August 2025

ಸಾಮ್ರಾಜ್ಯಶಾಹಿ ಮತ್ತು ಭಾರತದ ಮೇಲಿನ ಅದರ ದಬ್ಬಾಳಿಕೆ

ಪ್ರಭಾತ್ ಪಟ್ನಾಯಕ್ ಇದು ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಭಾರತೀಯ ಜನತೆಯ ಸಂಗ್ರಾಮದ ವಿಜಯದ ೭೮ನೇ ವಾರ್ಷಿಕೋತ್ಸವದ ದಿನ. ಇಂದು ಅಮೆರಿಕದ ಸಾಮ್ರಾಜ್ಯಶಾಹಿ ತನ್ನ ಆದೇಶವನ್ನು ಪಾಲಿಸುವಂತೆ ಭಾರತವನ್ನು ಬಹಿರಂಗವಾಗಿ ಒತ್ತಾಯಿಸುತ್ತಿದೆ. ಎಂತಹ ವಿಪರ್ಯಾಸದ ಸಂಗತಿಂ. ಆದರೆ, ಈ ಗುಣ ಸಾಮ್ರಾಜ್ಯಶಾಹಿಯ ಸ್ವಭಾವದಲ್ಲೇ ಇದೆ. ವಾಸ್ತವವಾಗಿ, ಈ ೭೮ ವರ್ಷಗಳಲ್ಲಿ ಅಮೆರಿಕದ ಸಾಮ್ರಾಜ್ಯಶಾಹಿ ಭಾರತವನ್ನು ತನ್ನ ಆದೇಶಗಳನ್ನು ಪಾಲಿಸುವಂತೆ ಮಾಡುವುದಕ್ಕೆ ಹಲವು ಪ್ರಯತ್ನಗಳನ್ನು ಮಾಡಿದೆ. ಆದರೆ, ಹಿಂದೆ ಮಾಡಿದ್ದ ಪ್ರಯತ್ನಗಳಿಗೂ ಈಗ ಮಾಡುತ್ತಿರುವ ಪ್ರಯತ್ನಗಳಲ್ಲಿ ಎರಡು ಮೂಲಭೂತ ವ್ಯತ್ಯಾಸಗಳಿವೆ. […]

ಸಾಮ್ರಾಜ್ಯಶಾಹಿ ಮತ್ತು ಭಾರತದ ಮೇಲಿನ ಅದರ ದಬ್ಬಾಳಿಕೆ Read More »

ಟ್ರಂಪ್ ದಾರಿಯಲ್ಲಿ ಹೋಗುವುದು ಬೇಡ

ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಟ್ರಂಪ್ ಕೊನೆಗೂ ಇಂಡಿಯಾ ಮೇಲೆ ೫೦% ಸುಂಕ ಹಾಕಿದ್ದಾರೆ. ದಿನಕ್ಕೊಂದು ಕ್ರಮದಿಂದ ಟ್ರಂಪ್ ಸದಾ ಸುದ್ದಿಯಲ್ಲಿದ್ದಾನೆ. ಎಷ್ಟೇ ಬೇಡ ಅಂದರೂ ಅದು ಜಗತ್ತನ್ನು, ಜಗತ್ತಿನ ಆರ್ಥಿಕತೆಯನ್ನು ಒಂದಲ್ಲ ಒಂದು ರೀತಿ ಕಾಡುತ್ತಲೇ ಇದೆ. ಹಾಗಾಗಿ ಅದನ್ನು ಅರ್ಥಮಾಡಿಕೊಂಡು ಎದುರಿಸುವುದು ಅನಿವಾರ್ಯವಾಗುತ್ತದೆ. ಭಾರತದ ಸಧ್ಯದ ಸರ್ಕಾರ ಆತ್ಮೀಯ ಸ್ನೇಹಿತ ಎಂದು ಪರಿಗಣಿಸಿದ್ದ ಟ್ರಂಪ್ ಇಂದು ನಮ್ಮ ವಿರುದ್ಧ ಸುಂಕದ ಯುದ್ಧ ಸಾರಿದ್ದಾನೆ. ದಿನೇ ದಿನೇ ಹೊಸ ಆಯಾಮ ಪಡೆದುಕೊಳ್ಳುತ್ತಿರುವ ಟ್ರಂಪ್ ನೀತಿಯನ್ನು ಕುರಿತಂತೆ ಯೋಜನಾ

ಟ್ರಂಪ್ ದಾರಿಯಲ್ಲಿ ಹೋಗುವುದು ಬೇಡ Read More »

