ಇಂದು ಪಾಲ್ ಸ್ವೀಜಿಯ ಮರು ಓದಿನ ಜರೂರು ಇದೆ.

ಪಾಲ್ ಮಾರ್ಲರ್ ಸ್ವೀಜಿ ಪ್ರಖ್ಯಾತ ಮಾಕ್ಸ್‌ವಾದಿ ಅರ್ಥಶಾಸ್ತ್ರಜ್ಞ. ಅರ್ಥಶಾಸ್ತ್ರಕ್ಕೆ ಅದರಲ್ಲೂ ವಿಶೇಷವಾಗಿ ಮಾರ್ಕ್ಸ್‌ವಾದಿ ಅರ್ಥಶಾಸ್ತ್ರಕ್ಕೆ ಅವರ ಕೊಡುಗೆ ಅಪಾರ. ಅವರು ಪ್ರಾರಂಭಿಸಿದ ಮಂತ್ಲಿ ರಿವ್ಯೂ ಪತ್ರಿಕೆ ಒಂದು ಎಡಪಂಥೀಯ ವಿಶ್ವಿವಿದ್ಯಾನಿಲಯವೇ ಆಗಿತ್ತು. ಅದರಿಂದ ಪ್ರಭಾವಿತರಾದವರಿಗೆ ಲೆಕ್ಕವೇ ಇಲ್ಲ. ಮಾರ್ಕ್ಸ್‌ನ ಆರ್ಥಿಕ ಚಿಂತನೆಯನ್ನು ಬೆಳೆಸಿದ ಕೆಲವರಲ್ಲಿ ಸ್ವೀಜಿ ಒಬ್ಬರು. ಸ್ವೀಜಿ ಏಪ್ರಿಲ್ ೧೦, ೧೯೧೦ರಲ್ಲಿ ನ್ಯೂಯಾರ್ಕ್ ಪಟ್ಟಣದಲ್ಲಿ ಜನಿಸಿದರು. ಅಸಾಧಾರಣ ಬುದ್ಧಿವಂತ. ’ಗ್ರೀಕ್ ದೇವತೆಗ’ಳನ್ನು ಹೋಲುವ ಸ್ಫುರದ್ರೂಪಿ. ಓದಿದ್ದು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ. ನಂತರ ಆಗ ಬಹುತೇಕ ಜನ ಮಾಡುತ್ತಿದ್ದಂತೆ […]

ಇಂದು ಪಾಲ್ ಸ್ವೀಜಿಯ ಮರು ಓದಿನ ಜರೂರು ಇದೆ. Read More »

ಅಮೇರಿಕೆಯ ಬಿಕ್ಕಟ್ಟು ಹಾಗೂ ಸುಂಕದ ಮನುಷ್ಯನ ಪ್ರಲಾಪ

  ಯಾನಿಸ್ ವರಾಫಕಿಸ್ ಗ್ರೀಸಿನ ವಿತ್ತಮಂತ್ರಿಗಳಾಗಿದ್ದವರು. ಮಾರ್ಕ್ಸ್‌ವಾದಿ ಅರ್ಥಶಾಸ್ತ್ರಜ್ಞರು. ಅಥೆನ್ಸ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರು. ಹಲವು ಪುಸ್ತಕಗಳ ಕರ್ತೃ. ಸಾಮಾಜಿಕ ಮಾಧ್ಯಮಗಳಲ್ಲೂ ತುಂಬಾ ಸಕ್ರಿಯರು. ಟ್ರಂಪ್ ನೀತಿಯನ್ನು ಕುರಿತ ಯಾನಿಸ್ ಅಭಿಪ್ರಾಯಗಳು ಸಾಕಷ್ಟು ಆಸಕ್ತಿಯನ್ನು ಕೆರಳಿಸಿವೆ. ಟ್ರಂಪ್ ಬಫೂನ್ ಅಲ್ಲ. ಅವನ ಕೆಲ ಮಾತುಗಳು, ನಡೆಗಳಿಂದಾಗಿ ಹಾಗೆ ತೋರುತ್ತಾನೆ ಅಷ್ಟೆ. ಯಾನಿಸ್ ದೃಷ್ಟಿಯಲ್ಲಿ ಟ್ರಂಪ್‌ಗೆ ಸ್ಪಷ್ಟ ಯೋಜನೆಗಳಿವೆ. ಅಮೇರಿಕೆಯ ಅರ್ಥಿಕತೆ ಬಿಕ್ಕಟ್ಟಿನಲ್ಲಿದೆ. ಡಾಲರ್ ಗಳಿಸಿರುವ ಪ್ರಾಬಲ್ಯದಲ್ಲೇ ಅದರ ಸಮಸ್ಯೆಯೂ ಮೂಲವೂ ಇದೆ. ಜಾಗತಿಕ ಆರ್ಥಿಕತೆಯಲ್ಲಿ ಡಾಲರ್ ರಾಜ. ಅದು

