statsvenugopal@gmail.com

Bhimasena Joshi- ಸಂಗೀತವನ್ನರಸಿ ಹೊರಟ ಭೀಮಸೇನ

ಸಂಗೀತವನ್ನರಸಿ ಹೊರಟ ಭೀಮಸೇನ ಶೈಲಜ ಮತ್ತು ವೇಣುಗೋಪಾಲ್ ಸಾಮಾನ್ಯವಾಗಿ ’ಪ್ರಯಾಣ’ ಎನ್ನುವುದು ಹುಡುಕಾಟಕ್ಕೆ, ಆತ್ಮಸಾಕ್ಷಾತ್ಕಾರಕ್ಕೆ ಬಳಸುವ ಒಂದು ಪ್ರತಿಮೆ. ಭೀಮಸೇನರಲ್ಲಿ ಪ್ರಯಾಣ ಎನ್ನುವುದು ಅಕ್ಷರಶಃ ಸಂಗೀತದ ಸಾಕ್ಷಾತ್ಕಾರವೇ ಆಗಿದೆ. ಇವರು ಹುಟ್ಟಿದ್ದು ೧೯೨೨ರ ಫೆಬ್ರುವರಿಯಲ್ಲಿ. ಅವರದ್ದು ಸಂಗೀತದ ಮನೆತನವಲ್ಲ. ಅಧ್ಯಯನಶೀಲತೆ ಮತ್ತು ವಿದ್ವತ್ತಿಗೆ ಹೆಸರಾದ ಮನೆ. ತಂದೆ ಗುರುರಾಜ ಜೋಶಿ ಬಹುಭಾಷಾ ಪಂಡಿತರು ಮತ್ತು ಶಿಕ್ಷಣತಜ್ಞರು. ಚಿಕ್ಕಪ್ಪ ಗೋವಿಂದಾಚಾರ್ಯರು ಪ್ರಖ್ಯಾತ ಮನೋಹರ ಗ್ರಂಥಮಾಲೆಯ ಸಂಸ್ಥಾಪಕರು. ಎಳೆಯ ಕಿವಿಗಳಿಗೆ ಸ್ವರಗಳು ಬಿದ್ದದ್ದು ಅಮ್ಮ ಹಾಡುತ್ತಿದ್ದ ದೇವರನಾಮಗಳಿಂದ. ಮನೆಯ ಬಳಿಯ […]

Bhimasena Joshi- ಸಂಗೀತವನ್ನರಸಿ ಹೊರಟ ಭೀಮಸೇನ Read More »

ಯುರೋಪ್ ಇಂದು ಸಂಕಷ್ಟದಲ್ಲಿದೆ.

  ಟಿ ಎಸ್ ವೇಣುಗೋಪಾಲ್ ಯುರೋಪ್ ಇಂದು ಸಂಕಷ್ಟದಲ್ಲಿದೆ. ಈ ಪ್ರಯುಕ್ತ ಬ್ರಿಟನ್ನಿನ ಲಿಜ್‌ ಟ್ರಸ್‌ ನೇತೃತ್ವದ ಸರ್ಕಾರವು ಮಿನಿ ಬಜೆಟ್ ಪ್ರಕಟಿಸಿದೆ. ವಿವಾದಕ್ಕೂ ಕಾರಣವಾಗಿದೆ. ಶ್ರೀಮಂತರ ಮೇಲಿನ ತೆರಿಗೆಯಲ್ಲಿ ಕಡಿತ ಮಾಡಲಾಗಿದೆ. ತೆರಿಗೆ ಕಡಿಮೆ ಮಾಡುವುದರಿಂದ ಶ್ರೀಮಂತರು ಹೂಡಿಕೆ ಹೆಚ್ಚಿಸುತ್ತಾರೆ, ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ ಎನ್ನುವುದು ಅದರ ಹಿಂದಿನ ತರ್ಕ. ಆದರೆ ತೆರಿಗೆ ಕಡಿತದಿಂದ ಆರ್ಥಿಕ ಪ್ರಗತಿ ಸಾಧಿಸಬಹುದೆಂಬ ಕಲ್ಪನೆಯೇ ಒಂದು ಮಿಥ್ಯೆ ಎಂಬುದನ್ನು ಪಾಲ್ ಕ್ರುಗ್ಮನ್ ಅಂತಹ ಅರ್ಥಶಾಸ್ತ್ರಜ್ಞರು ತೋರಿಸಿದ್ದಾರೆ. ಬ್ರಿಟನ್ನಿನ ಈ ಕ್ರಮಕ್ಕೆ

