August 2025

Srikantan R K, ಕಲಾ ತಪಸ್ವಿ ಕ್ರಮಿಸಿದ ಹಾದಿ

ಶೈಲಜಾ ಮತ್ತು ವೇಣುಗೋಪಾಲ್   ೧೯೨೦ರಲ್ಲಿ ಜನವರಿ ೧೪ರ ಸಂಕ್ರಾಂತಿ ಹಬ್ಬದಂದು ಕಾವೇರಿ ತೀರದ ರುದ್ರಪಟ್ಟಣದಲ್ಲಿ, ಏಳು ಸ್ವರಗಳು ಸದಾ ಕಿವಿಯ ಮೇಲೆ ಬೀಳುತ್ತಿದ್ದ ಸಂಗೀತಪ್ರಿಯ ಸಂಕೇತಿ ಕುಟುಂಬದಲ್ಲಿ ಜನಿಸಿ ತಾಯಿ ಸಣ್ಣಕ್ಕನ ಸಂಗೀತಮಯ ಜೋಗುಳಗಳನ್ನು ಕೇಳಿಕೊಂಡೇ ಬೆಳೆದವರು ಶ್ರೀಕಂಠನ್.  ಅವರ ಅಜ್ಜ, ತಂದೆ ಹಾಗೂ ಹಿರಿಯ ಸಹೋದರರೆಲ್ಲರೂ ಸಂಗೀತಕ್ಕಾಗಿ ಶ್ರಮಿಸಿದವರೆ.  ಅವರ ತಾಯಿಯ ತಂದೆ ಬೆಟ್ಟದಪುರ ನಾರಾಯಣಸ್ವಾಮಿಯವರು ವೈಣಿಕರು ಹಾಗೂ ಗಾಯಕರು; ಮೂಗೂರು ಸುಬ್ಬಣ್ಣನವರ ಶಿಷ್ಯರು.  ಶ್ರೀಕಂಠನ್ ಅವರ ತಂದೆ ರುದ್ರಪಟ್ಟಣ ಕೃಷ್ಣಶಾಸ್ತ್ರಿಗಳು ಸಂಗೀತಗಾರರು, ಹರಿಕಥಾವಿದ್ವಾಂಸರು, […]

Srikantan R K, ಕಲಾ ತಪಸ್ವಿ ಕ್ರಮಿಸಿದ ಹಾದಿ Read More »

ಆಫ್ರಿಕಾ: ಸ್ವಾತಂತ್ರ್ಯದ ಹುಡುಕಾಟ

  ಆಫ್ರಿಕಾ ಸುದ್ದಿಯಲ್ಲಿದೆ. ಟೋಗೊದಲ್ಲಿ ಯುವಜನ ಸರ್ಕಾರದ ವಿರುದ್ಧ ಬೀದಿಗಿಳಿದಿದ್ದಾರೆ. ಬುರ್ಕಿನಾ ಫಾಸೊ, ಮಾಲಿ, ನೈಜೆರ್‌ನಲ್ಲಿ ಮಿಲಿಟರಿ ದಂಗೆಗಳಾಗಿವೆ. ಹೊಸ ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ದಂಗೆಗಳು ನಡೆಯುತ್ತಿರುವ ಬಹುತೇಕ ದೇಶಗಳು ಹಿಂದೆ ಫ್ರಾನ್ಸ್‌ನ ವಸಾಹತುಗಳಾಗಿದ್ದವು. ಈ ದೇಶಗಳಲ್ಲಿನ ಸಂಪನ್ಮೂಲವನ್ನು ಫ್ರಾನ್ಸ್ ಹಲವು ದಶಕಗಳಿಂದ ನಿರಂತರವಾಗಿ ಲೂಟಿ ಹೊಡೆದು, ಅತ್ಯಂತ ಕ್ರೂರವಾಗಿ ಆಡಳಿತ ನಡೆಸಿದೆ. ಆಫ್ರಿಕಾದವರು ತೀವ್ರವಾದ ಹೋರಾಟ ನಡೆಸಿದ್ದರಿಂದ 1950ರ ಸುಮಾರಿನಲ್ಲಿ ಈ ದೇಶಗಳು ಸ್ವತಂತ್ರವಾದವು. ಆದರೆ, ಬಹುತೇಕ ದೇಶಗಳಿಗೆ ಬರೀ ಹೆಸರಿಗಷ್ಟೇ ಸ್ವಾತಂತ್ರ್ಯ ದೊರೆತಿದೆ. ಸ್ವಾತಂತ್ರ್ಯ

ಆಫ್ರಿಕಾ: ಸ್ವಾತಂತ್ರ್ಯದ ಹುಡುಕಾಟ Read More »