December 2024

ಮಧ್ಯಮ ವರಮಾನದ ದೇಶಗಳ ಪಟ್ಟಿಯಲ್ಲಿರುವ ಭಾರತ ಶ್ರೀಮಂತ ರಾಷ್ಟ್ರವಾಗುವುದು ಹೇಗೆ?

ಅರಿಯಬೇಕಿದೆ ‘ಸಿರಿವಂತಿಕೆ’ಯ ಗುಟ್ಟು –––––––––– ಭಾರತ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುವ ಗುರಿ ಇರಿಸಿಕೊಂಡಿದೆ. ಸದ್ಯಕ್ಕೆ ದೇಶಗಳ ಶ್ರೀಮಂತಿಕೆಯನ್ನು ಅಳೆಯುವುದಕ್ಕೆ ತಲಾ ವರಮಾನವನ್ನು ಮಾಪನವನ್ನಾಗಿ ಬಳಸಲಾಗುತ್ತಿದೆ. ಯಾವುದೇ ದೇಶದ ತಲಾ ವರಮಾನವು ಅಮೆರಿಕದ 13,845 ಡಾಲರ್‌ಗಿಂತ (ಒಂದು ಡಾಲರ್‌ಗೆ ಸುಮಾರು ₹ 85) ಹೆಚ್ಚಾಗಿದ್ದರೆ ಅದು ಶ್ರೀಮಂತ ರಾಷ್ಟ್ರ ಎನಿಸಿಕೊಳ್ಳುತ್ತದೆ. ಭಾರತದ ತಲಾ ವರಮಾನವು 2,500 ಡಾಲರ್ ಇದೆ. ನಮ್ಮ ದೇಶ ಈಗ ಮಧ್ಯಮ ವರಮಾನದ ದೇಶಗಳ ಪಟ್ಟಿಯಲ್ಲಿದೆ. ಇದು ಶ್ರೀಮಂತ ರಾಷ್ಟ್ರವಾಗಬೇಕಾದರೆ ಹೆಚ್ಚು ವೇಗವಾಗಿ […]

ಮಧ್ಯಮ ವರಮಾನದ ದೇಶಗಳ ಪಟ್ಟಿಯಲ್ಲಿರುವ ಭಾರತ ಶ್ರೀಮಂತ ರಾಷ್ಟ್ರವಾಗುವುದು ಹೇಗೆ? Read More »

Balasubramanyam G N – ಹೊಸ ಹಾದಿಯ ಹರಿಕಾರ-ಜಿ.ಎನ್. ಬಾಲಸುಬ್ರಹ್ಮಣ್ಯಂ

(೦೬/೦೬/೧೯೧೦- ೦೧/೦೫/೧೯೬೫)   [ಒಬ್ಬ ವ್ಯಕ್ತಿಯಲ್ಲಿ ಅತ್ಯುತ್ತಮವಾದ ಎಲ್ಲಾ ಗುಣಗಳು ಮೇಳೈಸುವುದಕ್ಕೆ ಹಾಗೂ ಒಬ್ಬ ಸಂಗೀತಗಾರ ಏಕಕಾಲಕ್ಕೆ ವಾಗ್ಗೇಯಕಾರ, ಸಂಗೀತಶಾಸ್ತ್ರಜ್ಞ, ಗುರು, ಲೇಖಕ ಎಲ್ಲವೂ ಆಗಿರುವುದಕ್ಕೆ ಸಾಧ್ಯವೇ? ಹಾಗೊಂದು ವೇಳೆ ಈ ಎಲ್ಲಾ ಗುಣಲಕ್ಷಣಗಳನ್ನೂ ಒಬ್ಬ ವ್ಯಕ್ತಿಯೇನಾದರೂ ಹೊಂದಿದ್ದರೆ ಅದು ಖಂಡಿತವಾಗಿ ಜಿ.ಎನ್. ಬಾಲಸುಬ್ರಹ್ಮಣ್ಯಂ- ಖ್ಯಾತ ವೀಣಾವಾದಕ ಎಸ್.ಬಾಲಚಂದರ್.]   ಬಹುತೇಕ ಎಲ್ಲರೂ ಜಿ.ಎನ್.ಬಾಲಸುಬ್ರಹ್ಮಣ್ಯಂ ಅವರನ್ನು ಒಬ್ಬ ಪರಿಪೂರ್ಣ ಸಂಗೀತಗಾರ ಎಂದು ಗುರುತಿಸುತ್ತಾರೆ. ಅವರ ಬದುಕು ಮತ್ತು ಸಂಗೀತದ ಕಥೆ ಈವರೆಗೆ ನಾವು ಕೇಳಿದ ಕಲಾವಿದರೆಲ್ಲರ ಬದುಕಿನ

Balasubramanyam G N – ಹೊಸ ಹಾದಿಯ ಹರಿಕಾರ-ಜಿ.ಎನ್. ಬಾಲಸುಬ್ರಹ್ಮಣ್ಯಂ Read More »

ವೇತನ ತಾರತಮ್ಯ ಇನ್ನೂ ಯಾಕಿದೆ?