Annapoorna Devi ಏಕಾಂತಕ್ಕೆ ಸರಿದ ಸುರಬಹಾರ್‌ ನಾದ ಅನ್ನಪೂರ್ಣಾ ದೇವಿ

 ಸುಮಂಗಲಾ ಸರೋದ್‌ ವಾದಕರಾದ ಆಶೀಷ್ ಖಾನ್, ರಾಜೀವ ತಾರಾನಾಥ, ಬಸಂತ್ ಕಾಬ್ರಾ, ಸುರೇಶ್ ವ್ಯಾಸ್, ಪ್ರದೀಪ್ ಬರೋಟ್, ಅಮಿತ್ ಭಟ್ಟಾಚಾರ್ಯ, ಬಾನ್ಸುರಿ ವಾದಕರಾದ ಹರಿಪ್ರಸಾದ್ ಚೌರಾಸಿಯಾ ಮತ್ತು ನಿತ್ಯಾನಂದ ಹಳದೀಪುರ, ಸಿತಾರ್ ವಾದಕರಾದ ನಿಖಿಲ್ ಬ್ಯಾನರ್ಜಿ,ಸುಧೀರ್ ಫಾಡ್ಕೆ, ಸಂಧ್ಯಾ ಫಾಡ್ಕೆ, ಶಾಶ್ವತೀ ಸಹಾ, ಹಿರಿಯ ಹಿಂದೂಸ್ತಾನಿ ಗಾಯಕ ವಿನಯ ಭರತ್‌ ರಾಮ್…‌ ವಿವಿಧ ತಲೆಮಾರಿನ, ವಿಭಿನ್ನ ವಾದ್ಯಗಳ ವಾದಕರಾಗಿದ್ದ ಈ ಎಲ್ಲರಿಗೂ ಸಾಮಾನ್ಯವಾಗಿದ್ದ ಒಂದು ಅಂಶವಿತ್ತು. ಇವರೆಲ್ಲರಿಗೂ ಒಂದಲ್ಲ ಒಂದು ಕಾಲಘಟ್ಟದಲ್ಲಿ ಗುರುವಾಗಿ ಕಲಿಸಿದ್ದು ಅನ್ನಪೂರ್ಣಾ ದೇವಿಯವರು.

Annapoorna Devi ಏಕಾಂತಕ್ಕೆ ಸರಿದ ಸುರಬಹಾರ್‌ ನಾದ ಅನ್ನಪೂರ್ಣಾ ದೇವಿ Read More »

Amarthya sen-ಜನಪರ ಕಾಳಜಿಯ ತೀಕ್ಷ್ಣ ತಾರ್ಕಿಕ ಮನಸ್ಸಿನ ಅರ್ಥಶಾಸ್ತ್ರಜ್ಞ- ಅಮರ್ತ್ಯ ಸೇನ್

  ಟಿ ಎಸ್ ವೇಣುಗೋಪಾಲ್   “ಒಂದು ಮದ್ಯಾಹ್ನ, ಒಬ್ಬ ಯುವಕ ಜೋರಾಗಿ ಕಿರುಚಿಕೊಂಡು ನಮ್ಮ ಮನೆಯ ಮುಂದೆ ಓಡಿಕೊಂಡು ಬಂದ. ಮೈಯೆಲ್ಲಾ ರಕ್ತಮಯವಾಗಿತ್ತು. ಯಾರೋ ಅವನನ್ನು ಚಾಕುವಿನಿಂದ ಇರಿದಿದ್ದರು. ಆತ ಖಾದಿರ್ ಮಿಯಾ ಅಂತ ಒಬ್ಬ ಮುಸ್ಲಿಂ ಕೆಲಸಗಾರ. ಕೆಲಸ ಹುಡುಕಿಕೊಂಡ ಇಲ್ಲಿಗೆ ಬಂದಿದ್ದ. ದಾರಿಯಲ್ಲಿ ಯಾರೋ ಮತಾಂಧರು ಅವನನ್ನು ಇರಿದಿದ್ದರು. ನಮ್ಮ ತಂದೆ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ’ಆಗದವರೂ ಇರುವ ಕಡೆ, ಅದೂ ಕೋಮು ಗಲಭೆಯ ಸಮಯದಲ್ಲಿ ಹೋಗಬೇಡ’ ಅಂತ ಅವನ ಹೆಂಡತಿ

Amarthya sen-ಜನಪರ ಕಾಳಜಿಯ ತೀಕ್ಷ್ಣ ತಾರ್ಕಿಕ ಮನಸ್ಸಿನ ಅರ್ಥಶಾಸ್ತ್ರಜ್ಞ- ಅಮರ್ತ್ಯ ಸೇನ್ Read More »

