Economists

Amarthya sen-ಜನಪರ ಕಾಳಜಿಯ ತೀಕ್ಷ್ಣ ತಾರ್ಕಿಕ ಮನಸ್ಸಿನ ಅರ್ಥಶಾಸ್ತ್ರಜ್ಞ- ಅಮರ್ತ್ಯ ಸೇನ್

  ಟಿ ಎಸ್ ವೇಣುಗೋಪಾಲ್   “ಒಂದು ಮದ್ಯಾಹ್ನ, ಒಬ್ಬ ಯುವಕ ಜೋರಾಗಿ ಕಿರುಚಿಕೊಂಡು ನಮ್ಮ ಮನೆಯ ಮುಂದೆ ಓಡಿಕೊಂಡು ಬಂದ. ಮೈಯೆಲ್ಲಾ ರಕ್ತಮಯವಾಗಿತ್ತು. ಯಾರೋ ಅವನನ್ನು ಚಾಕುವಿನಿಂದ ಇರಿದಿದ್ದರು. ಆತ ಖಾದಿರ್ ಮಿಯಾ ಅಂತ ಒಬ್ಬ ಮುಸ್ಲಿಂ ಕೆಲಸಗಾರ. ಕೆಲಸ ಹುಡುಕಿಕೊಂಡ ಇಲ್ಲಿಗೆ ಬಂದಿದ್ದ. ದಾರಿಯಲ್ಲಿ ಯಾರೋ ಮತಾಂಧರು ಅವನನ್ನು ಇರಿದಿದ್ದರು. ನಮ್ಮ ತಂದೆ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ’ಆಗದವರೂ ಇರುವ ಕಡೆ, ಅದೂ ಕೋಮು ಗಲಭೆಯ ಸಮಯದಲ್ಲಿ ಹೋಗಬೇಡ’ ಅಂತ ಅವನ ಹೆಂಡತಿ […]

Amarthya sen-ಜನಪರ ಕಾಳಜಿಯ ತೀಕ್ಷ್ಣ ತಾರ್ಕಿಕ ಮನಸ್ಸಿನ ಅರ್ಥಶಾಸ್ತ್ರಜ್ಞ- ಅಮರ್ತ್ಯ ಸೇನ್ Read More »

V K R V Rao-ವಿ ಕೆ ಆರ್ ವಿ ರಾವ್- ಸಂಸ್ಥೆಗಳ ಶಿಲ್ಪಿ

  ವಿಜಯೇಂದ್ರ ರಾವ್   ವಿಜಯೇಂದ್ರ ಕಸ್ತೂರಿ ರಂಗ ವರದರಾಜ (ವಿ.ಕೆ.ಆರ್.ವಿ.) ರಾವ್ ಸ್ವಾತಂತ್ರ್ಯೋತ್ತರ ಭಾರತೀಯ ಅರ್ಥಶಾಸ್ತ್ರದ ಕ್ಷೇತ್ರದಲ್ಲಿ ದಿಗ್ಗಜರು. ಅವರು ಸ್ಥಾಪಿಸಿದ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ (ಡಿಎಸ್‌ಇ) ಮತ್ತು ಇನ್‌ಸ್ಟಿಟ್ಯೂಟ್ ಫಾರ್ ಇಕನಾಮಿಕ್ ಗ್ರೋತ್ (ಐಇಜಿ) ಎರಡು ಸಂಸ್ಥೆಗಳು ಭಾರತದಲ್ಲಿ ಆರ್ಥಿಕ ಮತ್ತು ಸಮಾಜಶಾಸ್ತ್ರೀಯ ತರಬೇತಿ ಮತ್ತು ಸಂಶೋಧನೆಗೆ ಬೇಕಾದ ಮೂಲಸೌಕರ್ಯವನ್ನು ಒದಗಿಸುವ ಕೇಂದ್ರಗಳು. ಹಾಗೆಯೇ ಅವರು ಸ್ಥಾಪಿಸಿದ ಇನ್ನೊಂದು ಮಹತ್ವದ ಸಂಸ್ಥೆ ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಫಾರ್ ಸೋಶಿಯಲ್ ಅಂಡ್ ಇಕನಾಮಿಕ್ ಚೇಂಜ್ (ಐಎಸ್‌ಇಸಿ).