೧೯೭೦ರಲ್ಲಿ ಸಾಮಾಜಿಕ ಚರಿತ್ರೆಯ ಬಗ್ಗೆ, ಕುಟುಂಬ ಹಾಗೂ ಕುಟುಂಬದ ಆರ್ಥಿಕತೆಯ ಬಗ್ಗೆ ಅಧ್ಯಯನ ಮಾಡೋ ಆಸಕ್ತಿ ಪ್ರಾರಂಭವಾಗಿತ್ತು. ಆದರೆ ಒಬ್ಬ ವ್ಯಕ್ತಿಯ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಆಕೆ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಳು. ಅದ್ಯಾಕೊ ಎಲ್ಲರೂ ಮನೆಯೊಳಗೆ ದುಡಿಯುತ್ತಿದ್ದ ಮಡದಿ, ತಾಯಿಯನ್ನು ಯಾರೂ ಗಮನಿಸಿಯೇ ಇರಲಿಲ್ಲ. ಅವಳ ಬಗ್ಗೆ ಮಾಹಿತಿಯೇ ಇರಲಿಲ್ಲ. ಇನ್ನೂ ಮಾತನಾಡೋದು ಎಲ್ಲಿಂದ ಬಂತು. ಅವಳ ಚರಿತ್ರೆಯನ್ನು ಬರೆಯಬೇಕು ಅಂತ ತೀರ್ಮಾನಿಸಿದೆ. ಹೀಗೆ ಶುರು ಆಯಿತು ಕ್ಲಾಡಿಯಾ ಗೋಲ್ಡಿನ್ ಅವರ ಜೆಂಡರ್ ಗ್ಯಾಪ್ ಕುರಿತ

ವೇತನ ತಾರತಮ್ಯ ಇನ್ನೂ ಯಾಕಿದೆ? Read More »

ಯಾಕೆ ಕೆಲ ದೇಶಗಳು ಬಡವಾಗಿವೆ?

ಟಿ ಎಸ್ ವೇಣುಗೋಪಾಲ್ [ಈ ವರ್ಷದ ಅರ್ಥಶಾಸ್ತ್ರದ ನೋಬೆಲ್ ಡೆರನ್ ಅಸಿಮೊಗ್ಲು, ಜೇಮ್ಸ್ ಎ ರಾಬಿನ್ಸನ್, ಹಾಗೂ ಸಿಮನ್ ಜಾನ್ಸನ್ ಅವರಿಗೆ ಲಭಿಸಿದೆ. ಡೆರನ್ ಅಸಿಮೊಗ್ಲು ಇಸ್ತಾಂಬುಲ್‌ನಲ್ಲಿ ಜನಿಸಿದರು. ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್‌ನಲ್ಲಿ ಪಿಎಚ್‌ಡಿ ಮಾಡಿದರು. ನಂತರ ಈಗ ಎಂಐಟಿಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಜೇಮ್ಸ್ ಎ ರಾಬಿನ್ಸನ್ ಯೇಲ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಮಾಡಿದರು. ಸದ್ಯ ಷಿಕ್ಯಾಗೋ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಸಿಮನ್ ಜಾನ್ಸನ್ ಎಂಐಟಿಯಲ್ಲಿ ಪಿಎಚ್‌ಡಿ ಮಾಡಿ, ಅಲ್ಲೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.]

ಯಾಕೆ ಕೆಲ ದೇಶಗಳು ಬಡವಾಗಿವೆ? Read More »

ಸಂತೋಷ ಅನ್ನೋದು ಕಾಸಿಗೆ ಸಿಗುತ್ತಾ?