ಯುರೋಪ್ ಇಂದು ಸಂಕಷ್ಟದಲ್ಲಿದೆ. Read More »

ದೋಸೆ ಅರ್ಥಶಾಸ್ತ್ರ ಮತ್ತು ಹಣದುಬ್ಬರ

ಟಿ ಎಸ್ ವೇಣುಗೋಪಾಲ್   ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದಾಗ ಆರ್‌ಬಿಐ ಗವರ್ನರ್ ಆಗಿದ್ದ ಎಂ.ನರಸಿಂಹಂ ಅವರ ಮನೆಗೆ ಹೋಗಿದ್ದರಂತೆ. ಸ್ವತಃ ಆರ್ಥಿಕ ತಜ್ಞರಾಗಿದ್ದ ನರಸಿಂಹಂ, ಸಿಂಗ್ ಅವರನ್ನು ಉದ್ದೇಶಿಸಿ ‘ನೀವು ಹಣದುಬ್ಬರ ಕಡಿಮೆಯಾಗಿದೆ ಅನ್ನುತ್ತೀರಿ. ಆದರೆ ನಾನು ತರಕಾರಿ ಕೊಳ್ಳುವಾಗ ಮೊದಲಿಗಿಂತ ಹೆಚ್ಚು ಹಣ ಕೊಡುತ್ತಿದ್ದೇನೆ’ ಎಂದು ಕೇಳಿದರಂತೆ. ಅದಕ್ಕೆ ಸಿಂಗ್, ‘ಹೌದು, ನನ್ನ ಹೆಂಡತಿಯೂ ಇದೇ ಪ್ರಶ್ನೆ ಕೇಳುತ್ತಾಳೆ. ನನಗೆ ವಿವರಿಸೋದಕ್ಕೆ ಕಷ್ಟವಾಗುತ್ತೆ ಅಂತ ಅವಳಿಗೆ ಹೇಳಿದೆ’ ಅಂದರಂತೆ. ಇಬ್ಬರೂ ತಜ್ಞರು. ಅವರೇ

ದೋಸೆ ಅರ್ಥಶಾಸ್ತ್ರ ಮತ್ತು ಹಣದುಬ್ಬರ Read More »

ದೇಶದ ಆರ್ಥಿಕತೆಗೆ ಬುನಾದಿ ಹಾಕಿಕೊಟ್ಟ ಆರ್ಥಿಕ ಪ್ರಯೋಗ

ಟಿ ಎಸ್ ವೇಣುಗೋಪಾಲ್ ಇತ್ತೀಚಿನ ದಿನಗಳಲ್ಲಿ ಭಾರತ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೂ ನೆಹರೂವನ್ನೇ ಕಾರಣ ಮಾಡೋದು ಕೆಲವರಿಗೆ ಗೀಳಾಗಿದೆ. ದೇಶದ ವಿಭಜನೆ, ಚೀನಾ, ಪಾಕಿಸ್ತಾನ, ಕೃಷಿ, ಬಡತನ, ಶಿಕ್ಷಣ ಯಾವುದೇ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಯಿರಲಿ ಅದಕ್ಕೆ ನೆಹರೂವನ್ನು ಹೊಣೆ ಮಾಡುವುದು ಸಾಮಾನ್ಯವಾಗಿದೆ. ಅವರು ಸತ್ತು ೬೦ ವರ್ಷವಾದರೂ ಸಂತೋಷವಾಗಿ ಬಯ್ಯುತ್ತಿರುತ್ತೇವೆ. ಇಂದಿನ ಆರ್ಥಿಕ ಬಿಕ್ಕಟ್ಟಿಗೂ ನೆಹರೂ ಆಗ ಅನುಸರಿಸಿದ ಮಾದರಿಯೇ ಕಾರಣ ಅನ್ನುವುದನ್ನು ಕೇಳಿದ್ದೇವೆ.   ಭಾರತ ಅನುಸರಿಸಿದ ಆರ್ಥಿಕ ಮಾದರಿಯನ್ನು ಸಾಮಾನ್ಯವಾಗಿ ನೆಹರೂ-ಮಹಾಲನೋಬಿಸ್ ಮಾದರಿ ಅಂತ

