Um Ulsam – ಈಜಿಪ್ಟಿನ ನಾಲ್ಕನೆಯ ಪಿರಮಿಡ್ ಉಮ್ ಉಲ್ಸಮ್

  ಈಜಿಪ್ಟ್‌ನ ದನಿ, ಈಜಿಪ್ಟಿನ ನಾಲ್ಕನೆಯ ಪಿರಮಿಡ್ ಎನಿಸಿಕೊಂಡು ಅರಬ್ ದೇಶಗಳಲ್ಲೆಲ್ಲಾ ನಿರಾತಂಕವಾಗಿ ಓಡಾಡುತ್ತಾ, ಅರಬ್-ಈಜಿಪ್ಟ್ ಸಂಗೀತದ ಅಸಲೀ ಪ್ರತಿನಿಧಿ ಎನಿಸಿಕೊಂಡು, ಅರಬ್ ಸಂಗೀತಕ್ಕೆ ಹೊಸ ವ್ಯಾಖ್ಯಾನ ಬರೆದವರು ಈಜಿಪ್ಟಿನ ಮಹಾನ್ ಗಾಯಕಿ ಉಮ್ ಕುಲ್ಸುಂ. ಉಮ್ ಕುಲ್ಸುಂ ತೀರಿಹೋದ ೩೦ ವರ್ಷಗಳ ಬಳಿಕವೂ ಅರಬ್ ಸಂಗೀತ ಏನೆಂದು ತಿಳಿದುಕೊಳ್ಳ ಬೇಕಾದರೆ ನೀವು ಉಮ್ ಕುಲ್ಸುಂ ಅವರ ಗಾಯನ ಕೇಳಬೇಕು ಎನ್ನುತ್ತಾರೆ ಅರಬ್ ಲೋಕದ ಹೊಸಪೀಳಿಗೆಯ ಕಲಾವಿದರು. ಉಮ್ ನನ್ನ ಬಹು ಮೆಚ್ಚಿನ ಗಾಯಕಿ. ಎನ್ನುತ್ತಾರೆ ಸಂಗೀತ […]

Um Ulsam – ಈಜಿಪ್ಟಿನ ನಾಲ್ಕನೆಯ ಪಿರಮಿಡ್ ಉಮ್ ಉಲ್ಸಮ್ Read More »

ಭಯೋತ್ಪಾದನೆ ಹಾಗೂ ವರ್ತನ ಅರ್ಥಶಾಸ್ತ್ರ

ಅರ್ಥಶಾಸ್ತ್ರವು ಮನುಷ್ಯನ ವರ್ತನೆಗೂ ಮಹತ್ವಕೊಡಬೇಕು. ಆಗಷ್ಟೇ ಅದು ಹೆಚ್ಚು ನಿಖರವಾಗುವುದಕ್ಕೆ ಸಾಧ್ಯ ಅನ್ನುವುದನ್ನು ಒಪ್ಪಿಕೊಂಡರೆ, ಹಲವಾರು ಹೊಸ ಹೊಸ ವಿಷಯಗಳು ಅರ್ಥಶಾಸ್ತ್ರದ ಅಧ್ಯಯನದ ಭಾಗವಾಗುವುದಕ್ಕೆ ಸಾಧ್ಯವಾಗುತ್ತದೆ. ಸಂತೋಷ, ದುಃಖ, ನೋವು, ಭಯೋತ್ಪಾದನೆ ಹೀಗೆ ಹಲವಾರು ವಿಷಯಗಳು ಅರ್ಥಶಾಸ್ತ್ರದ ವ್ಯಾಪ್ತಿಗೆ ಬರುವುದಕ್ಕೆ ಸಾಧ್ಯವಾಗುತ್ತದೆ. ಸ್ವಿಟ್ಜರ್‌ಲ್ಯಾಂಡಿನ, ಜ್ಯೂರಿಚ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿರುವ ಬ್ರುನೊ ಎಸ್. ಫ್ರೆ ಹೀಗೆ ಭಯೋತ್ಪಾದನೆಯನ್ನು ಕುರಿತು ಒಂದು ಕುತೂಹಲಕಾರಿ ಅಧ್ಯಯನವನ್ನು ಮಾಡಿದ್ದಾರೆ. ಭಯೋತ್ಪಾದನೆಗೆ ಸಂಬಂಧಿಸಿದಂತೆ ನಮ್ಮ ಈವರೆಗಿನ ಹಲವಾರು ಆಲೋಚನೆಗಳನ್ನು ಮರುಚಿಂತಿಸುವಂತೆ ಈ ಅಧ್ಯಯನ