ಒಂದು ಸೊಗಸಾದ ಸಂಗೀತದ ಕಾರ್ಯಕ್ರಮ ಕೇಳ್ತಾ ಇದ್ದೀರಿ. ಅರ್ಧ ಗಂಟೆ ಅದರ ಸುಖ ಅನುಭವಿಸಿದ್ದೀರಿ. ಅದ್ಭುತವಾದ ಅನುಭವ. ಕೊನೆಗೆ ಒಂದು ಕರ್ಕಶ ಶಬ್ದ. ಅಯ್ಯೋ, ಎಲ್ಲಾ ಹಾಳಾಯಿತು ಅಂತ ಚೀರುತ್ತೀರಿ. ಆದರೆ ನಿಜವಾಗಿ ಎಲ್ಲಾ ಹಾಳಾಯ್ತಾ? ಖಂಡಿತಾ ಇಲ್ಲ. ಅರ್ಧ ಗಂಟೆ ಸೊಗಸಾದ ಸಂಗೀತ ಅನುಭವಿಸಿದ್ದೀರಿ. ಆದರೂ ಎಲ್ಲಾ ನಾಶವಾಯ್ತು ಅಂತ ಪರಿತಪಿಸುತ್ತೀರಿ.ಹಾಗೇನೆ ರುಚಿರುಚಿಯಾದ ಕಡಲೇಕಾಯಿ ಬೀಜ ತಿನ್ನುತ್ತಿರುತ್ತೀರಿ. ಕೊನೆಗೆ ಒಂದು ಕಹಿಯಾದ ಬೀಜ ಸಿಕ್ಕರೆ ರುಚಿಯೆಲ್ಲಾ ಹಾಳಾಯ್ತು ಅಂತ ಒದ್ದಾಡುತ್ತೀರಿ. ನಿಜವಾಗಿ ನಾವು ಕಳೆದುಕೊಂಡದ್ದು ಏನು?

ಸಂತೋಷ ಅನ್ನೋದು ಕಾಸಿಗೆ ಸಿಗುತ್ತಾ? Read More »

ಕೈಯಲ್ಲಿರುವ ವೈನ್ ಬಿಡಲಾರೆ, ಅಂಗಡಿಯಲ್ಲಿ ಕೊಳ್ಳಲಾರೆ

ಒಂದು ಪ್ರಕಟಣೆ : ಆರು ವರ್ಷದ ಮುದ್ದಾದ ಮಗು. ತುಂಬಾ ಹುಷಾರಿಲ್ಲ. ತಕ್ಷಣ ಆಪರೇಷನ್ ಆಗಬೇಕು. ಆದರೆ ಆಪರೇಷನ್ ತುಂಬಾ ದುಬಾರಿ. ಅಪ್ಪ ಅಮ್ಮನ ಹತ್ತಿರ ಹಣ ಇಲ್ಲ. ನಮ್ಮ ಕರುಳು ಕಿವುಚುತ್ತದೆ. ಹಣ ಹರಿದು ಬರುತ್ತದೆ. ಇನ್ನೊಂದು ಸುದ್ದಿ ಅದೇ ಪತ್ರಿಕೆಯಲ್ಲಿ ಬಂದಿದೆ. ಒಂದು ದೊಡ್ಡ ಆಸ್ಪತ್ರೆ. ಇಲ್ಲಿಯವರೆಗೆ ಇಂತಹ ಸಾವಿರಾರು ತುರ್ತು ಶಸ್ತ್ರಚಿಕಿತ್ಸೆ ಮಾಡಿ ಜನರನ್ನು ಉಳಿಸಿದೆ. ಈಗ ತೆರಿಗೆ ಕಟ್ಟಲಾರದೆ ರೋಗಿಗೆ ಯಾವ ಸೌಲಭ್ಯವನ್ನು ಕೊಡುವ ಸ್ಥಿತಿಯಲ್ಲಿಲ್ಲ. ಜನ ನೆರವಾಗುವುದಿರಲಿ, ಬಹುಶಃ ಒಂದು

ಕೈಯಲ್ಲಿರುವ ವೈನ್ ಬಿಡಲಾರೆ, ಅಂಗಡಿಯಲ್ಲಿ ಕೊಳ್ಳಲಾರೆ Read More »