ದೇಶದ ಆರ್ಥಿಕತೆಗೆ ಬುನಾದಿ ಹಾಕಿಕೊಟ್ಟ ಆರ್ಥಿಕ ಪ್ರಯೋಗ Read More »

25ರ ನೋಬೆಲ್

[ಈ ವರ್ಷದ ಅರ್ಥಶಾಸ್ತ್ರದ ನೋಬೆಲ್ ಡೆರನ್ ಅಸಿಮೊಗ್ಲು, ಜೇಮ್ಸ್ ಎ ರಾಬಿನ್ಸನ್, ಹಾಗೂ ಸಿಮನ್ ಜಾನ್ಸನ್ ಅವರಿಗೆ ಲಭಿಸಿದೆ. ಡೆರನ್ ಅಸಿಮೊಗ್ಲು ಇಸ್ತಾಂಬುಲ್‌ನಲ್ಲಿ ಜನಿಸಿದರು. ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್‌ನಲ್ಲಿ ಪಿಎಚ್‌ಡಿ ಮಾಡಿದರು. ನಂತರ ಈಗ ಎಂಐಟಿಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಜೇಮ್ಸ್ ಎ ರಾಬಿನ್ಸನ್ ಯೇಲ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಮಾಡಿದರು. ಸದ್ಯ ಷಿಕ್ಯಾಗೋ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಸಿಮನ್ ಜಾನ್ಸನ್ ಎಂಐಟಿಯಲ್ಲಿ ಪಿಎಚ್‌ಡಿ ಮಾಡಿ, ಅಲ್ಲೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.] ಯಾಕೆ ಕೆಲ ದೇಶಗಳು

25ರ ನೋಬೆಲ್ Read More »

ಕ್ಷೇತ್ರ ಮರುವಿಂಗಡಣೆಯ ಚರ್ಚೆ: ಜನ ನಿಭಿಡ ಉತ್ತರ ವರ್ಸಸ್ ಜನ ಕಡಿಮೆ ಇರುವ ದಕ್ಷಿಣಕ್ಕೆ ಪರ್ಯಾಯಗಳಿವೆ

ಮೂಲ: ಅಂಜಿಶ್ನು ದಾಸ್ ಇಂಡಿಯನ್ ಎಕ್ಸ್‌ಪ್ರೆಸ್, ಮಾರ್ಚಿ ೧೮, ೨೦೨೫   ಈಗ ಕ್ಷೇತ್ರ ಮರುವಿಂಗಡನೆ ಕುರಿತ ಚರ್ಚೆ ತೀವ್ರವಾಗುತ್ತಿದೆ. ೨೦೨೬ರೊಳಗೆ ಅದು ನಿರ್ಧಾರವಾಗಬೇಕು. ಲೋಕಸಭೆಯಲ್ಲಿ ಸ್ಥಾನಗಳನ್ನು ನಿಗದಿಪಡಿಸಲು ಕೇವಲ ಜನಸಂಖ್ಯೆಯನ್ನು ಆಧಾರವಾಗಿ ಇಟ್ಟುಕೊಳ್ಳಬಾರದು ಎಂದು ಬಹುತೇಕ ಎಲ್ಲಾ ವಿರೋಧ ಪಕ್ಷಗಳು ಒಪ್ಪಿಕೊಂಡಿವೆ. ಯಾಕೆಂದರೆ ಇದರಿಂದ ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಿರುವ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ಇದಕ್ಕೆ ಹಲವು ಪರ್ಯಾಯ ಕ್ರಮಗಳನ್ನು ಹಲವು ವರ್ಷಗಳಿಂದ ಸೂಚಿಸುತ್ತಾ ಬರಲಾಗಿದೆ. ಫಲವತ್ತತೆಯ ದರವನ್ನು ಕ್ಷೇತ್ರಗಳ ಸಂಖ್ಯೆಯನ್ನು ನಿರ್ಧರಿಸುವುದಕ್ಕೆ ಪರಿಗಣಿಸಬೇಕು ಅನ್ನುವುದರಿಂದ ಮೊದಲುಗೊಂಡು ರಾಜ್ಯಸಭಾದ

ಕ್ಷೇತ್ರ ಮರುವಿಂಗಡಣೆಯ ಚರ್ಚೆ: ಜನ ನಿಭಿಡ ಉತ್ತರ ವರ್ಸಸ್ ಜನ ಕಡಿಮೆ ಇರುವ ದಕ್ಷಿಣಕ್ಕೆ ಪರ್ಯಾಯಗಳಿವೆ Read More »

