statsvenugopal@gmail.com

ಏಕತೆಯ ಸಂಸ್ಕೃತಿಯೊಂದೇ ನಮ್ಮನ್ನು ಉಳಿಸಬಲ್ಲದು

[ಇದು ಪ್ರಭಾತ್ ಪಟ್ನಾಯಕ್ ಮಾಡಿದ ಒಂದು ಭಾಷಣದ ಅನುವಾದ. ಎಲ್ಲಿ ಪ್ರಕಟವಾಗಿದೆ ಅನ್ನುವುದು ನೆನಪಿಲ್ಲ.] ಸ್ನೇಹಿತರೇ ಹಾಗೂ ಕಾಮ್ರೇಡುಗಳೇ, ಜಗತ್ತು ಹಾಗೂ ಭಾರತ ಇಂದು ಕೋವಿಡ್-೧೯ ದಾಳಿಗೆ ಸಿಲುಕಿದೆ. ಕೋವಿಡ್-೧೯ ಒಂದು ವಿಚಿತ್ರವಾದ ವೈರಾಣು. ಅದು ತೀವ್ರವಾಗಿ ಹರಡುತ್ತದೆ. ಅದು ಬೇಧಭಾವ ಮಾಡುವುದಿಲ್ಲ. ನೀವು ಯಾರೇ ಆಗಿರಿ, ಎಷ್ಟೇ ಶ್ರೀಮಂತರಾಗಿರಿ, ಯಾವ ಧರ್ಮದವರಾಗಿರಿ ಇದು ಬರಬಹುದು. ಆ ಅರ್ಥದಲ್ಲಿ ಇದು ತಾರತಮ್ಯವಿಲ್ಲದ ವೈರಾಣು. ಇಂತಹ ಒಂದು ವೈರಾಣುವನ್ನು ನಾವು ಕಳೆದ ಒಂದು ಶತಮಾನದಲ್ಲಿ ಕಂಡಿರಲಿಲ್ಲ. ೧೯೧೮ರಲ್ಲಿ ನಮ್ಮನ್ನು […]

ಏಕತೆಯ ಸಂಸ್ಕೃತಿಯೊಂದೇ ನಮ್ಮನ್ನು ಉಳಿಸಬಲ್ಲದು Read More »

Srikantan R K, ಕಲಾ ತಪಸ್ವಿ ಕ್ರಮಿಸಿದ ಹಾದಿ

ಶೈಲಜಾ ಮತ್ತು ವೇಣುಗೋಪಾಲ್   ೧೯೨೦ರಲ್ಲಿ ಜನವರಿ ೧೪ರ ಸಂಕ್ರಾಂತಿ ಹಬ್ಬದಂದು ಕಾವೇರಿ ತೀರದ ರುದ್ರಪಟ್ಟಣದಲ್ಲಿ, ಏಳು ಸ್ವರಗಳು ಸದಾ ಕಿವಿಯ ಮೇಲೆ ಬೀಳುತ್ತಿದ್ದ ಸಂಗೀತಪ್ರಿಯ ಸಂಕೇತಿ ಕುಟುಂಬದಲ್ಲಿ ಜನಿಸಿ ತಾಯಿ ಸಣ್ಣಕ್ಕನ ಸಂಗೀತಮಯ ಜೋಗುಳಗಳನ್ನು ಕೇಳಿಕೊಂಡೇ ಬೆಳೆದವರು ಶ್ರೀಕಂಠನ್.  ಅವರ ಅಜ್ಜ, ತಂದೆ ಹಾಗೂ ಹಿರಿಯ ಸಹೋದರರೆಲ್ಲರೂ ಸಂಗೀತಕ್ಕಾಗಿ ಶ್ರಮಿಸಿದವರೆ.  ಅವರ ತಾಯಿಯ ತಂದೆ ಬೆಟ್ಟದಪುರ ನಾರಾಯಣಸ್ವಾಮಿಯವರು ವೈಣಿಕರು ಹಾಗೂ ಗಾಯಕರು; ಮೂಗೂರು ಸುಬ್ಬಣ್ಣನವರ ಶಿಷ್ಯರು.  ಶ್ರೀಕಂಠನ್ ಅವರ ತಂದೆ ರುದ್ರಪಟ್ಟಣ ಕೃಷ್ಣಶಾಸ್ತ್ರಿಗಳು ಸಂಗೀತಗಾರರು, ಹರಿಕಥಾವಿದ್ವಾಂಸರು,

Srikantan R K, ಕಲಾ ತಪಸ್ವಿ ಕ್ರಮಿಸಿದ ಹಾದಿ Read More »