ಅಮೇರಿಕೆಯ ಬಿಕ್ಕಟ್ಟು ಹಾಗೂ ಸುಂಕದ ಮನುಷ್ಯನ ಪ್ರಲಾಪ Read More »

ಸುಂಕದ ಮನುಷ್ಯನ ಸಲ್ಲದ ಪ್ರಲಾಪಲ

ಟಿ. ಎಸ್. ವೇಣುಗೋಪಾಲ್ ಅಮೇರಿಕೆ ಆಮದು ಮಾಡಿಕೊಳ್ಳುತ್ತಿರುವ ಎಲ್ಲಾ ಸರಕುಗಳ ಮೇಲೆ ಸುಂಕ ಹಾಕಲು ಡೋನಾಲ್ಡ್ ಟ್ರಂಪ್ ಪಣತೊಟ್ಟಿದ್ದಾರೆ. ಅದೇ ಅವರ ಆರ್ಥಿಕ ನೀತಿಯ ಹೃದಯ ಆಗಿದೆ. ಟ್ರಂಪ್ ದೃಷ್ಟಿಯಲ್ಲಿ ಅಮೇರಿಕೆಯ ಎಲ್ಲಾ ಸಮಸ್ಯೆಗಳಿಗೂ ಸುಂಕ ರಾಮಬಾಣ. ಪಾಪ ಜಗತ್ತಿನ ಎಲ್ಲಾ ದೇಶಗಳು ಅಮೇರಿಕೆಗೆ ಅನ್ಯಾಯ ಮಾಡುತ್ತಾ ಬಂದಿವೆಯಂತೆ. ಅಮೇರಿಕೆಯ ವ್ಯಾಪಾರದ ಕೊರತೆ ೧.೨ ಟ್ರಿಲಿಯನ್ ಆಗಿರುವುದು ನೋಡಿದರೆ ತಿಳಿಯುವುದಿಲ್ಲವೇ? ಅದಕ್ಕಿಂತ ದೊಡ್ಡ ಪುರಾವೆ ಬೇಕೇ, ಅನ್ನುತ್ತಾರೆ ಟ್ರಂಪ್. ಸ್ನೇಹಿತರು, ಶತ್ರುಗಳು ಯಾರೂ ಹೊರತಲ್ಲ. ಎಲ್ಲರೂ ಈ

ಸುಂಕದ ಮನುಷ್ಯನ ಸಲ್ಲದ ಪ್ರಲಾಪಲ Read More »

