Artha

ದಾರಿ ಯಾವುದಯ್ಯ ಟ್ರಂಪ್‌ ಸುಂಕಕ್ಕೆ?

ಶ್ವೇತಭವನದ ವಾಣಿಜ್ಯ ಸಲಹೆಗಾರ ಪೀಟರ್ ನವಾರೋ ದೃಷ್ಟಿಯಲ್ಲಿ ಉಕ್ರೇನ್ ಸಂಘರ್ಷ ‘ಮೋದಿಯವರ ಯುದ್ಧ’. ಅವರ ಪ್ರಕಾರ ಜಗತ್ತಿನಲ್ಲೇ ಅತಿಹೆಚ್ಚು ಸುಂಕ ಹಾಕುವ ದೇಶ ಭಾರತ–ಸುಂಕದ ಮಹಾರಾಜ. ಅಮೆರಿಕದ ಸರಕುಗಳ ಮೇಲೆ ಸುಂಕ ಹೇರಿ, ಅವು ಭಾರತಕ್ಕೆ ಬಾರದಂತೆ ತಡೆಯುತ್ತಿದೆ. ಇದರಿಂದ ಅಮೆರಿಕದ ಬಳಕೆದಾರರು, ವಾಣಿಜ್ಯೋದ್ಯಮಿಗಳು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಅಮೆರಿಕದ ತೆರಿಗೆದಾರರು ಮೋದಿಯವರ ಯುದ್ಧಕ್ಕೆ ಹಣ ತೆರುತ್ತಿದ್ದಾರೆ. ಆದರೆ, ಭಾರತ ಅಮೆರಿಕದಲ್ಲಿ ತನ್ನ ಸರಕುಗಳನ್ನು ಮಾರಿಕೊಂಡು ಡಾಲರ್ ಸಂಪಾದಿಸಿಕೊಳ್ಳುತ್ತಿದೆ. ಆ ದುಡ್ಡಿನಿಂದ ರಷ್ಯಾದಿಂದ ರಿಯಾಯಿತಿ […]

ದಾರಿ ಯಾವುದಯ್ಯ ಟ್ರಂಪ್‌ ಸುಂಕಕ್ಕೆ? Read More »

ಸಾಮ್ರಾಜ್ಯಶಾಹಿ ಮತ್ತು ಭಾರತದ ಮೇಲಿನ ಅದರ ದಬ್ಬಾಳಿಕೆ

ಪ್ರಭಾತ್ ಪಟ್ನಾಯಕ್ ಇದು ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಭಾರತೀಯ ಜನತೆಯ ಸಂಗ್ರಾಮದ ವಿಜಯದ ೭೮ನೇ ವಾರ್ಷಿಕೋತ್ಸವದ ದಿನ. ಇಂದು ಅಮೆರಿಕದ ಸಾಮ್ರಾಜ್ಯಶಾಹಿ ತನ್ನ ಆದೇಶವನ್ನು ಪಾಲಿಸುವಂತೆ ಭಾರತವನ್ನು ಬಹಿರಂಗವಾಗಿ ಒತ್ತಾಯಿಸುತ್ತಿದೆ. ಎಂತಹ ವಿಪರ್ಯಾಸದ ಸಂಗತಿಂ. ಆದರೆ, ಈ ಗುಣ ಸಾಮ್ರಾಜ್ಯಶಾಹಿಯ ಸ್ವಭಾವದಲ್ಲೇ ಇದೆ. ವಾಸ್ತವವಾಗಿ, ಈ ೭೮ ವರ್ಷಗಳಲ್ಲಿ ಅಮೆರಿಕದ ಸಾಮ್ರಾಜ್ಯಶಾಹಿ ಭಾರತವನ್ನು ತನ್ನ ಆದೇಶಗಳನ್ನು ಪಾಲಿಸುವಂತೆ ಮಾಡುವುದಕ್ಕೆ ಹಲವು ಪ್ರಯತ್ನಗಳನ್ನು ಮಾಡಿದೆ. ಆದರೆ, ಹಿಂದೆ ಮಾಡಿದ್ದ ಪ್ರಯತ್ನಗಳಿಗೂ ಈಗ ಮಾಡುತ್ತಿರುವ ಪ್ರಯತ್ನಗಳಲ್ಲಿ ಎರಡು ಮೂಲಭೂತ ವ್ಯತ್ಯಾಸಗಳಿವೆ.