ಆಫ್ರಿಕಾ: ಸ್ವಾತಂತ್ರ್ಯದ ಹುಡುಕಾಟ

  ಆಫ್ರಿಕಾ ಸುದ್ದಿಯಲ್ಲಿದೆ. ಟೋಗೊದಲ್ಲಿ ಯುವಜನ ಸರ್ಕಾರದ ವಿರುದ್ಧ ಬೀದಿಗಿಳಿದಿದ್ದಾರೆ. ಬುರ್ಕಿನಾ ಫಾಸೊ, ಮಾಲಿ, ನೈಜೆರ್‌ನಲ್ಲಿ ಮಿಲಿಟರಿ ದಂಗೆಗಳಾಗಿವೆ. ಹೊಸ ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ದಂಗೆಗಳು ನಡೆಯುತ್ತಿರುವ ಬಹುತೇಕ ದೇಶಗಳು ಹಿಂದೆ ಫ್ರಾನ್ಸ್‌ನ ವಸಾಹತುಗಳಾಗಿದ್ದವು. ಈ ದೇಶಗಳಲ್ಲಿನ ಸಂಪನ್ಮೂಲವನ್ನು ಫ್ರಾನ್ಸ್ ಹಲವು ದಶಕಗಳಿಂದ ನಿರಂತರವಾಗಿ ಲೂಟಿ ಹೊಡೆದು, ಅತ್ಯಂತ ಕ್ರೂರವಾಗಿ ಆಡಳಿತ ನಡೆಸಿದೆ. ಆಫ್ರಿಕಾದವರು ತೀವ್ರವಾದ ಹೋರಾಟ ನಡೆಸಿದ್ದರಿಂದ 1950ರ ಸುಮಾರಿನಲ್ಲಿ ಈ ದೇಶಗಳು ಸ್ವತಂತ್ರವಾದವು. ಆದರೆ, ಬಹುತೇಕ ದೇಶಗಳಿಗೆ ಬರೀ ಹೆಸರಿಗಷ್ಟೇ ಸ್ವಾತಂತ್ರ್ಯ ದೊರೆತಿದೆ. ಸ್ವಾತಂತ್ರ್ಯ

ಆಫ್ರಿಕಾ: ಸ್ವಾತಂತ್ರ್ಯದ ಹುಡುಕಾಟ Read More »

Bhanumathi-ಶ್ರೀಮತಿ ಭಾನುಮತಿ ಅವರೊಡನೆ ಸಂದರ್ಶನ

ಕಡೂರು ವೆಂಕಟಲಕ್ಷಮ್ಮ ಹುಟ್ಟಿದ್ದು ೨೯, ಮೇ ೧೯೦೬. ಮೈಸೂರು ಶೈಲಿಯ ನೃತ್ಯ ಅದರಲ್ಲೂ ಅಭಿನಯಕ್ಕೆ ತುಂಬಾ ಹೆಸರುವಾಸಿಯಾಗಿದ್ದವರು. ಅವರ ನೃತ್ಯವನ್ನು, ಬದುಕನ್ನು ಅರ್ಥಮಾಡಿಕೊಳ್ಳಬೇಕೆಂದು ಅವರನ್ನು ಬಲ್ಲ ಕೆಲವರನ್ನು ಸಂದರ್ಶಿಸಲು ಪ್ರಾರಂಭಿಸಿದ್ದೆವು. ಅದೇಕೊ ಮುಂದುವರಿಯಲೇ ಇಲ್ಲ. ಇತ್ತೀಚೆಗೆ ನಮ್ಮನ್ನು ಅಗಲಿದ ಭಾನುಮತಿ ಮೇಡಂ ಅನ್ನು ಸಂದರ್ಶಿಸಿದ್ದೆವು. ಅವರು ಒಂದು ಕಾರ್ಯಾಗಾರ ನಡೆಸಿಕೊಡಲು ಗಾನಭಾರತಿಗೆ ಬಂದಿದ್ದಾಗ ಈ ಸಂದರ್ಶನ ಸಾಧ್ಯವಾಯಿತು. ಅದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ. ನೃತ್ಯಕಲಾವಿದೆ, ಗುರು ಶ್ರೀಮತಿ ಭಾನುಮತಿ ಅವರೊಡನೆ ಸಂದರ್ಶನ ಸಂದರ್ಶಕರು ಶೈಲಜ ಮತ್ತು ವೇಣುಗೋಪಾಲ್ ಸುಪ್ರಸಿದ್ಧ

Bhanumathi-ಶ್ರೀಮತಿ ಭಾನುಮತಿ ಅವರೊಡನೆ ಸಂದರ್ಶನ Read More »

