statsvenugopal@gmail.com

ಮಣಿಪುರ ಹೊತ್ತಿ ಉರಿದಾಗ ಭುಗಿಲೆದ್ದ ಪ್ರಶ್ನೆಗಳು

[ವಾರ್ತಾಭಾರತಿಯಲ್ಲಿ ಪ್ರಕಟವಾದ ಶೈಲಜ ಲೇಖನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.] ಶೈಲಜ ವೇಣುಗೋಪಾಲ್ ಮಣಿಪುರ ಇಂದು ಹೊತ್ತಿ ಉರಿಯುತ್ತಿದೆ. ಕುಕಿ ಮತ್ತು ಮೈತೈ ಸಮುದಾಯಗಳ ನಡುವಿನ ಅಂತರ್ಯುದ್ಧದಲ್ಲಿ ೬೦,೦೦೦ ಜನ ಮನೆ ಮಠ, ಹಾಗೂ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ನಿರಾಶ್ರಿತರು, ನಿರ್ಗತಿಕರು, ಅನಾಥರು ಆಗಿದ್ದಾರೆ. ನೆರೆಹೊರೆಯವರು, ಸರ್ಕಾರ, ಪೋಲಿಸ್, ಸೈನ್ಯ ಮತ್ತು ತಮ್ಮ ಸಹಮಾನವರ ಬಗ್ಗೆ ನಿರಂತರ ಭಯ ಹಾಗೂ ಅಪನಂಬಿಕೆಯಲ್ಲಿ ತೊಳಲಾಡುತ್ತಿದ್ದಾರೆ. ೫೦ ದಿನಗಳಿಂದ ಮಣಿಪುರದಲ್ಲಿ ಅಂತರ್ಜಾಲದ ಸಂಪರ್ಕ ಇಲ್ಲವಾಗಿದೆ. ಹರ ಕೊಲ್ಲಲ್ ಪರ ಕಾಯ್ವನೆ ಎಂಬಂತೆ ತಂದೆಯ […]

ಮಣಿಪುರ ಹೊತ್ತಿ ಉರಿದಾಗ ಭುಗಿಲೆದ್ದ ಪ್ರಶ್ನೆಗಳು Read More »

ಉರುಳುವ ಕಲ್ಲಿನ ನೆನಪಿನ ಸುರುಳಿ

ಡಾ ಎನ್ ಗಾಯತ್ರಿಯವರು ಅನುವಾದಿಸಿರುವ ವೀಣಾ ಮಜುಂದಾರ್ ಅವರ ಆತ್ಮಕಥಾನಕ ಮೆಮೊರಿಸ ಆಫ್ ಅ ರೋಲಿಂಗ್ ಸ್ಟೋನ್ ಕೃತಿಯ ಕನ್ನಡ ಅನುವಾದ ’ಉರುಳುವ ಕಲ್ಲಿನ ನೆನಪಿನ ಸುರುಳಿ’ ಕೃತಿಯ ಪರಿಚಯವನ್ನು ಹಂಚಿಕೊಳ್ಳುತ್ತಿದ್ದೇವೆ. ಇದು ಈ ತಿಂಗಳ ಹೊಸತುವಿನಲ್ಲಿ ಪ್ರಕಟವಾಗಿದೆ. ಸಮಾನತೆ ಮತ್ತು ಪ್ರಜಾಪ್ರಭುತ್ವದ ಅಪರೂಪದ ದಾಖಲೆ ವೀಣಾ ಮಜುಂದಾರ್ ಅವರ ಆತ್ಮಕಥೆ ಖ್ಯಾತ ಸಮಾಜಶಾಸ್ತ್ರಜ್ಞೆ, ಮಹಿಳಾ ಅಧ್ಯಯನದ ಹರಿಕಾರ್ತಿ, ಭಾರತದಲ್ಲಿ ಮಹಿಳಾ ಚಳುವಳಿಯ ದಾಖಲಾತಿದಾರಳು ಮತ್ತು ದಕ್ಷಿಣ ಏಷ್ಯಾದಲ್ಲಿ ಮಹಿಳಾ ಅಧ್ಯಯನದ ಅಜ್ಜಿ, ಮತ್ತೆ ಇನ್ನೂ ಏನೇನೋ

ಉರುಳುವ ಕಲ್ಲಿನ ನೆನಪಿನ ಸುರುಳಿ Read More »

