Articles

ಸಾಮ್ರಾಜ್ಯಶಾಹಿ ಮತ್ತು ಭಾರತದ ಮೇಲಿನ ಅದರ ದಬ್ಬಾಳಿಕೆ

ಪ್ರಭಾತ್ ಪಟ್ನಾಯಕ್ ಇದು ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಭಾರತೀಯ ಜನತೆಯ ಸಂಗ್ರಾಮದ ವಿಜಯದ ೭೮ನೇ ವಾರ್ಷಿಕೋತ್ಸವದ ದಿನ. ಇಂದು ಅಮೆರಿಕದ ಸಾಮ್ರಾಜ್ಯಶಾಹಿ ತನ್ನ ಆದೇಶವನ್ನು ಪಾಲಿಸುವಂತೆ ಭಾರತವನ್ನು ಬಹಿರಂಗವಾಗಿ ಒತ್ತಾಯಿಸುತ್ತಿದೆ. ಎಂತಹ ವಿಪರ್ಯಾಸದ ಸಂಗತಿಂ. ಆದರೆ, ಈ ಗುಣ ಸಾಮ್ರಾಜ್ಯಶಾಹಿಯ ಸ್ವಭಾವದಲ್ಲೇ ಇದೆ. ವಾಸ್ತವವಾಗಿ, ಈ ೭೮ ವರ್ಷಗಳಲ್ಲಿ ಅಮೆರಿಕದ ಸಾಮ್ರಾಜ್ಯಶಾಹಿ ಭಾರತವನ್ನು ತನ್ನ ಆದೇಶಗಳನ್ನು ಪಾಲಿಸುವಂತೆ ಮಾಡುವುದಕ್ಕೆ ಹಲವು ಪ್ರಯತ್ನಗಳನ್ನು ಮಾಡಿದೆ. ಆದರೆ, ಹಿಂದೆ ಮಾಡಿದ್ದ ಪ್ರಯತ್ನಗಳಿಗೂ ಈಗ ಮಾಡುತ್ತಿರುವ ಪ್ರಯತ್ನಗಳಲ್ಲಿ ಎರಡು ಮೂಲಭೂತ ವ್ಯತ್ಯಾಸಗಳಿವೆ. […]

ಸಾಮ್ರಾಜ್ಯಶಾಹಿ ಮತ್ತು ಭಾರತದ ಮೇಲಿನ ಅದರ ದಬ್ಬಾಳಿಕೆ Read More »

ಟ್ರಂಪ್ ದಾರಿಯಲ್ಲಿ ಹೋಗುವುದು ಬೇಡ

ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಟ್ರಂಪ್ ಕೊನೆಗೂ ಇಂಡಿಯಾ ಮೇಲೆ ೫೦% ಸುಂಕ ಹಾಕಿದ್ದಾರೆ. ದಿನಕ್ಕೊಂದು ಕ್ರಮದಿಂದ ಟ್ರಂಪ್ ಸದಾ ಸುದ್ದಿಯಲ್ಲಿದ್ದಾನೆ. ಎಷ್ಟೇ ಬೇಡ ಅಂದರೂ ಅದು ಜಗತ್ತನ್ನು, ಜಗತ್ತಿನ ಆರ್ಥಿಕತೆಯನ್ನು ಒಂದಲ್ಲ ಒಂದು ರೀತಿ ಕಾಡುತ್ತಲೇ ಇದೆ. ಹಾಗಾಗಿ ಅದನ್ನು ಅರ್ಥಮಾಡಿಕೊಂಡು ಎದುರಿಸುವುದು ಅನಿವಾರ್ಯವಾಗುತ್ತದೆ. ಭಾರತದ ಸಧ್ಯದ ಸರ್ಕಾರ ಆತ್ಮೀಯ ಸ್ನೇಹಿತ ಎಂದು ಪರಿಗಣಿಸಿದ್ದ ಟ್ರಂಪ್ ಇಂದು ನಮ್ಮ ವಿರುದ್ಧ ಸುಂಕದ ಯುದ್ಧ ಸಾರಿದ್ದಾನೆ. ದಿನೇ ದಿನೇ ಹೊಸ ಆಯಾಮ ಪಡೆದುಕೊಳ್ಳುತ್ತಿರುವ ಟ್ರಂಪ್ ನೀತಿಯನ್ನು ಕುರಿತಂತೆ ಯೋಜನಾ

ಟ್ರಂಪ್ ದಾರಿಯಲ್ಲಿ ಹೋಗುವುದು ಬೇಡ Read More »

ಆಫ್ರಿಕಾ: ಸ್ವಾತಂತ್ರ್ಯದ ಹುಡುಕಾಟ

  ಆಫ್ರಿಕಾ ಸುದ್ದಿಯಲ್ಲಿದೆ. ಟೋಗೊದಲ್ಲಿ ಯುವಜನ ಸರ್ಕಾರದ ವಿರುದ್ಧ ಬೀದಿಗಿಳಿದಿದ್ದಾರೆ. ಬುರ್ಕಿನಾ ಫಾಸೊ, ಮಾಲಿ, ನೈಜೆರ್‌ನಲ್ಲಿ ಮಿಲಿಟರಿ ದಂಗೆಗಳಾಗಿವೆ. ಹೊಸ ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ದಂಗೆಗಳು ನಡೆಯುತ್ತಿರುವ ಬಹುತೇಕ ದೇಶಗಳು ಹಿಂದೆ ಫ್ರಾನ್ಸ್‌ನ ವಸಾಹತುಗಳಾಗಿದ್ದವು. ಈ ದೇಶಗಳಲ್ಲಿನ ಸಂಪನ್ಮೂಲವನ್ನು ಫ್ರಾನ್ಸ್ ಹಲವು ದಶಕಗಳಿಂದ ನಿರಂತರವಾಗಿ ಲೂಟಿ ಹೊಡೆದು, ಅತ್ಯಂತ ಕ್ರೂರವಾಗಿ ಆಡಳಿತ ನಡೆಸಿದೆ. ಆಫ್ರಿಕಾದವರು ತೀವ್ರವಾದ ಹೋರಾಟ ನಡೆಸಿದ್ದರಿಂದ 1950ರ ಸುಮಾರಿನಲ್ಲಿ ಈ ದೇಶಗಳು ಸ್ವತಂತ್ರವಾದವು. ಆದರೆ, ಬಹುತೇಕ ದೇಶಗಳಿಗೆ ಬರೀ ಹೆಸರಿಗಷ್ಟೇ ಸ್ವಾತಂತ್ರ್ಯ ದೊರೆತಿದೆ. ಸ್ವಾತಂತ್ರ್ಯ

ಆಫ್ರಿಕಾ: ಸ್ವಾತಂತ್ರ್ಯದ ಹುಡುಕಾಟ Read More »