V K R V Rao-ವಿ ಕೆ ಆರ್ ವಿ ರಾವ್- ಸಂಸ್ಥೆಗಳ ಶಿಲ್ಪಿ

  ವಿಜಯೇಂದ್ರ ರಾವ್   ವಿಜಯೇಂದ್ರ ಕಸ್ತೂರಿ ರಂಗ ವರದರಾಜ (ವಿ.ಕೆ.ಆರ್.ವಿ.) ರಾವ್ ಸ್ವಾತಂತ್ರ್ಯೋತ್ತರ ಭಾರತೀಯ ಅರ್ಥಶಾಸ್ತ್ರದ ಕ್ಷೇತ್ರದಲ್ಲಿ ದಿಗ್ಗಜರು. ಅವರು ಸ್ಥಾಪಿಸಿದ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ (ಡಿಎಸ್‌ಇ) ಮತ್ತು ಇನ್‌ಸ್ಟಿಟ್ಯೂಟ್ ಫಾರ್ ಇಕನಾಮಿಕ್ ಗ್ರೋತ್ (ಐಇಜಿ) ಎರಡು ಸಂಸ್ಥೆಗಳು ಭಾರತದಲ್ಲಿ ಆರ್ಥಿಕ ಮತ್ತು ಸಮಾಜಶಾಸ್ತ್ರೀಯ ತರಬೇತಿ ಮತ್ತು ಸಂಶೋಧನೆಗೆ ಬೇಕಾದ ಮೂಲಸೌಕರ್ಯವನ್ನು ಒದಗಿಸುವ ಕೇಂದ್ರಗಳು. ಹಾಗೆಯೇ ಅವರು ಸ್ಥಾಪಿಸಿದ ಇನ್ನೊಂದು ಮಹತ್ವದ ಸಂಸ್ಥೆ ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಫಾರ್ ಸೋಶಿಯಲ್ ಅಂಡ್ ಇಕನಾಮಿಕ್ ಚೇಂಜ್ (ಐಎಸ್‌ಇಸಿ).

V K R V Rao-ವಿ ಕೆ ಆರ್ ವಿ ರಾವ್- ಸಂಸ್ಥೆಗಳ ಶಿಲ್ಪಿ Read More »

Rasoolan Bai, ಅವರೆಲ್ಲರೂ ದೇವಿಯರು ಉಳಿದಿರುವ ಬಾಯಿ ನಾನೊಬ್ಬಳೆ.

ಶೈಲಜಾ   ಇಂದು ಸಂಪೂರ್ಣ ವಿಸ್ಮೃತಿಗೆ ಸರಿದುಹೋಗಿರುವ ರಸೂಲನ್ ಬಾಯಿಯ ಉಲ್ಲೇಖವಿಲ್ಲದೆ ಠುಮ್ರಿಯ ಇತಿಹಾಸವಾಗಲಿ ಅಥವಾ ಬನಾರಸ್ ಶೈಲಿಯ ಠುಮ್ರಿಯ ಪ್ರಸ್ತಾಪವಾಗಲಿ ಪೂರ್ಣವಾಗುವುದೇ ಇಲ್ಲ. ಉತ್ತರಪ್ರದೇಶದ ಮಿರ್ಜ಼ಾಪುರದ ಕಚ್ಛ್ವಾ ಬಜ಼ಾರಿನಲ್ಲಿ ೧೯೦೨ರಲ್ಲಿ ರಸೂಲನ್ ಬಾಯಿ ಜನಿಸಿದರು. ಬಡತನದ ಕುಟುಂಬದಲ್ಲಿ ಶ್ರೀಮಂತ ಸಂಗೀತವಿತ್ತು. ತಾಯಿ ಅದಾಲತ್ ಬಾಯಿ ಒಳ್ಳೆಯ ಗಾಯಕಿ. ರಸೂಲನ್‌ಗೆ ಬಾಲ್ಯದಿಂದಲೇ ಅಭಿಜಾತ ರಾಗಗಳ ಮೇಲೆ ಒಳ್ಳೆಯ ಹಿಡಿತವಿತ್ತು. ನೈನಾದೇವಿ ಮಾಡುವ ಸಂದರ್ಶನದಲ್ಲಿ ತನ್ನ ಬಾಲ್ಯ ಮತ್ತು ಸಂಗೀತವನ್ನು ಕುರಿತು ರಸೂಲನ್ ಬಾಯಿ ಹೇಳಿಕೊಳ್ಳುತ್ತಾರೆ. ನನ್ನ ತಾಯಿ,