Venkatappa K -ಕುಂಚ ಹಿಡಿದ ಕೈ ಮೀಟಿದ ತಂತಿ

[ಕೆ ವೆಂಕಟಪ್ಪನವರು ಹೆಸರಾಂತ ಕಲಾವಿದರು, ಶಿಲ್ಪಕಲಾವಿದರು. ಅವರಿಗೆ ಅಷ್ಟೇ ಪರಿಶ್ರಮ ಸಂಗೀತದಲ್ಲಿಯೂ ಇತ್ತು. ವೀಣೆಯನ್ನು ಶೇಷಣ್ಣನವರ ಬಳಿ ಕಲಿತಿದ್ದರು. ಶಾಸ್ತ್ರದ ತಿಳುವಳಿಕೆಯೂ ಇತ್ತು. ಅವರ ಸಂಗೀತದ ಆಯಾಮದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಅವರು ವೇದಿಕೆ ಕಲಾವಿದರಾಗಲು ಕಲಿತವರಲ್ಲ. ಆತ್ಮಸಂತೋಷಕ್ಕಾಗಿ ನುಡಿಸಿಕೊಳ್ಳುತ್ತಿದ್ದವರು. ವಿ ಸೀತಾರಾಮಯ್ಯ, ಎಸ್ ಕೆ ರಾಮಚಂದ್ರರಾಯರು ಅವರ ಸಂಗೀತದ ಬಗ್ಗೆ ಬರೆದಿದ್ದಾರೆ. ಅವರನ್ನು ನಿಕಟವಾಗಿ ಬಲ್ಲ ಬಿ ಜಿ ಎಲ್ ಸ್ವಾಮಿಯವರು ಒಂದು ಸೊಗಸಾದ ಲೇಖನವನ್ನು ಬರೆದಿದ್ದಾರೆ. ಜೊತೆಗೆ ವೆಂಕಟಪ್ಪನವರ ಡೈರಿಯು ವೆಂಕಟಪ್ಪ: ಸಮಕಾಲೀನ ಪುನರವಲೋಕನ

Venkatappa K -ಕುಂಚ ಹಿಡಿದ ಕೈ ಮೀಟಿದ ತಂತಿ Read More »

Mahalakshmi H S -ಮರೆಯಲ್ಲೇ ಉಳಿದು, ನಮ್ಮಿಂದ ದೂರವಾದ ಪ್ರತಿಭೆ

ವಿದುಷಿ ಎಚ್ ಎಸ್ ಮಹಾಲಕ್ಷ್ಮಿಯವರು ಇಂದು ನಮ್ಮೊಂದಿಗಿಲ್ಲ. ಅತ್ಯಂತ ಹಿರಿಯ ಕಲಾವಿದೆ. ಇಂದೋ ನಾಳೆಯೋ ಬಿದ್ದು ಹೋಗುತ್ತದೇನೋ ಅನ್ನುವಂತಿದ್ದ ಒಂದು ಪುಟ್ಟ ಮನೆಯಲ್ಲಿ ಬಹುಕಾಲ ಜೀವನನಡೆಸಿದರು. ಅಲ್ಲಿಂದ ಬೇರೆಡೆ ಹೋಗುವುದಕ್ಕೂ ಅವರ ಮನಸ್ಸು ಒಪ್ಪುತ್ತಿರಲಿಲ್ಲ. ಅದಕ್ಕೇ ಒಗ್ಗಿ ಹೋಗಿದ್ದರು. ಅದು ಅವರ ಮನಸ್ಥಿತಿಯ ದ್ಯೋತಕವೂ ಹೌದು. ಆ ಮನೆಯಲ್ಲೇ ಅವರ ಸಂಗೀತಜೀವನ ಮೂಡಿದ್ದು. ಅದರೊಂದಿಗೆ ಅವರ ಬದುಕಿನ ಸಾವಿರಾರು ನೆನಪುಗಳು ತೆಕ್ಕೆ ಹಾಕಿಕೊಂಡಿದ್ದವು. ಅದನ್ನು ಕಡಿದುಕೊಳ್ಳಲು ಅವರಿಗೆ ಇಷ್ಟವಿರಲಿಲ್ಲ. ಹಾಗಾಗಿ ಆ ಮನೆಯನ್ನು ಬಿಡಲು ಹಿಂದೇಟು ಹಾಕುತ್ತಿದ್ದರು.