V K R V Rao-ವಿ ಕೆ ಆರ್ ವಿ ರಾವ್- ಸಂಸ್ಥೆಗಳ ಶಿಲ್ಪಿ Read More »

Abhijit sen-ಜನಪರ ಕಾಳಜಿಯ ಅರ್ಥಶಾಸ್ತ್ರಜ್ಞ ಇನ್ನಿಲ್ಲ

’ಕೃಷಿ ಉತ್ಪನ್ನಗಳು, ಕನಿಷ್ಠ ಬೆಂಬಲ ಬೆಲೆ ಲೆಕ್ಕ ಹಾಕುವಾಗ ಕೇವಲ ರೈತರು ನೇರವಾಗಿ ಮಾಡುವ ಖರ್ಚನ್ನಷ್ಟೇ ಅಲ್ಲ, ಅವರ ಕುಟುಂಬದ ಶ್ರಮವನ್ನು, ಬರಬಹುದಾಗಿದ್ದ ಬಾಡಿಗೆ, ಬಡ್ಡಿಯನ್ನೂ ಗಣನೆಗೆ ತೆಗೆದುಕೊಳ್ಳಬೇಕು.’ ಎಂದು ಪ್ರಖ್ಯಾತ ಗ್ರಾಮೀಣ ಅರ್ಥಶಾಸ್ತ್ರಜ್ಞ ಅಭಿಜಿತ್ ಸೇನ್ ವಾದಿಸಿದ್ದರು. ಇದು ಸ್ವಾಮಿನಾಥನ್ ವರದಿಯ ಶಿಪಾರಸ್ಸಿನಲ್ಲಿ ಸ್ವಲ್ಪ ಮಾರ್ಪಾಡಿನೊಂದಿಗೆ ಸೇರ್ಪಡೆಯಾಯಿತು. ಸಿ೨ ವಿಧಾನ ಎಂದು ಕರೆಯುವ ಈ ಕ್ರಮ ಮುಂದೆ ಕೃಷಿಕರ ಪ್ರಮುಖ ಬೇಡಿಕೆಯಾಯಿತು. ಸಾರ್ವತ್ರಿಕ ಪಡಿತರ ಪದ್ಧತಿಯನ್ನು ಬಲವಾಗಿ ಪ್ರತಿಪಾದಿಸಿದರು. ದೇಶಾದ್ಯಂತ ಅವಶ್ಯಕತೆ ಇರುವ ಎಲ್ಲರಿಗೂ ಗೋಧಿ

Abhijit sen-ಜನಪರ ಕಾಳಜಿಯ ಅರ್ಥಶಾಸ್ತ್ರಜ್ಞ ಇನ್ನಿಲ್ಲ Read More »

ಗಾಂಧಿ, ಕುಮಾರಪ್ಪ ಹಾಗೂ ಇಂದು

ರಾಷ್ಟ್ರಪತಿ ಭವನದಲ್ಲಿ ಯೋಜನಾ ಆಯೋಗದ ಸಲಹಾ ಸಮಿತಿಯ ಸಭೆಯನ್ನು ಕರೆಯಲಾಗಿತ್ತು. ಜೆ ಸಿ ಕುಮಾರಪ್ಪನವರು ಟಾಂಗದಲ್ಲಿ ಅಲ್ಲಿಗೆ ಬರುತ್ತಿದ್ದರು. ಜವಹರಲಾಲ್ ಅವರ ಕಾರು ಆ ಹಾದಿಯಲ್ಲೇ ಬರಬೇಕಾದ್ದರಿಂದ ಟಾಂಗವನ್ನು ರಸ್ತೆಯ ಆಚೆಗೆ ತೆಗೆಯಲು ಹೇಳಿದರು. ಸಿಟ್ಟಾದ ಕುಮಾರಪ್ಪನವರು ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಮುಂದಿನ ಬಾರಿ ತಾನು ಎತ್ತಿನಗಾಡಿಯಲ್ಲಿ ಬರುವುದಾಗಿ ಹೇಳಿದರು. ಪ್ರಜಾಸತ್ತೆಯಲ್ಲಿ ಪ್ರಧಾನ ಮಂತ್ರಿಯೂ ಒಂದೇ, ಎತ್ತಿನ ಗಾಡಿ ಓಡಿಸುವವನೂ ಒಂದೇ ಎಂದರು. ನೆಹರು ಕುಮಾರಪ್ಪನವರನ್ನು ಸಮಾಧಾನ ಪಡಿಸುತ್ತಾ ಆ ರಸ್ತೆಯಲ್ಲಿ ಮಿಲಿಟರಿ ವಾಹನಗಳು ಹೆಚ್ಚಾಗಿ

ಗಾಂಧಿ, ಕುಮಾರಪ್ಪ ಹಾಗೂ ಇಂದು Read More »