Rasoolan Bai, ಅವರೆಲ್ಲರೂ ದೇವಿಯರು ಉಳಿದಿರುವ ಬಾಯಿ ನಾನೊಬ್ಬಳೆ. Read More »

Saraswathi Bai C, ಲೇಡಿ ಭಾಗವತರ್ – ಸಿ ಸರಸ್ವತೀ ಬಾಯಿ

ಶೈಲಜಾ ೧೯ನೇ ಶತಮಾನದ ಕೊನೆಯ ದಶಕ, ೨೦ನೇ ಶತಮಾನದ ಆರಂಭದ ದಶಕಗಳು ಮಹಿಳಾಲೋಕದಲ್ಲಿ ಹಲವು ಬಗೆಯ ತಲ್ಲಣಗಳು ಮತ್ತು ಬದಲಾವಣೆಗಳಿಗೆ ಕಾರಣವಾಯಿತು. ಆಗ ಕೆಲವರು ನೆಲೆಯನ್ನು ಕಳೆದುಕೊಂಡರೆ ಮತ್ತೆ ಕೆಲವರು ಹೊಸ ನೆಲೆಗಳಲ್ಲಿ ತಮ್ಮ ಛಾಪು ಮೂಡಿಸಿದರು. ಸಂಪೂರ್ಣ ಪುರುಷರ ಕ್ಷೇತ್ರವೇ ಆಗಿದ್ದ ಹರಿಕಥಾ ಕಾಲಕ್ಷೇಪ ಹೆಣ್ಣೊಬ್ಬಳು ಅಳಿಸಲಾಗದ ಹೆಜ್ಜೆಗುರುತುಗಳನ್ನು ಮೂಡಿಸಿದ್ದು ಇಂಥದ್ದೊಂದು ಬೆಳವಣಿಗೆ. ಆಕೆಯೇ ಸಿ ಸರಸ್ವತೀಬಾಯಿ. ಈ ಬೆಳವಣಿಗೆಗೆ ಗಂಡಸರು ಸ್ಪಂದಿಸಿದ್ದು ಕೂಡ ತುಂಬಾ ವಿಭಿನ್ನವಾಗಿ, ಸಂಕೀರ್ಣವಾಗಿ ಇತ್ತು. ಹರಿಕಥಾಕ್ಷೇತ್ರ ಅಕ್ಷರಶಃ ’ಹರಿ’ಯ ಅಖಾಡಾ.

Saraswathi Bai C, ಲೇಡಿ ಭಾಗವತರ್ – ಸಿ ಸರಸ್ವತೀ ಬಾಯಿ Read More »

Ponnutai Madhurai, ಮರೆತುಬಿಟ್ಟಿರಾ? ನಾನು ಮಧುರೈ ಪೊನ್ನುತಾಯಿ

ಸಂಗ್ರಹ: ಶೈಲಜ   ಮಧುರೆಯ ಪೊನ್ನುತಾಯಿ ಬಹುಶಃ ನಮಗೆ ಲಭ್ಯವಿರುವ ಇತಿಹಾಸದ ಮೊತ್ತ ಮೊದಲ ನಾಗಸ್ವರವಾದಕಿ. ದೇವದಾಸಿ ಕುಟುಂಬಕ್ಕೆ ಸೇರಿದ ಪೊನ್ನುತಾಯಿಯ ಆಯ್ಕೆಯಿಂದಾಗಿ ಇಂದು ಹಲವು ಮಹಿಳೆಯರು ಆ ಕ್ಷೇತ್ರದಲ್ಲಿ ಹೆಸರು ಮಾಡುವುದಕ್ಕೆ ಸಾಧ್ಯವಾಗಿದೆ. ಆದರೆ ಇಂದು ಸಂಪೂರ್ಣವಾಗಿ ವಿಸ್ಮೃತಿಗೆ ಸರಿದಿರುವ ನಾಗಸ್ವರದ ಮೊದಲಗಿತ್ತಿ ಪೊನ್ನುತಾಯಿಯ ಸಣ್ಣ ಸ್ವಗತ ಇಲ್ಲಿದೆ. ಈ ಸ್ವಗತ ಆನಂದವಿಕಟನ್ ಪತ್ರಿಕೆಗೆ ಅವರು ನೀಡಿದ ಸಂದರ್ಶನ ಮತ್ತು ಹಿಂದು ಪತ್ರಿಕೆಯಲ್ಲಿ ವಿ ಬಾಲಸುಬ್ರಹ್ಮಣ್ಯಂ ಅವರು ಪ್ರಕಟಿಸಿದ ಪೊನ್ನುತಾಯಿಯ ಸಂದರ್ಶನವನ್ನು ಆಧರಿಸಿದೆ. ಪೊನ್ನುತಾಯಿಯವರು ೨೦೦೨ರ