Miriam Makeba-ಬದುಕೇ ಹಾಡಾದ ಮೀರಿಯಂ ಮಕೇಬಾ,

ಶೈಲಜಾ ಹಾಡು-ನೃತ್ಯದೊಡನೆ ಆಫ್ರಿಕಾದವರಿಗೆ ಇರುವ ಸಂಬಂಧವೇ ಬೇರೆ ರೀತಿಯದ್ದು. ಅವರಲ್ಲಿ ಅದು ಒಡಲು ಉಸಿರಿನ ಸಂಬಂಧ. ಜೀವದೊಳಗಿರುವ ಹಸಿವು, ಬಾಯರಿಕೆ, ಸುಸ್ತು, ಸಂಕಟ, ಪ್ರೀತಿ, ಪ್ರಣಯದಂತೆ ಹಾಡು-ನೃತ್ಯಗಳು ಕೂಡ ಅವರ ಮೂಲಭೂತ ಪ್ರವೃತ್ತಿ. ಹೀಗೆ ಹಾಡೇ ಒಡಲಾಗಿದ್ದ ದಕ್ಷಿಣ ಆಫ್ರಿಕಾದ ಇತಿಹಾಸದಲ್ಲಿ ಮಕೇಬಾ ಬಹು ಮುಖ್ಯ ವ್ಯಕ್ತಿ. ಅವಳು ಮಾಮ್ಮಾ ಆಫ್ರಿಕಾ. ಅವಳ ಬದುಕು ಸಂಗೀತವಲ್ಲದೆ ಮತ್ತೇನಲ್ಲ. ಅವಳು ತನ್ನ ಹಾಡಿನ ಮೂಲಕವೇ ಇಡೀ ಆಫ್ರಿಕೆಯ ಬದುಕು, ಬವಣೆ, ದಬ್ಬಾಳಿಕೆ, ಹಿಂಸೆ, ರಾಜಕಾರಣ ಎಲ್ಲವನ್ನೂ ಬಿಚ್ಚಿಡುತ್ತಾ ಹೋಗುತ್ತಾಳೆ.

Miriam Makeba-ಬದುಕೇ ಹಾಡಾದ ಮೀರಿಯಂ ಮಕೇಬಾ, Read More »

ಹಣದುಬ್ಬರ ಏನು, ಯಾಕೆ, ಹೇಗೆ?

ಟಿ ಎಸ್ ವೇಣುಗೋಪಾಲ್ ಹಣದುಬ್ಬರ ಮತ್ತೆ ಮತ್ತೆ ಚರ್ಚೆಯಾಗುತ್ತಿರುವ ವಿಷಯ. ಸಾಮಾನ್ಯವಾಗಿ ಬೆಲೆಗಳ ಹೆಚ್ಚಳವನ್ನು ಹಣದುಬ್ಬರ ಅಂತ ಕರೆಯಲಾಗುತ್ತದೆ. ಆದರೆ ಯಾವುದೋ ಕೆಲವು ಸರಕು ಹಾಗೂ ಸೇವೆಗಳ ಬೆಲೆ ಹೆಚ್ಚಿದಾಗ ಅದು ಹಣದುಬ್ಬರ ಅನಿಸಿಕೊಳ್ಳುವುದಿಲ್ಲ. ಒಟ್ಟಾರೆ ವಿಭಿನ್ನ ಕ್ಷೇತ್ರಗಳ ಸರಕು ಹಾಗೂ ಸೇವೆಗಳ ಬೆಲೆಗಳ ಹೆಚ್ಚಳವನ್ನು ಹಣದುಬ್ಬರ ಅಂತ ಕರೆಯುವುದು ವಾಡಿಕೆ. ಹಣದುಬ್ಬರದ ಹೊಡೆತ ಮೊದಲಿಗೆ ಬೀಳುವುದು ಜನಸಾಮಾನ್ಯರ ಮೇಲೆ. ಅದರಲ್ಲೂ ಬೆಲೆ ಹೆಚ್ಚಿದ ಪ್ರಮಾಣದಲ್ಲಿ ಅವರ ಆದಾಯ ಹೆಚ್ಚದೇ ಹೋದರೆ ಅವರ ಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ.

ಹಣದುಬ್ಬರ ಏನು, ಯಾಕೆ, ಹೇಗೆ? Read More »

ಕೆಂದ್ರದಿಂದ ರಾಜ್ಯಗಳಿಗೆ ನ್ಯಾಯವಾಗಿ ಸಿಗಬೇಕಾದ್ದು ಸಿಗುತ್ತಿದೆಯೇ?