ನಾನು ನಿನ್ನನ್ನು ಒಪ್ಪಲಾರೆ ಅಂದವರು ಅಪ್ಪಿಕೊಂಡಾಗ

ಒಬ್ಬರ ನಿಲುವು ಇನ್ನೊಬ್ಬರಿಗೆ ಸರಿ ಅನ್ನಿಸದೇ ಹೋದರೆ ಹಲವು ಸಲ ಅದು ದ್ವೇಷಕ್ಕೋ, ಆವೇಶದ ಚರ್ಚೆಗೋ ಕಾರಣವಾಗುತ್ತದೆ. ಯಾರಿಗೂ ಇನ್ನೊಬ್ಬರ ನಿಲುವನ್ನು ಅರ್ಥಮಾಡಿಕೊಳ್ಳುವ ವ್ಯವಧಾನ ಇರುವುದಿಲ್ಲ. ತಾಳ್ಮೆಯಿಂದ ಯೋಚಿಸಿದರೆ ಎಷ್ಟೋ ವಿಷಯದಲ್ಲಿ ಒಮ್ಮತವೂ ಸಾಧ್ಯವಾಗುತ್ತದೆ. ಇನ್ನೊಬ್ಬರ ನಿಲುವನ್ನು ಗೌರವಿಸುವುದಕ್ಕೂ ಆಗುತ್ತದೆ. ಅದರಿಂದ ಹೊಸ ಅರಿವೂ ಸಾಧ್ಯವಾಗಬಹುದು. ವಿಭಿನ್ನ ವಿಚಾರಗಳು ಘೋರ ದ್ವೇಷಕ್ಕೆ, ಪ್ರತಿಕಾರಕ್ಕೆ ಕಾರಣವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಇಂತಹ ಸಹನೆಯ ಸಂವಾದದಿಂದ ಅನುಕೂಲವಾಗಬಹುದು. ಆರೋಗ್ಯಕರ ಪ್ರಜಾಸತ್ತೆಗೆ ಅದು ಅನಿವಾರ್ಯ. ಅಭಿಪ್ರಾಯಭೇಧ ಹಲವು ಸಂದರ್ಭಗಳಲ್ಲಿ ಭಾವನಾತ್ಮಕ ಮಟ್ಟದಲ್ಲಿ ಇರುತ್ತದೆಯೇ

ನಾನು ನಿನ್ನನ್ನು ಒಪ್ಪಲಾರೆ ಅಂದವರು ಅಪ್ಪಿಕೊಂಡಾಗ Read More »

ನಾವು ನಿಜವಾಗಿ ಅಂದುಕೊಂಡಷ್ಟು ನಾವು ಸಂಭಾವಿತರಾ?

ಈ ಜಗತ್ತಿನಲ್ಲಿ ರಾಜಕಾರಣಿಗಳು ಸರಿ ಇಲ್ಲ. ಅಧಿಕಾರಿಗಳು ಭ್ರಷ್ಠರು. ಇತ್ಯಾದಿ, ಇತ್ಯಾದಿ. ಇವು ನಾವೆಲ್ಲಾ ಒಪ್ಪಿಕೊಂಡಿರುವ ಸತ್ಯ. ಈ ಭ್ರಷ್ಠರ ಜಗತ್ತಿನಲ್ಲಿ ನಾನು ಮಾತ್ರ ಒಳ್ಳೆಯವನು. ನೈತಿಕತೆಯನ್ನು ತುಂಬಾ ಜತನವಾಗಿ ಕಾಪಾಡಿಕೊಂಡು ಬಂದಿದ್ದೇನೆ. ಇದು ನನ್ನ ಅಚಲವಾದ ನಂಬಿಕೆ. ನನ್ನಂತೆ ಎಲ್ಲರ ನಂಬಿಕೆಯೂ. ನಾವು ಭ್ರಷ್ಠ ಅಂತ ಕರೆಯುವ ರಾಜಕಾರಣಿಯನ್ನೇ ಕೇಳಿನೋಡಿ. ಅವನು ತನ್ನನ್ನು ಶುದ್ಧ ಅಂತಲೇ ಅಂದುಕೊಂಡಿರುತ್ತಾನೆ. ಅಷ್ಟೇ ಅಲ್ಲ, ಜನ ರಾಜಕಾರಣಿಯನ್ನು ಮಾತ್ರವಲ್ಲ, ನನ್ನನ್ನೂ ಕೂಡ ’ಇವನು ಸಂಭಾವಿತ’ ಅಂತ ಯಾವಾಗಲೂ ಭಾವಿಸಿರಲಿಕ್ಕಿಲ್ಲ. ನಾನು

ನಾವು ನಿಜವಾಗಿ ಅಂದುಕೊಂಡಷ್ಟು ನಾವು ಸಂಭಾವಿತರಾ? Read More »