Mahalakshmi H S -ಮರೆಯಲ್ಲೇ ಉಳಿದು, ನಮ್ಮಿಂದ ದೂರವಾದ ಪ್ರತಿಭೆ Read More »

ನನ್ನ ತಂದೆಯ ರಸಯಾತ್ರೆಯ ಅಂತ್ಯ

[ಮಲ್ಲಿಕಾರ್ಜುನ ಮನ್ಸೂರು ಬರೆದ ನನ್ನ ರಸಯಾತ್ರೆ ಪುಸ್ತಕವನ್ನು ತಂದೆ ನಿಲ್ಲಿಸಿದ ಕಡೆಯಿಂದ ರಾಜಶೇಖರ ಮನ್ಸೂರರು ಬರೆದಿದ್ದಾರೆ. ಅದರ ಅನುವಾದವನ್ನು ಈ ಹಿಂದೆ ಮಾಡಿದ್ದೆವು. ಈ ಸಂದರ್ಭದಲ್ಲಿ ಅದನ್ನು ಮತ್ತೆ ನೆನಪು ಮಾಡಿಕೊಳ್ಳುತ್ತಿದ್ದೇವೆ.] ೧೯೮೧ರಲ್ಲಿ ನನ್ನ ತಂದೆ ತಮ್ಮ ರಸಯಾತ್ರೆಯ ನಿರೂಪಣೆಯನ್ನು ನಿಲ್ಲಿಸಿದ್ದರು. ಆಮೇಲೂ ಅವರು ಹನ್ನೊಂದು ವರ್ಷಗಳು ನಮ್ಮೊಡನಿದ್ದರು. ಅವರು ನಮ್ಮನ್ನಗಲಿದ್ದು ೧೯೯೨ರ ಸೆಪ್ಟೆಂಬರ್ ೧೨ರಂದು. ಅವರ ರಸಯಾತ್ರೆಯಲ್ಲಿ ಅವರ ಸುಖದುಃಖಗಳಿಗೆ ಹೆಗಲುಕೊಟ್ಟು ಅಚಲವಾಗಿ ನಿಂತವಳು ನನ್ನವ್ವ ಗಂಗಮ್ಮ. ಅಮ್ಮ ೧೯೮೩ರಲ್ಲಿ ತೀರಿಹೋದಳು. ಅದು ಅಪ್ಪನಿಗೆ ಸಹಿಸಲಾರದ

ನನ್ನ ತಂದೆಯ ರಸಯಾತ್ರೆಯ ಅಂತ್ಯ Read More »

Abhijit sen-ಜನಪರ ಕಾಳಜಿಯ ಅರ್ಥಶಾಸ್ತ್ರಜ್ಞ ಇನ್ನಿಲ್ಲ

’ಕೃಷಿ ಉತ್ಪನ್ನಗಳು, ಕನಿಷ್ಠ ಬೆಂಬಲ ಬೆಲೆ ಲೆಕ್ಕ ಹಾಕುವಾಗ ಕೇವಲ ರೈತರು ನೇರವಾಗಿ ಮಾಡುವ ಖರ್ಚನ್ನಷ್ಟೇ ಅಲ್ಲ, ಅವರ ಕುಟುಂಬದ ಶ್ರಮವನ್ನು, ಬರಬಹುದಾಗಿದ್ದ ಬಾಡಿಗೆ, ಬಡ್ಡಿಯನ್ನೂ ಗಣನೆಗೆ ತೆಗೆದುಕೊಳ್ಳಬೇಕು.’ ಎಂದು ಪ್ರಖ್ಯಾತ ಗ್ರಾಮೀಣ ಅರ್ಥಶಾಸ್ತ್ರಜ್ಞ ಅಭಿಜಿತ್ ಸೇನ್ ವಾದಿಸಿದ್ದರು. ಇದು ಸ್ವಾಮಿನಾಥನ್ ವರದಿಯ ಶಿಪಾರಸ್ಸಿನಲ್ಲಿ ಸ್ವಲ್ಪ ಮಾರ್ಪಾಡಿನೊಂದಿಗೆ ಸೇರ್ಪಡೆಯಾಯಿತು. ಸಿ೨ ವಿಧಾನ ಎಂದು ಕರೆಯುವ ಈ ಕ್ರಮ ಮುಂದೆ ಕೃಷಿಕರ ಪ್ರಮುಖ ಬೇಡಿಕೆಯಾಯಿತು. ಸಾರ್ವತ್ರಿಕ ಪಡಿತರ ಪದ್ಧತಿಯನ್ನು ಬಲವಾಗಿ ಪ್ರತಿಪಾದಿಸಿದರು. ದೇಶಾದ್ಯಂತ ಅವಶ್ಯಕತೆ ಇರುವ ಎಲ್ಲರಿಗೂ ಗೋಧಿ