Ponnutai Madhurai, ಮರೆತುಬಿಟ್ಟಿರಾ? ನಾನು ಮಧುರೈ ಪೊನ್ನುತಾಯಿ Read More »

ಭಾರತದ ಆರ್ಥಿಕ ಬೇನೆಯ ಹಿಂದಿನ ಕಾರಣ

ಮನಮೋಹನ್ ಸಿಂಗ್ ಅನುವಾದ : ಟಿ ಎಸ್ ವೇಣುಗೋಪಾಲ್ ಭಾರತದ ಆರ್ಥಿಕತೆಯ ಸ್ಥಿತಿ ತುಂಬಾ ಆತಂಕಕಾರಿಯಾಗಿದೆ. ನಾನು ಇದನ್ನು ಒಬ್ಬ ವಿರೋಧ ರಾಜಕೀಯ ಪಕ್ಷದ ಸದಸ್ಯನಾಗಿ ಹೇಳುತ್ತಿಲ್ಲ. ಈ ದೇಶದ ಪ್ರಜೆಯಾಗಿ, ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿ ಹೇಳುತ್ತಿದ್ದೇನೆ. ಈ ವೇಳೆಗೆ ಎಲ್ಲರಿಗೂ ವಾಸ್ತವ ಸ್ಥಿತಿ ಸ್ಪಷ್ಟವಾಗಿದೆ. ನಾಮಿನಲ್ ಜಿಡಿಪಿ ಬೆಳವಣಿಗೆಯ ದರ ೧೫ ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ನಿರುದ್ಯೋಗ ದರ ೪೫ ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ಗ್ರಾಹಕರ ಬಳಕೆಯ ಪ್ರಮಾಣ ನಾಲ್ಕು ದಶಕಗಳಲ್ಲಿ ಎಂದೂ ಇಷ್ಟು

ಭಾರತದ ಆರ್ಥಿಕ ಬೇನೆಯ ಹಿಂದಿನ ಕಾರಣ Read More »

ಏಕತೆಯ ಸಂಸ್ಕೃತಿಯೊಂದೇ ನಮ್ಮನ್ನು ಉಳಿಸಬಲ್ಲದು

[ಇದು ಪ್ರಭಾತ್ ಪಟ್ನಾಯಕ್ ಮಾಡಿದ ಒಂದು ಭಾಷಣದ ಅನುವಾದ. ಎಲ್ಲಿ ಪ್ರಕಟವಾಗಿದೆ ಅನ್ನುವುದು ನೆನಪಿಲ್ಲ.] ಸ್ನೇಹಿತರೇ ಹಾಗೂ ಕಾಮ್ರೇಡುಗಳೇ, ಜಗತ್ತು ಹಾಗೂ ಭಾರತ ಇಂದು ಕೋವಿಡ್-೧೯ ದಾಳಿಗೆ ಸಿಲುಕಿದೆ. ಕೋವಿಡ್-೧೯ ಒಂದು ವಿಚಿತ್ರವಾದ ವೈರಾಣು. ಅದು ತೀವ್ರವಾಗಿ ಹರಡುತ್ತದೆ. ಅದು ಬೇಧಭಾವ ಮಾಡುವುದಿಲ್ಲ. ನೀವು ಯಾರೇ ಆಗಿರಿ, ಎಷ್ಟೇ ಶ್ರೀಮಂತರಾಗಿರಿ, ಯಾವ ಧರ್ಮದವರಾಗಿರಿ ಇದು ಬರಬಹುದು. ಆ ಅರ್ಥದಲ್ಲಿ ಇದು ತಾರತಮ್ಯವಿಲ್ಲದ ವೈರಾಣು. ಇಂತಹ ಒಂದು ವೈರಾಣುವನ್ನು ನಾವು ಕಳೆದ ಒಂದು ಶತಮಾನದಲ್ಲಿ ಕಂಡಿರಲಿಲ್ಲ. ೧೯೧೮ರಲ್ಲಿ ನಮ್ಮನ್ನು

ಏಕತೆಯ ಸಂಸ್ಕೃತಿಯೊಂದೇ ನಮ್ಮನ್ನು ಉಳಿಸಬಲ್ಲದು Read More »