Shivakumar Sharma- ಸಂತೂರ್‌ನ ಸರದಾರ

ಪಂಡಿತ್ ಶಿವಕುಮಾರ್ ಶರ್ಮ ದೀಪಕ್ ರಾಜ   ಸ್ವಾತಂತ್ರ್ಯೋತ್ತರ ಭಾರತದ ಶಾಸ್ತ್ರೀಯ ಸಂಗೀತದ ತೆರೆಯ ಮೇಲೆ ಪ್ರಖರವಾದ ಉಲ್ಕೆಯಂತೆ ಕಾಣಿಸಿಕೊಂಡದ್ದು ಸಂತೂರ್. ಹೇಳಹೆಸರಿಲ್ಲದಂತೆ, ಜನಮಾನಸದಿಂದ ನೇಪಥ್ಯಕ್ಕೆ ಸರಿದುಹೋಗಿದ್ದ ಈ ವಾದ್ಯ ಕೇವಲ ಇಪ್ಪತ್ತೈದು ವರ್ಷಗಳಲ್ಲಿ ಜನಪ್ರಿಯತೆಯ ತುತ್ತತುದಿಗೇರಿತು. ಈಗ ಬಳಕೆಯಿರುವ ವಾದ್ಯಗಳಲ್ಲಿ ಕಡ್ಡಿಯಿಂದ ನುಡಿಸುವ ವಾದ್ಯವೆಂದರೆ ಬಹುಶಃ ಇದೊಂದೇ ಎನಿಸುತ್ತದೆ. ಜಲತರಂಗ್, ಕಾಷ್ಟತರಂಗ್, ತಬಲಾತರಂಗ್ ಮುಂತಾದಂತಹ vertical impact ವಾದ್ಯಗಳಿಗೆ ಹೋಲಿಸಿದರೆ ಸಂತೂರಿನಲ್ಲಿ ನಾದಮಾಧುರ್ಯದ ಸಾಧ್ಯತೆಗಳು ತುಂಬಾ ಹೆಚ್ಚು. ಚರಿತ್ರೆಯಲ್ಲಿ ಎಲ್ಲೋ ಕಳೆದುಹೋಗಿದ್ದ ಈ ವಾದ್ಯವು ಮತ್ತೆ

Shivakumar Sharma- ಸಂತೂರ್‌ನ ಸರದಾರ Read More »

ಆರ್ಥಿಕತೆಯನ್ನು ಅಲ್ಲಾಡಿಸುತ್ತಿರುವ ಕ್ರಿಪ್ಟೊ ವ್ಯವಹಾರ

ಕ್ರಿಪ್ಟೊ ಗುಳ್ಳೆ ಮತ್ತೆ ಒಡೆದಿದೆ. ಕ್ರಿಪ್ಟೊ ಸಾಮ್ರಾಜ್ಯದ ದೊಡ್ಡ ಸಾಮ್ರಾಟ ಸ್ಯಾಂ ಬ್ಯಾಂಕ್‌ಮನ್ ಫ್ರೀಡ್ ದಿವಾಳಿಯಾಗಿದ್ದಾನೆ. ಕಳೆದ ಎರಡು ವರ್ಷಗಳಲ್ಲಿ ೩೦ ವರ್ಷದ ಸ್ಯಾಂ ೩೨ಬಿಲಿಯನ್ ಡಾಲರ್ ಮೌಲ್ಯದ ಕ್ರಿಪ್ಟೊ ವಿನಿಮಯ ಕಂಪೆನಿ ಎಫ್‌ಟಿಎಕ್ಸ್ ಕಟ್ಟಿದ್ದ. ಶೂನ್ಯದಿಂದ ಕೆಲವೇ ದಿನಗಳಲ್ಲಿ ೩ ಟ್ರಿಲಿಯನ್ ಮಾರುಕಟ್ಟೆಯಾಗಿ ಬೆಳೆದಿದ್ದ ಕ್ರಿಪ್ಟೊ ಜಗತ್ತಿನ ಎರಡನೆಯ ಅತಿ ದೊಡ್ಡ ಶ್ರೀಮಂತ ಎನಿಸಿಕೊಂಡಿದ್ದ. ಬೇರೆ ಕ್ರಿಪ್ಟೋ ಉದ್ದಿಮೆಗಳು ಸಂಕಟದಲ್ಲಿದ್ದಾಗ ನೂರಾರು ಮಿಲಿಯನ್ ಹಣ ಖರ್ಚು ಮಾಡಿದ್ದ. ಈಗ ಮತ್ತೆ ಅದು ಶೂನ್ಯಕ್ಕೆ ಹೋಗಲಿದೆಯೇ ಅನ್ನುವ