Abhijit sen-ಜನಪರ ಕಾಳಜಿಯ ಅರ್ಥಶಾಸ್ತ್ರಜ್ಞ ಇನ್ನಿಲ್ಲ Read More »

ಬ್ಯಾಂಕಿಂಗ್ ಕ್ಷೇತ್ರದ ಸಂಶೋಧನೆಗೆ ಸಂದ ನೋಬೆಲ್

ಈ ಬಾರಿಯ ಅರ್ಥಶಾಸ್ತ್ರದ ನೋಬೆಲ್ ಬಹುಮಾನ ಬ್ಯಾಂಕ್ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದ ವಾಷಿಂಗ್‌ಟನ್ ಬ್ರೂಕಿಂಗ್ಸ್ ಸಂಸ್ಥೆಯಲ್ಲಿ ಕೆಲಸಮಾಡುತ್ತಿರುವ ಡಾ ಬೆನ್ ಶಾಲೋಮ್ ಬರ್ನಾಂಕಿ, ಶಿಕಾಗೊ ವಿಶ್ವವಿದ್ಯಾನಿಲಯದ ಪ್ರೊ. ಡಗ್ಲಸ್ ವಾರೆನ್ ಡೈಮಂಡ್, ಸೆಂಟ್ ಲೂಯಿಸ್‌ನ ವಾಷಿಂಗ್‌ಟನ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾದ ಫಿಲಿಪ್ ಎಚ್ ಡಿವಿಗ್ ಇವರಿಗೆ ಲಭಿಸಿದೆ. ಇಂದು ನಮ್ಮನ್ನು ಕಾಡುತ್ತಿರುವ ಹಣಕಾಸು ಬಿಕ್ಕಟ್ಟು ಇದಕ್ಕೆ ಪ್ರೇರಣೆಯಾಗಿರಬಹುದು. ಬಹುಮಾನ ಪಡೆದವರಲ್ಲಿ ಬೆನ್ ಬರ್ನಾಂಕಿಯವರ ಸಂಶೋಧನೆ ೧೯೩೦ರ ಮಹಾನ್ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿದ್ದು. ಅದು ಮಹಾನ್ ಆರ್ಥಿಕ ಬಿಕ್ಕಟ್ಟನ್ನು

ಬ್ಯಾಂಕಿಂಗ್ ಕ್ಷೇತ್ರದ ಸಂಶೋಧನೆಗೆ ಸಂದ ನೋಬೆಲ್ Read More »

ಬೃಹತ್ ಉದ್ಯಮಗಳ ಕರಾಳ ಮುಖ

ಡರನ್ ಅಸಿಮೊಗ್ಲು [ಡರನ್ ಅಸಿಮೊಗ್ಲು ಎಂಐಟಿಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರು. ಅರ್ಥಶಾಸ್ತ್ರದಲ್ಲಿ ತುಂಬಾ ದೊಡ್ಡ ಹೆಸರು. ವೈ ನೇಷನ್ಸ್ ಫೇಲ್ ಪುಸ್ತಕದಿಂದ ಪ್ರಖ್ಯಾತರಾದವರು. ಈ ಬಾರಿ ಅವರಿಗೆ ನೋಬೆಲ್ ಬಹುಮಾನ ಬರಬಹುದೆಂಬ ನಿರೀಕ್ಷೆ ಇತ್ತು. ಅವರು ಪ್ರಾಜೆಕ್ಟ್ ಸಿಂಡಿಕೇಟಿನಲ್ಲಿ ಬರೆದಿರುವ ಲೇಖನ ’ವೈ ಬಿಸಿನೆಸಸ್ ಮಿಸ್ ಬಿಹೇವ್’ ಲೇಖನ ಓದಬೇಕಾದ ಲೇಖನವೆನಿಸಿತು. ಅದನ್ನು ಸಂಗ್ರಹಿಸಿ ಪೋಸ್ಟ್ ಮಾಡುತ್ತಿದ್ದೇನೆ.] ಯಶಸ್ವಿ ಉದ್ಯಮಿಗಳು ನಾಯಕರೋ ಇಲ್ಲ, ಖಳನಾಯಕರೋ? ಕಥೆ, ಕಾದಂಬರಿಗಳಲ್ಲಿ ಎರಡಕ್ಕೂ ಉದಾಹರಣೆಗಳು ಹೇರಳವಾಗಿ ಸಿಗುತ್ತವೆ. ಸಮಾಜ ವಿಜ್ಞಾನದಲ್ಲೂ ವಿಭಿನ್ನ ಅಭಿಪ್ರಾಯಗಳಿವೆ.