ಹವಾಮಾನದ ತಾಪಮಾನ ಹಾಗೂ ಅಸಮಾನತೆ

ಟಿ ಎಸ್ ವೇಣುಗೋಪಾಲ್ ಭೂಮಿಯ ತಾಪಮಾನ ಏರುತ್ತಿದೆ. ಅದನ್ನು ನಿಯಂತ್ರಿಸಬೇಕು ಅನ್ನುವುದು ಜಗತ್ತಿನ ಎಲ್ಲರ ಕಾಳಜಿ. ಅದಕ್ಕೆ ಫಾಸಿಲ್ ಇಂಧನ ಬಳಕೆ ಬಹುಮಟ್ಟಿಗೆ ಕಾರಣ ಅನ್ನುವುದು ಬಹುಮಟ್ಟಿಗೆ ಒಪ್ಪಿತವಾದ ವಿಷಯ. ಆದರೆ ಅದರ ಬಳಕೆಯನ್ನು ನಿಲ್ಲಿಸುವುದಿರಲಿ ಕಡಿಮೆ ಮಾಡುವುದೂ ಕಷ್ಟದ ಕೆಲಸವಾಗಿದೆ. ಆದರೂ ಎಲ್ಲಾ ದೇಶಗಳು ಇದನ್ನು ಕಡಿಮೆ ಮಾಡಲು ಸಭೆ ಸೇರುತ್ತಲೇ ಇದ್ದಾರೆ. ಅಂತಹ ೨೯ ಸಭೆಗಳು ಈಗ ಮುಗಿದಿವೆ. ಏನೇನೋ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಲೇ ಇದ್ದಾರೆ. ಭೂಮಿಯ ತಾಪಮಾನ ೧.೫ ಡಿಗ್ರಿ ಸೆಲ್ಸಿಯಸ್ಸಿಗಿಂತ ಹೆಚ್ಚಾಗಲೂ ಬಿಡುವುದಿಲ್ಲ

ಹವಾಮಾನದ ತಾಪಮಾನ ಹಾಗೂ ಅಸಮಾನತೆ Read More »

ತೆರಿಗೆ ಕಳ್ಳರನ್ನು ಬೆನ್ನು ಹತ್ತಿದ ಗೇಬ್ರಿಯಲ್

  ಜೆರಾರ‍್ಡ್ ಡೆಪಾರ್‌ಡ್ಯು ಪ್ರಖ್ಯಾತ ಫ್ರೆಂಚ್ ನಟ, ಉದ್ಯಮಿ, ಅಪಾರ ಶ್ರೀಮಂತ. ಸ್ವಾಭಾವಿಕವಾಗಿಯೇ ದೊಡ್ಡ ಪ್ರಮಾಣದಲ್ಲಿ ತೆರಿಗೆಯನ್ನು ಕಟ್ಟಬೇಕಿತ್ತು. ಎಲ್ಲಾ ಬಿಲಿಯನೇರುಗಳಂತೆ ಅವನಿಗೂ ತೆರಿಗೆ ಕಟ್ಟುವ ಮನಸ್ಸಿಲ್ಲ. ಎಲ್ಲರೂ ಮಾಡುವಂತೆ ಅವನು ತೆರಿಗೆ ತಪ್ಪಿಸಿಕೊಳ್ಳುವುದಕ್ಕೆ ಪಕ್ಕದ ಬೆಲ್ಜಿಯಂಗೆ ಹೋಗಿಬಿಟ್ಟ. ಎಷ್ಟು ಸಲೀಸಾಗಿ ಹೋಗಿಬಿಟ್ಟ ಅಂದರೆ ೨೦೧೨ರಲ್ಲಿ ಇದು ದೊಡ್ಡ ಸುದ್ದಿಯಾಗಿತ್ತು. ಹಲವರು ಮರೆತರು. ಆದರೆ ಗೇಬ್ರಿಯಲ್ ಜುಕ್‌ಮನ್ ಅನ್ನೊ ಒಬ್ಬ ಯುವ ಅರ್ಥಶಾಸ್ತ್ರಜ್ಞನಿಗೆ ಇದು ತುಂಬಾ ಕಾಡಿತು. ಅವನು ಇಡೀ ಘಟನೆಯನ್ನು ತೀರಾ ಆಸಕ್ತಿಯಿಂದ ಗಮನಿಸುತ್ತಿದ್ದ. ಆಗಷ್ಟೇ

