ಬದುಕೇ ಹಾಡಾದ ಮೀರಿಯಂ ಮಕೇಬಾ
ಹಾಡು-ನೃತ್ಯದೊಡನೆ ಆಫ್ರಿಕಾದವರಿಗೆ ಇರುವ ಸಂಬಂಧವೇ ಬೇರೆ ರೀತಿಯದ್ದು. ಅವರಲ್ಲಿ ಅದು ಒಡಲು ಉಸಿರಿನ ಸಂಬಂಧ. ಜೀವದೊಳಗಿರುವ ಹಸಿವು, ಬಾಯರಿಕೆ, ಸುಸ್ತು, ಸಂಕಟ, ಪ್ರೀತಿ, ಪ್ರಣಯದಂತೆ ಹಾಡು-ನೃತ್ಯಗಳು ಕೂಡ ಅವರ ಮೂಲಭೂತ ಪ್ರವೃತ್ತಿ. ಹೀಗೆ ಹಾಡೇ ಒಡಲಾಗಿದ್ದ ದಕ್ಷಿಣ ಆಫ್ರಿಕಾದ ಇತಿಹಾಸದಲ್ಲಿ ಮಕೇಬಾ ಬಹು ಮುಖ್ಯ ವ್ಯಕ್ತಿ. ಅವಳು ಮಾಮ್ಮಾ ಆಫ್ರಿಕಾ. ಅವಳ ಬದುಕು ಸಂಗೀತವಲ್ಲದೆ ಮತ್ತೇನಲ್ಲ. ಅವಳು ತನ್ನ ಹಾಡಿನ ಮೂಲಕವೇ ಇಡೀ ಆಫ್ರಿಕಾದ ದ ಬದುಕು, ಬವಣೆ, ದಬ್ಬಾಳಿಕೆ, ಹಿಂಸೆ, ರಾಜಕಾರಣ ಎಲ್ಲವನ್ನೂ ಬಿಚ್ಚಿಡುತ್ತಾ ಹೋಗುತ್ತಾಳೆ. […]
ಬದುಕೇ ಹಾಡಾದ ಮೀರಿಯಂ ಮಕೇಬಾ Read More »