ಸಾಮ್ರಾಜ್ಯಶಾಹಿ ಮತ್ತು ಭಾರತದ ಮೇಲಿನ ಅದರ ದಬ್ಬಾಳಿಕೆ Read More »

ಟ್ರಂಪ್ ದಾರಿಯಲ್ಲಿ ಹೋಗುವುದು ಬೇಡ

ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಟ್ರಂಪ್ ಕೊನೆಗೂ ಇಂಡಿಯಾ ಮೇಲೆ ೫೦% ಸುಂಕ ಹಾಕಿದ್ದಾರೆ. ದಿನಕ್ಕೊಂದು ಕ್ರಮದಿಂದ ಟ್ರಂಪ್ ಸದಾ ಸುದ್ದಿಯಲ್ಲಿದ್ದಾನೆ. ಎಷ್ಟೇ ಬೇಡ ಅಂದರೂ ಅದು ಜಗತ್ತನ್ನು, ಜಗತ್ತಿನ ಆರ್ಥಿಕತೆಯನ್ನು ಒಂದಲ್ಲ ಒಂದು ರೀತಿ ಕಾಡುತ್ತಲೇ ಇದೆ. ಹಾಗಾಗಿ ಅದನ್ನು ಅರ್ಥಮಾಡಿಕೊಂಡು ಎದುರಿಸುವುದು ಅನಿವಾರ್ಯವಾಗುತ್ತದೆ. ಭಾರತದ ಸಧ್ಯದ ಸರ್ಕಾರ ಆತ್ಮೀಯ ಸ್ನೇಹಿತ ಎಂದು ಪರಿಗಣಿಸಿದ್ದ ಟ್ರಂಪ್ ಇಂದು ನಮ್ಮ ವಿರುದ್ಧ ಸುಂಕದ ಯುದ್ಧ ಸಾರಿದ್ದಾನೆ. ದಿನೇ ದಿನೇ ಹೊಸ ಆಯಾಮ ಪಡೆದುಕೊಳ್ಳುತ್ತಿರುವ ಟ್ರಂಪ್ ನೀತಿಯನ್ನು ಕುರಿತಂತೆ ಯೋಜನಾ

ಟ್ರಂಪ್ ದಾರಿಯಲ್ಲಿ ಹೋಗುವುದು ಬೇಡ Read More »

Amarthya sen-ಜನಪರ ಕಾಳಜಿಯ ತೀಕ್ಷ್ಣ ತಾರ್ಕಿಕ ಮನಸ್ಸಿನ ಅರ್ಥಶಾಸ್ತ್ರಜ್ಞ- ಅಮರ್ತ್ಯ ಸೇನ್

  ಟಿ ಎಸ್ ವೇಣುಗೋಪಾಲ್   “ಒಂದು ಮದ್ಯಾಹ್ನ, ಒಬ್ಬ ಯುವಕ ಜೋರಾಗಿ ಕಿರುಚಿಕೊಂಡು ನಮ್ಮ ಮನೆಯ ಮುಂದೆ ಓಡಿಕೊಂಡು ಬಂದ. ಮೈಯೆಲ್ಲಾ ರಕ್ತಮಯವಾಗಿತ್ತು. ಯಾರೋ ಅವನನ್ನು ಚಾಕುವಿನಿಂದ ಇರಿದಿದ್ದರು. ಆತ ಖಾದಿರ್ ಮಿಯಾ ಅಂತ ಒಬ್ಬ ಮುಸ್ಲಿಂ ಕೆಲಸಗಾರ. ಕೆಲಸ ಹುಡುಕಿಕೊಂಡ ಇಲ್ಲಿಗೆ ಬಂದಿದ್ದ. ದಾರಿಯಲ್ಲಿ ಯಾರೋ ಮತಾಂಧರು ಅವನನ್ನು ಇರಿದಿದ್ದರು. ನಮ್ಮ ತಂದೆ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ’ಆಗದವರೂ ಇರುವ ಕಡೆ, ಅದೂ ಕೋಮು ಗಲಭೆಯ ಸಮಯದಲ್ಲಿ ಹೋಗಬೇಡ’ ಅಂತ ಅವನ ಹೆಂಡತಿ

Amarthya sen-ಜನಪರ ಕಾಳಜಿಯ ತೀಕ್ಷ್ಣ ತಾರ್ಕಿಕ ಮನಸ್ಸಿನ ಅರ್ಥಶಾಸ್ತ್ರಜ್ಞ- ಅಮರ್ತ್ಯ ಸೇನ್ Read More »