ತೆರಿಗೆ ಕಳ್ಳರನ್ನು ಬೆನ್ನು ಹತ್ತಿದ ಗೇಬ್ರಿಯಲ್ Read More »

ತಳ್ಳೊ ಮಾಡೆಲ್ ಗಾಡಿಯಿದು ತಳ್ಳಿಬಿಡಪ್ಪ

ಭಾರತದ ಆರ್ಥಿಕತೆಯ ಬಗ್ಗೆ ತುಂಬಾ ಚರ್ಚೆ ನಡೆಯುತ್ತಿದೆ. ಮೋದಿಯವರಂತೂ ೨೦೪೭ರ ವೇಳೆಗೆ ಅದೊಂದು ಬೃಹತ್ ಶಕ್ತಿಯಾಗಿ ರೂಪುಗೊಳ್ಳಲಿದೆ ಎಂದು ಹೇಳುತ್ತಿದ್ದಾರೆ. ಜಿಡಿಪಿಯ ಹೆಚ್ಚಳದಂತಹ ಆರ್ಥಿಕ ಸೂಚಿಗಳನ್ನು ಉಲ್ಲೇಖಿಸುತ್ತಾ ಭಾರತದ ಆರ್ಥಿಕತೆ ಅದ್ಭುತವಾಗಿದೆ ಅಂತ ಬನ್ನಿಸಲಾಗುತ್ತಿದೆ. ನಿಜ ಹೊರಗಿನಿಂದ ನೋಡೋಕೆ ಸುಂದರವಾಗಿದೆ. ಸ್ವಲ್ಪ ಒಳಗೆ ನೋಡಿ ಅನ್ನುತ್ತಾರೆ ರತಿನ್ ರಾಯ್ ಅಂತಹವರು. ಅವರು ಹೇಳುವಂತೆ ನಮ್ಮ ಆರ್ಥಿಕತೆ ಒಂದು ಕಾರ್ ಇದ್ದ ಹಾಗೆ. ಚಲಿಸುತ್ತಿರುವ ಕಾರಿನಲ್ಲಿ ಕೂತು ನೋಡಿದಾಗ ಎಲ್ಲವೂ ಚೆನ್ನಾಗಿ ಕಾಣುತ್ತದೆ. ಒಮ್ಮೆ ಬಾನೆಟ್ಟನ್ನು ಬಿಚ್ಚಿ ನೋಡಿದರೆ

ತಳ್ಳೊ ಮಾಡೆಲ್ ಗಾಡಿಯಿದು ತಳ್ಳಿಬಿಡಪ್ಪ Read More »

ರಾಜೀವ್ ತಾರಾನಾಥರ ಗುಂಗಿನಲ್ಲಿ

  ಟಿ ಎಸ್ ವೇಣುಗೋಪಾಲ್ ಕೆಲ ವರ್ಷಗಳ ಹಿಂದೆ ರಾಜೀವ್ ತಾರಾನಾಥರ ಮನೆಗೆ ಹೋದಾಗ ಯಾವುದೋ ಮಲೆಯಾಳಂ ಪತ್ರಿಕೆಯೊಂದಕ್ಕೆ ಸಂದರ್ಶನ ನಡೆಯುತ್ತಿತ್ತು. ಶಾಸ್ತ್ರೀಯ ಸಂಗೀತದ ಬಗ್ಗೆ ವಿವರಿಸುತ್ತಿದ್ದರು, ಶಾಸ್ತ್ರೀಯ ಸಂಗೀತದಲ್ಲಿ ಸಂಗೀತಗಾರ ಹಾಗೂ ಕೇಳುಗನ ನಡುವೆ ಒಂದು ಟ್ರಾನ್ಸ್ಯಾಕ್ಷನ್ ನಡೆಯುತ್ತದೆ. ನೀವು ನೂರು ರೂಪಾಯಿ ಕೊಟ್ಟು ಒಂದು ಪೆನ್ನು ಕೊಂಡರೆ ಅದರ ಬೆಲೆ ನೂರು ರೂಪಾಯಿ ಅಂತ ಇಬ್ಬರೂ ಒಪ್ಪಿಕೊಂಡು ವ್ಯಾಪಾರ ಮಾಡುತ್ತಿರುತ್ತೇವೆ. ಪೆನ್ನು ಹೇಗಿರುತ್ತದೆ ಅನ್ನುವ ಅರಿವು ನಿಮಗಿರುತ್ತದೆ. ಅವನು ಪೆನ್ನು ಕೊಡದೆ ಬೇರೇನೊ ಕೊಟ್ಟರೆ