Um Ulsam – ಈಜಿಪ್ಟಿನ ನಾಲ್ಕನೆಯ ಪಿರಮಿಡ್ ಉಮ್ ಉಲ್ಸಮ್

  ಈಜಿಪ್ಟ್‌ನ ದನಿ, ಈಜಿಪ್ಟಿನ ನಾಲ್ಕನೆಯ ಪಿರಮಿಡ್ ಎನಿಸಿಕೊಂಡು ಅರಬ್ ದೇಶಗಳಲ್ಲೆಲ್ಲಾ ನಿರಾತಂಕವಾಗಿ ಓಡಾಡುತ್ತಾ, ಅರಬ್-ಈಜಿಪ್ಟ್ ಸಂಗೀತದ ಅಸಲೀ ಪ್ರತಿನಿಧಿ ಎನಿಸಿಕೊಂಡು, ಅರಬ್ ಸಂಗೀತಕ್ಕೆ ಹೊಸ ವ್ಯಾಖ್ಯಾನ ಬರೆದವರು ಈಜಿಪ್ಟಿನ ಮಹಾನ್ ಗಾಯಕಿ ಉಮ್ ಕುಲ್ಸುಂ. ಉಮ್ ಕುಲ್ಸುಂ ತೀರಿಹೋದ ೩೦ ವರ್ಷಗಳ ಬಳಿಕವೂ ಅರಬ್ ಸಂಗೀತ ಏನೆಂದು ತಿಳಿದುಕೊಳ್ಳ ಬೇಕಾದರೆ ನೀವು ಉಮ್ ಕುಲ್ಸುಂ ಅವರ ಗಾಯನ ಕೇಳಬೇಕು ಎನ್ನುತ್ತಾರೆ ಅರಬ್ ಲೋಕದ ಹೊಸಪೀಳಿಗೆಯ ಕಲಾವಿದರು. ಉಮ್ ನನ್ನ ಬಹು ಮೆಚ್ಚಿನ ಗಾಯಕಿ. ಎನ್ನುತ್ತಾರೆ ಸಂಗೀತ

Um Ulsam – ಈಜಿಪ್ಟಿನ ನಾಲ್ಕನೆಯ ಪಿರಮಿಡ್ ಉಮ್ ಉಲ್ಸಮ್ Read More »

ಭಯೋತ್ಪಾದನೆ ಹಾಗೂ ವರ್ತನ ಅರ್ಥಶಾಸ್ತ್ರ

ಅರ್ಥಶಾಸ್ತ್ರವು ಮನುಷ್ಯನ ವರ್ತನೆಗೂ ಮಹತ್ವಕೊಡಬೇಕು. ಆಗಷ್ಟೇ ಅದು ಹೆಚ್ಚು ನಿಖರವಾಗುವುದಕ್ಕೆ ಸಾಧ್ಯ ಅನ್ನುವುದನ್ನು ಒಪ್ಪಿಕೊಂಡರೆ, ಹಲವಾರು ಹೊಸ ಹೊಸ ವಿಷಯಗಳು ಅರ್ಥಶಾಸ್ತ್ರದ ಅಧ್ಯಯನದ ಭಾಗವಾಗುವುದಕ್ಕೆ ಸಾಧ್ಯವಾಗುತ್ತದೆ. ಸಂತೋಷ, ದುಃಖ, ನೋವು, ಭಯೋತ್ಪಾದನೆ ಹೀಗೆ ಹಲವಾರು ವಿಷಯಗಳು ಅರ್ಥಶಾಸ್ತ್ರದ ವ್ಯಾಪ್ತಿಗೆ ಬರುವುದಕ್ಕೆ ಸಾಧ್ಯವಾಗುತ್ತದೆ. ಸ್ವಿಟ್ಜರ್‌ಲ್ಯಾಂಡಿನ, ಜ್ಯೂರಿಚ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿರುವ ಬ್ರುನೊ ಎಸ್. ಫ್ರೆ ಹೀಗೆ ಭಯೋತ್ಪಾದನೆಯನ್ನು ಕುರಿತು ಒಂದು ಕುತೂಹಲಕಾರಿ ಅಧ್ಯಯನವನ್ನು ಮಾಡಿದ್ದಾರೆ. ಭಯೋತ್ಪಾದನೆಗೆ ಸಂಬಂಧಿಸಿದಂತೆ ನಮ್ಮ ಈವರೆಗಿನ ಹಲವಾರು ಆಲೋಚನೆಗಳನ್ನು ಮರುಚಿಂತಿಸುವಂತೆ ಈ ಅಧ್ಯಯನ

ಭಯೋತ್ಪಾದನೆ ಹಾಗೂ ವರ್ತನ ಅರ್ಥಶಾಸ್ತ್ರ Read More »