V K R V Rao-ವಿ ಕೆ ಆರ್ ವಿ ರಾವ್- ಸಂಸ್ಥೆಗಳ ಶಿಲ್ಪಿ

  ವಿಜಯೇಂದ್ರ ರಾವ್   ವಿಜಯೇಂದ್ರ ಕಸ್ತೂರಿ ರಂಗ ವರದರಾಜ (ವಿ.ಕೆ.ಆರ್.ವಿ.) ರಾವ್ ಸ್ವಾತಂತ್ರ್ಯೋತ್ತರ ಭಾರತೀಯ ಅರ್ಥಶಾಸ್ತ್ರದ ಕ್ಷೇತ್ರದಲ್ಲಿ ದಿಗ್ಗಜರು. ಅವರು ಸ್ಥಾಪಿಸಿದ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ (ಡಿಎಸ್‌ಇ) ಮತ್ತು ಇನ್‌ಸ್ಟಿಟ್ಯೂಟ್ ಫಾರ್ ಇಕನಾಮಿಕ್ ಗ್ರೋತ್ (ಐಇಜಿ) ಎರಡು ಸಂಸ್ಥೆಗಳು ಭಾರತದಲ್ಲಿ ಆರ್ಥಿಕ ಮತ್ತು ಸಮಾಜಶಾಸ್ತ್ರೀಯ ತರಬೇತಿ ಮತ್ತು ಸಂಶೋಧನೆಗೆ ಬೇಕಾದ ಮೂಲಸೌಕರ್ಯವನ್ನು ಒದಗಿಸುವ ಕೇಂದ್ರಗಳು. ಹಾಗೆಯೇ ಅವರು ಸ್ಥಾಪಿಸಿದ ಇನ್ನೊಂದು ಮಹತ್ವದ ಸಂಸ್ಥೆ ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಫಾರ್ ಸೋಶಿಯಲ್ ಅಂಡ್ ಇಕನಾಮಿಕ್ ಚೇಂಜ್ (ಐಎಸ್‌ಇಸಿ).

V K R V Rao-ವಿ ಕೆ ಆರ್ ವಿ ರಾವ್- ಸಂಸ್ಥೆಗಳ ಶಿಲ್ಪಿ Read More »

ಆಫ್ರಿಕಾ: ಸ್ವಾತಂತ್ರ್ಯದ ಹುಡುಕಾಟ

  ಆಫ್ರಿಕಾ ಸುದ್ದಿಯಲ್ಲಿದೆ. ಟೋಗೊದಲ್ಲಿ ಯುವಜನ ಸರ್ಕಾರದ ವಿರುದ್ಧ ಬೀದಿಗಿಳಿದಿದ್ದಾರೆ. ಬುರ್ಕಿನಾ ಫಾಸೊ, ಮಾಲಿ, ನೈಜೆರ್‌ನಲ್ಲಿ ಮಿಲಿಟರಿ ದಂಗೆಗಳಾಗಿವೆ. ಹೊಸ ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ದಂಗೆಗಳು ನಡೆಯುತ್ತಿರುವ ಬಹುತೇಕ ದೇಶಗಳು ಹಿಂದೆ ಫ್ರಾನ್ಸ್‌ನ ವಸಾಹತುಗಳಾಗಿದ್ದವು. ಈ ದೇಶಗಳಲ್ಲಿನ ಸಂಪನ್ಮೂಲವನ್ನು ಫ್ರಾನ್ಸ್ ಹಲವು ದಶಕಗಳಿಂದ ನಿರಂತರವಾಗಿ ಲೂಟಿ ಹೊಡೆದು, ಅತ್ಯಂತ ಕ್ರೂರವಾಗಿ ಆಡಳಿತ ನಡೆಸಿದೆ. ಆಫ್ರಿಕಾದವರು ತೀವ್ರವಾದ ಹೋರಾಟ ನಡೆಸಿದ್ದರಿಂದ 1950ರ ಸುಮಾರಿನಲ್ಲಿ ಈ ದೇಶಗಳು ಸ್ವತಂತ್ರವಾದವು. ಆದರೆ, ಬಹುತೇಕ ದೇಶಗಳಿಗೆ ಬರೀ ಹೆಸರಿಗಷ್ಟೇ ಸ್ವಾತಂತ್ರ್ಯ ದೊರೆತಿದೆ. ಸ್ವಾತಂತ್ರ್ಯ

ಆಫ್ರಿಕಾ: ಸ್ವಾತಂತ್ರ್ಯದ ಹುಡುಕಾಟ Read More »

