Noble prize

ಬ್ಯಾಂಕಿಂಗ್ ಕ್ಷೇತ್ರದ ಸಂಶೋಧನೆಗೆ ಸಂದ ನೋಬೆಲ್

ಈ ಬಾರಿಯ ಅರ್ಥಶಾಸ್ತ್ರದ ನೋಬೆಲ್ ಬಹುಮಾನ ಬ್ಯಾಂಕ್ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದ ವಾಷಿಂಗ್‌ಟನ್ ಬ್ರೂಕಿಂಗ್ಸ್ ಸಂಸ್ಥೆಯಲ್ಲಿ ಕೆಲಸಮಾಡುತ್ತಿರುವ ಡಾ ಬೆನ್ ಶಾಲೋಮ್ ಬರ್ನಾಂಕಿ, ಶಿಕಾಗೊ ವಿಶ್ವವಿದ್ಯಾನಿಲಯದ ಪ್ರೊ. ಡಗ್ಲಸ್ ವಾರೆನ್ ಡೈಮಂಡ್, ಸೆಂಟ್ ಲೂಯಿಸ್‌ನ ವಾಷಿಂಗ್‌ಟನ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾದ ಫಿಲಿಪ್ ಎಚ್ ಡಿವಿಗ್ ಇವರಿಗೆ ಲಭಿಸಿದೆ. ಇಂದು ನಮ್ಮನ್ನು ಕಾಡುತ್ತಿರುವ ಹಣಕಾಸು ಬಿಕ್ಕಟ್ಟು ಇದಕ್ಕೆ ಪ್ರೇರಣೆಯಾಗಿರಬಹುದು. ಬಹುಮಾನ ಪಡೆದವರಲ್ಲಿ ಬೆನ್ ಬರ್ನಾಂಕಿಯವರ ಸಂಶೋಧನೆ ೧೯೩೦ರ ಮಹಾನ್ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿದ್ದು. ಅದು ಮಹಾನ್ ಆರ್ಥಿಕ ಬಿಕ್ಕಟ್ಟನ್ನು […]

ಬ್ಯಾಂಕಿಂಗ್ ಕ್ಷೇತ್ರದ ಸಂಶೋಧನೆಗೆ ಸಂದ ನೋಬೆಲ್ Read More »

ಬೃಹತ್ ಉದ್ಯಮಗಳ ಕರಾಳ ಮುಖ

ಡರನ್ ಅಸಿಮೊಗ್ಲು [ಡರನ್ ಅಸಿಮೊಗ್ಲು ಎಂಐಟಿಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರು. ಅರ್ಥಶಾಸ್ತ್ರದಲ್ಲಿ ತುಂಬಾ ದೊಡ್ಡ ಹೆಸರು. ವೈ ನೇಷನ್ಸ್ ಫೇಲ್ ಪುಸ್ತಕದಿಂದ ಪ್ರಖ್ಯಾತರಾದವರು. ಈ ಬಾರಿ ಅವರಿಗೆ ನೋಬೆಲ್ ಬಹುಮಾನ ಬರಬಹುದೆಂಬ ನಿರೀಕ್ಷೆ ಇತ್ತು. ಅವರು ಪ್ರಾಜೆಕ್ಟ್ ಸಿಂಡಿಕೇಟಿನಲ್ಲಿ ಬರೆದಿರುವ ಲೇಖನ ’ವೈ ಬಿಸಿನೆಸಸ್ ಮಿಸ್ ಬಿಹೇವ್’ ಲೇಖನ ಓದಬೇಕಾದ ಲೇಖನವೆನಿಸಿತು. ಅದನ್ನು ಸಂಗ್ರಹಿಸಿ ಪೋಸ್ಟ್ ಮಾಡುತ್ತಿದ್ದೇನೆ.] ಯಶಸ್ವಿ ಉದ್ಯಮಿಗಳು ನಾಯಕರೋ ಇಲ್ಲ, ಖಳನಾಯಕರೋ? ಕಥೆ, ಕಾದಂಬರಿಗಳಲ್ಲಿ ಎರಡಕ್ಕೂ ಉದಾಹರಣೆಗಳು ಹೇರಳವಾಗಿ ಸಿಗುತ್ತವೆ. ಸಮಾಜ ವಿಜ್ಞಾನದಲ್ಲೂ ವಿಭಿನ್ನ ಅಭಿಪ್ರಾಯಗಳಿವೆ.

ಬೃಹತ್ ಉದ್ಯಮಗಳ ಕರಾಳ ಮುಖ Read More »

ಸ್ವಾತಂತ್ರ್ಯದ ಹಾದಿಯಲ್ಲಿ-ಜೋಸೆಫ್ ಸ್ಟಿಗ್‌ಲಿಟ್ಜ್ ಅವರ ಹೊಸ ಪುಸ್ತಕ

ಕೋವಿಡ್ ಪಿಡುಗಿನ ಸಮಯಲ್ಲಿ ಅಮೇರಿಕೆಯಲ್ಲಿ ಟ್ರಂಪ್‌ನ ಕೆಲವು ಗೆಳೆಯರು ತಾವು ಮಾಸ್ಕ್ ