ಇಂಗಮರ್ ಬರ್ಗಮನ್
ಇಂಗಮರ್ ಬರ್ಗಮನ್ ಚಲನಚಿತ್ರ ಕ್ಷೇತ್ರದಲ್ಲಿ ದೊಡ್ಡ ಹೆಸರು. ಅವನು ಇಡೀ ಬದುಕನ್ನು ರಂಗಭೂಮಿ ಹಾಗೂ ಸಿನಿಮಾಕ್ಕೆ ಮೀಸಲಿಟ್ಟಿದ್ದ. ಅವನೊಬ್ಬ ಹುಟ್ಟು ಚಿತ್ರ ನಿರ್ದೇಶಕ. ಮಾಧ್ಯಮವನ್ನು ಚೆನ್ನಾಗಿ ಬಲ್ಲವನು. ತಾನೊಬ್ಬ ಒಳ್ಳೆ ನಿರ್ದೇಶಕ ಎಂಬ ಅರಿವು ಅವನಿಗೂ ಇತ್ತು. ಆದರೂ ಸಿನಿಮಾ ಕೆಲಸ ಪ್ರಾರಂಭವಾದರೆ ಅದು ಮುಗಿಯುವವರೆಗೆ ತಳಮಳ ಅವನಿಗೂ ತಪ್ಪಿದ್ದಲ್ಲ. ಸಿನಿಮಾದ ಮೊದಲ ಹೆಜ್ವೆಯಲ್ಲೇ ಈ ಒದ್ದಾಟ ಶುರುವಾಗುತ್ತದೆ. ಕೆಲವು ವಸ್ತುಗಳು ಬೇಗ ಸಿಕ್ಕು ಬಿಡಿಸಿಕೊಂಡು ಕಲಾಕೃತಿಗಳಾಗಿಬಿಡುತ್ತವೆ. ಕೆಲವು ತುಂಬಾ ಕಾಲ ಹೆಣಗುತ್ತವೆ. ಇದು ಅವನಿಗೆ […]