ಆರ್ಥಿಕತೆಯನ್ನು ಅಲ್ಲಾಡಿಸುತ್ತಿರುವ ಕ್ರಿಪ್ಟೊ ವ್ಯವಹಾರ

ಕ್ರಿಪ್ಟೊ ಗುಳ್ಳೆ ಮತ್ತೆ ಒಡೆದಿದೆ. ಕ್ರಿಪ್ಟೊ ಸಾಮ್ರಾಜ್ಯದ ದೊಡ್ಡ ಸಾಮ್ರಾಟ ಸ್ಯಾಂ ಬ್ಯಾಂಕ್‌ಮನ್ ಫ್ರೀಡ್ ದಿವಾಳಿಯಾಗಿದ್ದಾನೆ. ಕಳೆದ ಎರಡು ವರ್ಷಗಳಲ್ಲಿ ೩೦ ವರ್ಷದ ಸ್ಯಾಂ ೩೨ಬಿಲಿಯನ್ ಡಾಲರ್ ಮೌಲ್ಯದ ಕ್ರಿಪ್ಟೊ ವಿನಿಮಯ ಕಂಪೆನಿ ಎಫ್‌ಟಿಎಕ್ಸ್ ಕಟ್ಟಿದ್ದ. ಶೂನ್ಯದಿಂದ ಕೆಲವೇ ದಿನಗಳಲ್ಲಿ ೩ ಟ್ರಿಲಿಯನ್ ಮಾರುಕಟ್ಟೆಯಾಗಿ ಬೆಳೆದಿದ್ದ ಕ್ರಿಪ್ಟೊ ಜಗತ್ತಿನ ಎರಡನೆಯ ಅತಿ ದೊಡ್ಡ ಶ್ರೀಮಂತ ಎನಿಸಿಕೊಂಡಿದ್ದ. ಬೇರೆ ಕ್ರಿಪ್ಟೋ ಉದ್ದಿಮೆಗಳು ಸಂಕಟದಲ್ಲಿದ್ದಾಗ ನೂರಾರು ಮಿಲಿಯನ್ ಹಣ ಖರ್ಚು ಮಾಡಿದ್ದ. ಈಗ ಮತ್ತೆ ಅದು ಶೂನ್ಯಕ್ಕೆ ಹೋಗಲಿದೆಯೇ ಅನ್ನುವ

ಆರ್ಥಿಕತೆಯನ್ನು ಅಲ್ಲಾಡಿಸುತ್ತಿರುವ ಕ್ರಿಪ್ಟೊ ವ್ಯವಹಾರ Read More »

ಬಡವರ ಸಂಖ್ಯೆ ಕಡಿಮೆಯಾಗುತ್ತಿದೆಯೇ?

april, 2022 ಇತ್ತೀಚಿನ ದಿನಗಳಲ್ಲಿ ಬಡತನ ಹಾಗೂ ಅಸಮಾನತೆ ತುಂಬಾ ಸುದ್ದಿ ಮಾಡುತ್ತಿವೆ. ದಿನಪತ್ರಿಕೆಗಳಲ್ಲಿ ದೊಡ್ಡದಾಗಿ ಕಾಣಿಸಿಕೊಳ್ಳುತ್ತಿವೆ. ಪತ್ರಿಕೆಗಳು ಸಂಪಾದಕೀಯ ಬರೆಯುತ್ತಿವೆ. ತರಾವರಿ ವಿಶ್ಲೇಷಣೆಗಳು ಪ್ರಕಟಗೊಳ್ಳುತ್ತಿವೆ. ‘ಬಡತನ ನಿರ್ಮೂಲನವಾಗಿದೆ’ ಅಂತ ಒಂದು ಸುದ್ದಿ ಹೇಳಿದರೆ. ‘ಬಡತನದ ಪ್ರಮಾಣದಲ್ಲಿ ಎಂದೂ ಇಲ್ಲದ ಹೆಚ್ಚಳ’ ಅಂತ ಮತ್ತೊಂದು ಸುದ್ದಿ ಹೇಳುತ್ತದೆ. ಒಂದೊಂದು ಅಧ್ಯಯನಗಳು ಒಂದೊಂದು ಬಗೆಯ ತೀರ್ಮಾನಕ್ಕೆ ಬರುತ್ತಿವೆ. ಯಾಕೆ ಇಷ್ಟೊಂದು ವೈಪರಿತ್ಯ? ಕಾರಣ ತುಂಬಾ ಸರಳ. ಅಧ್ಯಯನಕ್ಕೆ ಅವು ಬಳಸಿರುವ ಕ್ರಮಗಳು ಬೇರೆ ಬೇರೆ. ಹಾಗೆಯೇ ಅಂಕಿ ಅಂಶಗಳೂ

ಬಡವರ ಸಂಖ್ಯೆ ಕಡಿಮೆಯಾಗುತ್ತಿದೆಯೇ? Read More »