ಆರ್ಥಿಕತೆಯನ್ನು ಅಲ್ಲಾಡಿಸುತ್ತಿರುವ ಕ್ರಿಪ್ಟೊ ವ್ಯವಹಾರ Read More »

Parama shivan-ಪರಮಶಿವನ್ ಸಂದರ್ಶನ

ಸಂದರ್ಶಿಸಿದವರು – ಎ ರಾಧೇಶ ಮತ್ತು ವೇಣುಗೋಪಾಲ್ ಟಿ ಎಸ್   ನೀವು ನಿಮ್ಮ ಗುರು ದೇವೇಂದ್ರಪ್ಪನವರ ಬಳಿ ಕಲಿತದ್ದರ ಬಗ್ಗೆ ಹೇಳಿ. ನಿಮಗೆ ಸಂಗೀತದ ಗೀಳು ಹತ್ತಿದ್ದರ ಬಗ್ಗೆ ಹೇಳಿ. ಚಾಮುಂಡೇಶ್ವರಿ ಕಂಪನಿಯಲ್ಲಿ ಬಾಲಕನ ಪಾತ್ರ ಮಾಡ್ತಾ ಇದ್ದೆ. ನಾಲ್ಕೈದು ವರ್ಷ. ಕಂಠ ಚೆನ್ನಾಗಿತ್ತು ಅಂತ ಹಾರ್ಮೋನಿಯಂ ಮೇಷ್ಟ್ರು ಸರಿಗಮ ಶುರುಮಾಡಿದ್ರು. ಸರಳೆ ಜಂಟಿ ಅಲಂಕಾರ ಎಲ್ಲವನ್ನೂ ಪಾಠ ಮಾಡಿ, ಅಕಾರ ಉಕಾರಗಳಲ್ಲಿ ಹಾಡಿಸೋರು. ಅಂಕಾರ ಕಷ್ಟ ಅಂತ ಅಂಕಾರ ಮಾಡಿಸೋರು. ಬಾಯಿ ಮುಚ್ಚಿಕೊಂಡು ಮಾಡಬೇಕಿತ್ತು.

Parama shivan-ಪರಮಶಿವನ್ ಸಂದರ್ಶನ Read More »

Rajan Mishra-ಮೌನವಾದ ಬನಾರಸ್ ಪರಂಪರೆಯ ಚಿನ್ನದ ಧ್ವನಿ.

ಪಂಡಿತ್ ರಾಜನ್ ಮಿಶ್ರ ಇನ್ನಿಲ್ಲ. ಜಗತ್ತನ್ನು ಮೋಡಿ ಮಾಡಿದ ಮಿಶ್ರ ಸಹೋದರರಲ್ಲಿ ಒಬ್ಬರನ್ನು ಕೊರೋನ ಬಲಿ ತೆಗೆದುಕೊಂಡಿದೆ. ಇದು ಸಂಗೀತಕ್ಷೇತ್ರಕ್ಕೆ ಒಂದು ದೊಡ್ಡ ಆಘಾತ. ಬನಾರಸ್ ಘರಾನೆಯ ಅಪ್ರತಿಮ ಸಂಗೀತಗಾರನ್ನು ಸಂಗೀತ ಕ್ಷೇತ್ರ ಕಳೆದುಕೊಂಡಿದೆ. ವಾರಣಾಸಿಯ ಸಂಗೀತದ ಮನೆತನದಲ್ಲಿ ರಾಜನ್ ಮಿಶ್ರ ಜನಿಸಿದ್ದು ೧೯೫೧ರಲ್ಲಿ, ಹನುಮಾನ್ ಜಯಂತಿಯಂದು. ಅವರದ್ದು ಬನಾರಸ್ ಘರಾನೆ. ಖಯಾಲ್ ಗಾಯನ ಅಂದರೆ ಹೀಗಿರಬೇಕು ಎಂದು ವ್ಯಾಖ್ಯಾನಿಸಿದ ಘರಾನೆ ಅದು. ನೇಪಾಳದ ಅಸ್ಥಾನ ವಿದ್ವಾಂಸರಾಗಿದ್ದ ಗಾಯನಾಚಾರ್ಯ ಬಡೇ ರಾಂದಾಸ್ ಮಿಶ್ರ ಅದರ ಪ್ರವರ್ತಕರು. ರಾಂದಾಸ್