ರಾಜೀವ್ ತಾರಾನಾಥರ ಗುಂಗಿನಲ್ಲಿ Read More »

Dhanammal, ಧನಮ್ಮಾಳ್ ಜೀವಂತ ದಂತಕಥೆ

ಶೈಲಜಾ   ಸಂಗೀತ ಲೋಕದ ಮಾತೃದೇವತೆ ಎನಿಸಿಕೊಂಡು ಬದುಕಿದ್ದಾಗಲೇ ಒಂದು ಐತಿಹ್ಯವಾಗಿದ್ದ ಧನಮ್ಮಾಳ್ ತನ್ನ ಸಮಕಾಲೀನರು ಮತ್ತು ಮುಂದಿನ ಪೀಳಿಗೆಯವರಲ್ಲಿ ಗೌರವ, ಭಯ, ಬೆರಗನ್ನು ಹುಟ್ಟಿಸಿದ ಅಸಾಧಾರಣ ಕಲಾವಿದೆ. ಸಂಗೀತದ ಉತ್ಕೃಷ್ಟತೆಗೆ ಇಂದಿಗೂ ಒಂದು ರೆಫರೆನ್ಸ್ ಪಾಯಿಂಟ್. ಆನೆ ನಡೆದದ್ದೇ ದಾರಿ.-ಸಂ. ಧನಮ್ಮಾಳ್ ಹುಟ್ಟಿದ್ದು ೧೮೬೮ರಲ್ಲಿ ಮದ್ರಾಸಿನ ಜಾರ್ಜ್ ಟೌನಿನ ನಾಟ್ಟು ಪಿಳ್ಳೈಯಾರ್ ರಸ್ತೆಯಲ್ಲಿ. ಸಮುದಾಯದ ನೆನಪಿನಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದ ಏಳು ತಲೆಮಾರುಗಳ ಇತಿಹಾಸ ವೀಣಾ ಧನಮ್ಮಾಳ್ ಕುಟುಂಬಕ್ಕಿತ್ತು. ವೀಣಾ ಧನಮ್ಮಾಳ ಅಜ್ಜಿಯ ಅಜ್ಜಿ ಪಾಪಮ್ಮಾಳ್ ತಂಜಾವೂರು

Dhanammal, ಧನಮ್ಮಾಳ್ ಜೀವಂತ ದಂತಕಥೆ Read More »