ಬೃಹತ್ ಉದ್ಯಮಗಳ ಕರಾಳ ಮುಖ Read More »

ಗುಲಾಬಿ ನೋಟಿಗೆ ಬೈ ಬೈ

ಎರಡು ಸಾವಿರ ರೂಪಾಯಿ ನೋಟುಗಳು ಹಲವು ದಿನಗಳಿಂದಲೇ ಅಪರೂಪವಾಗಿತ್ತು, ಎಟಿಎಂಗಳಲ್ಲೂ ಸಿಗುತ್ತಿರಲಿಲ್ಲ. ಈಗ ಭಾರತೀಯ ರಿಸರ್ವ್ ಬ್ಯಾಂಕ್ ಅದನ್ನು ಹಿಂತೆಗೆದುಕೊಂಡಿದೆ. ತನ್ನ ’ಸ್ವಚ್ಛ ನೋಟು ನೀತಿ’ಗೆ ಅನುಗುಣವಾಗಿ ಅಂದರೆ ನೋಟುಗಳನ್ನು ಸ್ವಚ್ಛವಾಗಿ ಹಾಗೂ ಚಲಾವಣೆಯಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ಜಾರಿಯಾದ ನೀತಿಗೆ ಅನುಗುಣವಾಗಿ ೨೦೦೦ ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯಲು ನಿರ್ಧರಿಸಿದೆ. ಆದರೆ ೨೦೦೦ ರೂಪಾಯಿ ಮುಖಬೆಲೆಯ ನೋಟುಗಳು ಕಾನೂನುಬದ್ಧ ನೋಟಾಗಿಯೇ ಮುಂದುವರಿಯುತ್ತದೆ. ನೋಟುಗಳ ವಾಪಸಾತಿಯನ್ನು ಒಂದು ನಿರ್ದಿಷ್ಟ ಆವಧಿಯಲ್ಲಿ ಪೂರ್ಣಗೊಳಿಸಲು ಮತ್ತು ಇದಕ್ಕಾಗಿ

ಗುಲಾಬಿ ನೋಟಿಗೆ ಬೈ ಬೈ Read More »

Karanth B V-ಸಂಗೀತವೆನ್ನುವುದು ವಾಚಿಕದ ಒಂದು ಭಾಗ

[ಬಿ ವಿ ಕಾರಂತರು ರಂಗ ಸಂಗೀತದ ಬಗ್ಗೆ ಅಲ್ಲಿ ಇಲ್ಲಿ ಮಾತನಾಡಿದ್ದನ್ನು ಇಲ್ಲಿ ಸಂಗ್ರಹಿಸಿದ್ದೇವೆ. ನಿಮ್ಮ ಬಳಿ ಇದಕ್ಕೆ ಸಂಬಂಧಿಸಿದಂತೆ ಕಾರಂತರ ಇನ್ಯಾವುದಾದರು ಸಂದರ್ಶನ ಅಥವಾ ಲೇಖನ ಇದ್ದರೆ ದಯಮಾಡಿ ಹಂಚಿಕೊಳ್ಳಿ. ಇದರ ಸಂಕ್ಷಿಪ್ತ ಭಾಗ ಈ ತಿಂಗಳ ತಿಲ್ಲಾನ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ.] -ಶೈಲಜಾ ಆಧುನಿಕ ರಂಗಭೂಮಿಯಲ್ಲಿ ಸಂಗೀತ ಮತ್ತು ಹಾಡುಗಳ ಬಳಕೆ ಹೆಚ್ಚುಕಡಿಮೆ ಮರೆಯಾಗಿ ಹೋಗಿದ್ದ ಹೊತ್ತಿನಲ್ಲಿ ಬಿ ವಿ ಕಾರಂತರು ಹಾಡು ಹಾಗೂ ಸಂಗೀತವನ್ನು ಮತ್ತೆ ರಂಗಕ್ಕೆ ತಂದರು ಆದರೆ ಸಂಪೂರ್ಣವಾಗಿ ಬೇರೆ ರೀತಿಯಲ್ಲಿ.

Karanth B V-ಸಂಗೀತವೆನ್ನುವುದು ವಾಚಿಕದ ಒಂದು ಭಾಗ Read More »