರಿಕೆಗಳಲ್ಲಿ ಕೆಲಸ ಮಾಡಬೇಕಾಗಿ ಬಂದಿದ್ದರಿಂದ ಬರವಣಿಗೆ ಪ್ರಾರಂಭವಾಯಿತು. ರಾಜೀವ್ ತಾರಾನಾಥರಂತಹವರ ಪರಿಚಯದಿಂದ ಸ್ವತಂತ್ರವಾಗಿ ಪ್ರಕಾಶಿಸುವುದು ಅನಿವಾರ್ಯವಾಯಿತು. ಹಾಗೆ ಹುಟ್ಟಿಕೊಂಡಿದ್ದು ರಾಗಮಾಲ. ಹಾಗೆಯೇ ಕೆಲವು ಸುರಭಿ ಸಿಂಚನ, ತಿಲ್ಲಾನ, ಮಯೂರ, ಪ್ರಜಾವಾಣಿ ಇಲ್ಲೆಲ್ಲಾ ಬರೆದದ್ದು ಇಲ್ಲಿವೆ. ಹಾಗೆಯೇ ಎಲ್ಲೂ ಪ್ರಕಟವಾಗದ್ದು ನಮ್ಮ ಫೇಸ್ಬುಕ್ ಪುಟಗಳಲ್ಲಿ ಕಾಣಿಸಿಕೊಂಡವು. ಅವೂ ಕೂಡ ಇಲ್ಲಿವೆ.

ನಮ್ಮ ಪುಸ್ತಕಗಳು
ಸಂಗೀತ, ಅರ್ಥಶಾಸ್ತ್ರ, ಚರಿತ್ರೆ ಹೀಗೆ ಆಸಕ್ತಿ ಮೂಡಿದ ಹತ್ತು ಹಲವು ವಿಷಯಗಳಲ್ಲಿ ನಮಗೆ ಅನಿಸಿದ್ದನ್ನು ಹಂಚಿಕೊಳ್ಳುವುದಕ್ಕೆ . . .
Recent Articles
ಮೈಸೂರು ಅನಂತಸ್ವಾಮಿ
ಮೈಸೂರು ಅನಂತಸ್ವಾಮಿಯವರು ಕರ್ನಾಟಕ ಕಂಡ ಅತ್ಯಂತ ಪ್ರತಿಭಾನ್ವಿತ ಸಂಗೀತಗಾರರಲ್ಲಿ...
Read Moreಮಧ್ಯಮ ವರಮಾನದ ದೇಶಗಳ ಪಟ್ಟಿಯಲ್ಲಿರುವ
ಅರಿಯಬೇಕಿದೆ ‘ಸಿರಿವಂತಿಕೆ’ಯ ಗುಟ್ಟು –––––––––– ಭಾರತ ಜಗತ್ತಿನ ಮೂರನೇ...
Read Moreಹೊಸ ಹಾದಿಯ ಹರಿಕಾರ-ಜಿ.ಎನ್. ಬಾಲಸುಬ್ರಹ್ಮಣ್ಯಂ
(೦೬/೦೬/೧೯೧೦- ೦೧/೦೫/೧೯೬೫) [ಒಬ್ಬ ವ್ಯಕ್ತಿಯಲ್ಲಿ ಅತ್ಯುತ್ತಮವಾದ ಎಲ್ಲಾ ಗುಣಗಳು...
Read More