ಭಯೋತ್ಪಾದನೆ ಹಾಗೂ ವರ್ತನ ಅರ್ಥಶಾಸ್ತ್ರ Read More »

ಬದುಕೇ ಹಾಡಾದ ಮೀರಿಯಂ ಮಕೇಬಾ

ಹಾಡು-ನೃತ್ಯದೊಡನೆ ಆಫ್ರಿಕಾದವರಿಗೆ ಇರುವ ಸಂಬಂಧವೇ ಬೇರೆ ರೀತಿಯದ್ದು. ಅವರಲ್ಲಿ ಅದು ಒಡಲು ಉಸಿರಿನ ಸಂಬಂಧ. ಜೀವದೊಳಗಿರುವ ಹಸಿವು, ಬಾಯರಿಕೆ, ಸುಸ್ತು, ಸಂಕಟ, ಪ್ರೀತಿ, ಪ್ರಣಯದಂತೆ ಹಾಡು-ನೃತ್ಯಗಳು ಕೂಡ ಅವರ ಮೂಲಭೂತ ಪ್ರವೃತ್ತಿ. ಹೀಗೆ ಹಾಡೇ ಒಡಲಾಗಿದ್ದ ದಕ್ಷಿಣ ಆಫ್ರಿಕಾದ ಇತಿಹಾಸದಲ್ಲಿ ಮಕೇಬಾ ಬಹು ಮುಖ್ಯ ವ್ಯಕ್ತಿ. ಅವಳು ಮಾಮ್ಮಾ ಆಫ್ರಿಕಾ. ಅವಳ ಬದುಕು ಸಂಗೀತವಲ್ಲದೆ ಮತ್ತೇನಲ್ಲ. ಅವಳು ತನ್ನ ಹಾಡಿನ ಮೂಲಕವೇ ಇಡೀ ಆಫ್ರಿಕಾದ ದ ಬದುಕು, ಬವಣೆ, ದಬ್ಬಾಳಿಕೆ, ಹಿಂಸೆ, ರಾಜಕಾರಣ ಎಲ್ಲವನ್ನೂ ಬಿಚ್ಚಿಡುತ್ತಾ ಹೋಗುತ್ತಾಳೆ.

ಬದುಕೇ ಹಾಡಾದ ಮೀರಿಯಂ ಮಕೇಬಾ Read More »

ವರ್ತನ-ಅರ್ಥಶಾಸ್ತ್ರದ ಪಿತಾಮಹ ಥೇಲರ್

ಈ ಬಾರಿ ಅರ್ಥಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ರಿಚರ್ಡ್ ಎಚ್ ಥೇಲರ್ ಅವರಿಗೆ ಸಂದಿದೆ. ಭಾರತೀಯರಿಗೆ ಥೇಲರ್ ಮತ್ತೂ ಒಂದು ಕಾರಣಕ್ಕೆ ಪರಿಚಿತರು. ನಿರ್ನೋಟಿಕರಣ ಜಾರಿಗೊಂಡಾಗ ಅವರು ಅದರಿಂದ ಭ್ರಷ್ಟಾಚಾರ ಕಮ್ಮಿಯಾಗುತ್ತದೆ ಅಂತ ಹೇಳಿದ್ದರು. ಈಗ ಆ ಕಾರಣಕ್ಕೆ ಕೆಲವರು ಅವರನ್ನು ಹೊಗಳಲು ಪ್ರಾರಂಭಿಸಿದ್ದಾರೆ. ೨೦೦೦ ರೂಪಾಯಿ ನೋಟು ಜಾರಿಗೆ ತರುತ್ತಿದ್ದಾರೆ ಅಂತ ಗೊತ್ತಾದಾಗ ಥೇಲರ್ ಅವರೇ ಬಯ್ದಿದ್ದರು. ಅವರ ಉದ್ದೇಶ ಹೆಚ್ಚಿನ ಮೌಲ್ಯದ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳಬೇಕು ಎಂಬುದು. ಹೋಗಲಿ ಬಿಡಿ ಮುಳುಗುತ್ತಿರುವವರಿಗೆ ಆಸರೆಗೆ ಒಂದು ಹುಳ್ಳುಕಡ್ಡಿ

ವರ್ತನ-ಅರ್ಥಶಾಸ್ತ್ರದ ಪಿತಾಮಹ ಥೇಲರ್ Read More »