ಆರ್.  ರಾಂಕುಮಾರ್ ಅನುವಾದ: ಟಿ ಎಸ್ ವೇಣುಗೋಪಾಲ್ ಇತ್ತೀಚೆಗೆ ಕೇರಳ ಹಾಗೂ ಕರ್ನಾಟಕದ ಸರ್ಕಾರಗಳು ಚಳುವಳಿ ನಡೆಸಿದವು. ಹಲವು ರಾಜ್ಯ ಸರ್ಕಾರಗಳು ಅದಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದವು. ಈ ಚಳುವಳಿ ಭಾರತದಲ್ಲಿನ ವಿತ್ತೀಯ ಒಕ್ಕೂಟ ವ್ಯವಸ್ಥೆಯಲ್ಲಿನ ಹಲವು ಸಮಸ್ಯಾತ್ಮಕ ಅಂಶಗಳನ್ನು ಮುನ್ನೆಲೆಗೆ ತಂದಿದೆ. ಹಣಕಾಸಿನ ವಿತರಣೆಗೆ ಸಂಬಂಧಿಸಿದಂತೆ ರಾಜ್ಯಗಳ ನಡುವೆ ಅಸಮಾನ ವಿತರಣೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳಿವೆ. ಹಾಗೆಯೇ ಕೇಂದ್ರದಿಂದ ರಾಜ್ಯಗಳಿಗೆ ಆಗುತ್ತಿರುವ ಹಂಚಿಕೆಯ ಬಗ್ಗೆಯೂ ಪ್ರಶ್ನೆಗಳಿವೆ. ಹೊಸದಾಗಿ ರಚನೆಯಾಗಿರುವ ೧೬ನೇ ಹಣಕಾಸು ಆಯೋಗ ಈ ಪ್ರಶ್ನೆಗಳನ್ನು

ಕೆಂದ್ರದಿಂದ ರಾಜ್ಯಗಳಿಗೆ ನ್ಯಾಯವಾಗಿ ಸಿಗಬೇಕಾದ್ದು ಸಿಗುತ್ತಿದೆಯೇ? Read More »

Ananthaswamy Mysore – ಮೈಸೂರು ಅನಂತಸ್ವಾಮಿ

ಶೈಲಜಾ ಮೈಸೂರು ಅನಂತಸ್ವಾಮಿಯವರು ಕರ್ನಾಟಕ ಕಂಡ ಅತ್ಯಂತ ಪ್ರತಿಭಾನ್ವಿತ ಸಂಗೀತಗಾರರಲ್ಲಿ ಒಬ್ಬರು. ಸುಗಮ ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆ ಅನನ್ಯ. ಈ ಲೇಖನದಲ್ಲಿ ಅನಂತಸ್ವಾಮಿಯವರ ಬದುಕು ಮತ್ತು ಸಂಗೀತವನ್ನು ಅನಂತಸ್ವಾಮಿಯವರ ಜೊತೆಗಿನ ಸಂದರ್ಶನ, ಅವರನ್ನು ಕುರಿತ ಸಂದರ್ಶನ, ಅವರನ್ನು ಕುರಿತು ಖ್ಯಾತ ಕವಿಗಳು ಆಡಿರುವ ಮಾತುಗಳನ್ನು ಒಟ್ಟುಮಾಡಿ ಅವರ ಸಂಗೀತಾತ್ಮಕ ಬದುಕನ್ನು ಕಟ್ಟಲು ಪ್ರಯತ್ನವಿದೆ. ಕವಿ ಸುಮತೀಂದ್ರ ನಾಡಿಗರು ನಡೆಸಿಕೊಟ್ಟಿರುವ ಅನಂತಸ್ವಾಮಿಯವರ ಸಂದರ್ಶನ, ಅನಂತಸ್ವಾಮಿಯವರನ್ನು ಕುರಿತು ಪಂಡಿತ್ ರಾಜೀವ ತಾರಾನಾಥರ ಸಂದರ್ಶನ, ಪುತಿನ, ಲಕ್ಷ್ಮೀನಾರಾಯಣ ಭಟ್ಟರು, ಹೆಚ್

Ananthaswamy Mysore – ಮೈಸೂರು ಅನಂತಸ್ವಾಮಿ Read More »