Ariyakudi Ramanuja Iyengar – ಹೊಸಹಾದಿಯ ಹರಿಕಾರ ಅರಿಯಾಕುಡಿ ರಾಮಾನುಜ ಅಯ್ಯಂಗಾರ್

ಶೈಲಜಾ ಮತ್ತು ವೇಣುಗೋಪಾಲ್ ಒಮ್ಮೆ ರಾಮನಾಡ್ ಶ್ರೀನಿವಾಸ ಅಯ್ಯಂಗಾರ್ಯರನ್ನು ಭೇಟಿಯಾಗಲು ಮೈಸೂರು ವಾಸುದೇವಾಚಾರ್ಯರು ಹೋಗಿದ್ದರು. ಆಗ ಪೂಚಿ ಶ್ರೀನಿವಾಸ ಅಯ್ಯಂಗಾರ್ಯರು ಶಿಷ್ಯರಿಗೆ ಪಾಠ ಹೇಳುತ್ತಿದ್ದರು. ಪಾಠ ಮುಗಿದ ಮೇಲೆ ಆಚಾರ್ಯರೇ ಇಷ್ಟು ಮಂದಿ ಶಿಷ್ಯರು ಹಾಡಿದ್ದನ್ನು ಕೇಳಿದಿರಿ. ಇವರಲ್ಲಿ ಯಾರ ಹಾಡಿಕೆ ನಿಮ್ಮ ಮನಸ್ಸಿಗೆ ಬಂದಿತು? ಎಂದು ಕೇಳಿದರು. ಅದಕ್ಕೆ ಆಚಾರ್ಯರು ಎಲ್ಲರೂ ಚೆನ್ನಾಗಿಯೇ ಹಾಡಿದರು. ಆದರೂ ಆ ಮೂಲೆಯಲ್ಲಿ ಗೋಡೆಗೆ ಒರಗಿ ಕುಳಿತಿದ್ದ ವಿದ್ಯಾರ್ಥಿಗೆ ಉತ್ತಮ ಭವಿಷ್ಯವಿದೆ ಎನಿಸುತ್ತದೆ. ಆತನ ಹಾಡಿಕೆಯಲ್ಲಿ ಒಂದು ಬಿಗಿ ಹಾಗೂ

Ariyakudi Ramanuja Iyengar – ಹೊಸಹಾದಿಯ ಹರಿಕಾರ ಅರಿಯಾಕುಡಿ ರಾಮಾನುಜ ಅಯ್ಯಂಗಾರ್ Read More »

Begum Akhtar – ನೋವೇ ದನಿಯಾದ – ನೋವಿಗೆ ದನಿಯಾದ ಬೇಗಂ ಅಖ್ತರ್

ನೋವೇ ದನಿಯಾದ – ನೋವಿಗೆ ದನಿಯಾದ ಬೇಗಂ ಅಖ್ತರ್ ಶೈಲಜಾ ಭಾರತೀಯ ಸಂಗೀತ ಕ್ಷೇತ್ರದ ಉಜ್ವಲ ತಾರೆ ಬೇಗಂ ಅಖ್ತರ್. ಬದುಕು ಮತ್ತು ಸಂಗೀತವನ್ನು ಅದಮ್ಯವಾಗಿ ಪ್ರೀತಿಸುತ್ತಿದ್ದ ಅತ್ಯಂತ ಭಾವುಕ ಗಾಯಕಿ. ಸದಾ ಪ್ರೀತಿ ಪ್ರೀತಿಗಾಗಿ ಹಂಬಲಿಸುತ್ತಿದ್ದ ಮತ್ತು ಅದು ದೊರಕದಿದ್ದಾಗ ವ್ಯಥೆಯಿಂದ ತೀವ್ರ ವಿಷಾದದಲ್ಲಿ ಪರಿತಪಿಸುತ್ತಿದ್ದ, ತಮ್ಮೆದೆಯ ನೋವು, ಸಂತೋಷಗಳೆಲ್ಲವನ್ನೂ ಹಾಡಾಗಿಸುತ್ತಿದ್ದ ಅಪರೂಪದ ಗಾಯಕಿ. ಅವರ ಕಂಠ ಅವರ ನೋವಿನ ಧ್ವನಿಯೇ ಆಗಿತ್ತು. ಹೀಗೆ ನೋವೇ ಬದುಕಾಗಿದ್ದ ಬೇಗಂ ಅಖ್ತರ್ ಹುಟ್ಟಿದ್ದು ೧೯೧೪ರ ಅಕ್ಟೋಬರ್ ೭ರಂದು

Begum Akhtar – ನೋವೇ ದನಿಯಾದ – ನೋವಿಗೆ ದನಿಯಾದ ಬೇಗಂ ಅಖ್ತರ್ Read More »