Abhijit sen-ಜನಪರ ಕಾಳಜಿಯ ಅರ್ಥಶಾಸ್ತ್ರಜ್ಞ ಇನ್ನಿಲ್ಲ

’ಕೃಷಿ ಉತ್ಪನ್ನಗಳು, ಕನಿಷ್ಠ ಬೆಂಬಲ ಬೆಲೆ ಲೆಕ್ಕ ಹಾಕುವಾಗ ಕೇವಲ ರೈತರು ನೇರವಾಗಿ ಮಾಡುವ ಖರ್ಚನ್ನಷ್ಟೇ ಅಲ್ಲ, ಅವರ ಕುಟುಂಬದ ಶ್ರಮವನ್ನು, ಬರಬಹುದಾಗಿದ್ದ ಬಾಡಿಗೆ, ಬಡ್ಡಿಯನ್ನೂ ಗಣನೆಗೆ ತೆಗೆದುಕೊಳ್ಳಬೇಕು.’ ಎಂದು ಪ್ರಖ್ಯಾತ ಗ್ರಾಮೀಣ ಅರ್ಥಶಾಸ್ತ್ರಜ್ಞ ಅಭಿಜಿತ್ ಸೇನ್ ವಾದಿಸಿದ್ದರು. ಇದು ಸ್ವಾಮಿನಾಥನ್ ವರದಿಯ ಶಿಪಾರಸ್ಸಿನಲ್ಲಿ ಸ್ವಲ್ಪ ಮಾರ್ಪಾಡಿನೊಂದಿಗೆ ಸೇರ್ಪಡೆಯಾಯಿತು. ಸಿ೨ ವಿಧಾನ ಎಂದು ಕರೆಯುವ ಈ ಕ್ರಮ ಮುಂದೆ ಕೃಷಿಕರ ಪ್ರಮುಖ ಬೇಡಿಕೆಯಾಯಿತು. ಸಾರ್ವತ್ರಿಕ ಪಡಿತರ ಪದ್ಧತಿಯನ್ನು ಬಲವಾಗಿ ಪ್ರತಿಪಾದಿಸಿದರು. ದೇಶಾದ್ಯಂತ ಅವಶ್ಯಕತೆ ಇರುವ ಎಲ್ಲರಿಗೂ ಗೋಧಿ

Abhijit sen-ಜನಪರ ಕಾಳಜಿಯ ಅರ್ಥಶಾಸ್ತ್ರಜ್ಞ ಇನ್ನಿಲ್ಲ Read More »

ಬ್ಯಾಂಕಿಂಗ್ ಕ್ಷೇತ್ರದ ಸಂಶೋಧನೆಗೆ ಸಂದ ನೋಬೆಲ್

ಈ ಬಾರಿಯ ಅರ್ಥಶಾಸ್ತ್ರದ ನೋಬೆಲ್ ಬಹುಮಾನ ಬ್ಯಾಂಕ್ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದ ವಾಷಿಂಗ್‌ಟನ್ ಬ್ರೂಕಿಂಗ್ಸ್ ಸಂಸ್ಥೆಯಲ್ಲಿ ಕೆಲಸಮಾಡುತ್ತಿರುವ ಡಾ ಬೆನ್ ಶಾಲೋಮ್ ಬರ್ನಾಂಕಿ, ಶಿಕಾಗೊ ವಿಶ್ವವಿದ್ಯಾನಿಲಯದ ಪ್ರೊ. ಡಗ್ಲಸ್ ವಾರೆನ್ ಡೈಮಂಡ್, ಸೆಂಟ್ ಲೂಯಿಸ್‌ನ ವಾಷಿಂಗ್‌ಟನ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾದ ಫಿಲಿಪ್ ಎಚ್ ಡಿವಿಗ್ ಇವರಿಗೆ ಲಭಿಸಿದೆ. ಇಂದು ನಮ್ಮನ್ನು ಕಾಡುತ್ತಿರುವ ಹಣಕಾಸು ಬಿಕ್ಕಟ್ಟು ಇದಕ್ಕೆ ಪ್ರೇರಣೆಯಾಗಿರಬಹುದು. ಬಹುಮಾನ ಪಡೆದವರಲ್ಲಿ ಬೆನ್ ಬರ್ನಾಂಕಿಯವರ ಸಂಶೋಧನೆ ೧೯೩೦ರ ಮಹಾನ್ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿದ್ದು. ಅದು ಮಹಾನ್ ಆರ್ಥಿಕ ಬಿಕ್ಕಟ್ಟನ್ನು

ಬ್ಯಾಂಕಿಂಗ್ ಕ್ಷೇತ್ರದ ಸಂಶೋಧನೆಗೆ ಸಂದ ನೋಬೆಲ್ Read More »