Rajan Mishra-ಮೌನವಾದ ಬನಾರಸ್ ಪರಂಪರೆಯ ಚಿನ್ನದ ಧ್ವನಿ. Read More »

ಆ ಹಾಡುಗಳು- ಸತ್ಯಜಿತ್ ರೇ

[ಇಂದು ಸತ್ಯಜಿತ್ ರೇ ಬದುಕಿದ್ದರೆ ಅವರಿಗೆ ನೂರು ವರ್ಷ. ಅತ್ಯಂತ ಪ್ರತಿಭಾವಂತ ಕಲಾವಿದರು. ಭಾರತೀಯ ಸಿನಿಮಾಕ್ಕೆ ಜಗತ್ಪ್ರಸಿದ್ಧಿಯನ್ನು ತಂದುಕೊಟ್ಟವರು. ಹಲವು ಕ್ಷೇತ್ರಗಳಲ್ಲಿ ಪ್ರತಿಭೆಯಿದ್ದವರು. ಅವರ ಜನ್ಮ ಶತಮಾನೋತ್ಸವದ ಈ ಸಂದರ್ಭದಲ್ಲಿ ಹಲವರು ಅವರ ಕೊಡುಗೆಯನ್ನು ಹಲವು ರೀತಿಗಳಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಸಂಗೀತಕ್ಕೆ ಅವರು ನೀಡಿದ ಕೊಡುಗೆ ಕಡಿಮೆಯೇನಲ್ಲ. ಅವರು ತುಂಬಾ ಇಷ್ಟಪಡುತ್ತಿದ್ದ ಕ್ಷೇತ್ರಗಳಲ್ಲಿ ಸಂಗೀತವೂ ಒಂದು. ಅವರಿಗೆ ಅದರ ಬಗ್ಗೆ ಒಂದು ಸ್ಪಷ್ಟ ಕಲ್ಪನೆಯಿತ್ತು. ಮೊದಲಿಗೆ ರವಿಶಂಕರ್, ಅಲಿ ಅಕ್ಬರ್ ಖಾನ್, ಇಂತಹ ಪ್ರಖ್ಯಾತರೊಂದಿಗೆ ಕೆಲಸ ಮಾಡಿದ

ಆ ಹಾಡುಗಳು- ಸತ್ಯಜಿತ್ ರೇ Read More »

ಬಡವರ ಸಂಖ್ಯೆ ಕಡಿಮೆಯಾಗುತ್ತಿದೆಯೇ?

april, 2022 ಇತ್ತೀಚಿನ ದಿನಗಳಲ್ಲಿ ಬಡತನ ಹಾಗೂ ಅಸಮಾನತೆ ತುಂಬಾ ಸುದ್ದಿ ಮಾಡುತ್ತಿವೆ. ದಿನಪತ್ರಿಕೆಗಳಲ್ಲಿ ದೊಡ್ಡದಾಗಿ ಕಾಣಿಸಿಕೊಳ್ಳುತ್ತಿವೆ. ಪತ್ರಿಕೆಗಳು ಸಂಪಾದಕೀಯ ಬರೆಯುತ್ತಿವೆ. ತರಾವರಿ ವಿಶ್ಲೇಷಣೆಗಳು ಪ್ರಕಟಗೊಳ್ಳುತ್ತಿವೆ. ‘ಬಡತನ ನಿರ್ಮೂಲನವಾಗಿದೆ’ ಅಂತ ಒಂದು ಸುದ್ದಿ ಹೇಳಿದರೆ. ‘ಬಡತನದ ಪ್ರಮಾಣದಲ್ಲಿ ಎಂದೂ ಇಲ್ಲದ ಹೆಚ್ಚಳ’ ಅಂತ ಮತ್ತೊಂದು ಸುದ್ದಿ ಹೇಳುತ್ತದೆ. ಒಂದೊಂದು ಅಧ್ಯಯನಗಳು ಒಂದೊಂದು ಬಗೆಯ ತೀರ್ಮಾನಕ್ಕೆ ಬರುತ್ತಿವೆ. ಯಾಕೆ ಇಷ್ಟೊಂದು ವೈಪರಿತ್ಯ? ಕಾರಣ ತುಂಬಾ ಸರಳ. ಅಧ್ಯಯನಕ್ಕೆ ಅವು ಬಳಸಿರುವ ಕ್ರಮಗಳು ಬೇರೆ ಬೇರೆ. ಹಾಗೆಯೇ ಅಂಕಿ ಅಂಶಗಳೂ

ಬಡವರ ಸಂಖ್ಯೆ ಕಡಿಮೆಯಾಗುತ್ತಿದೆಯೇ? Read More »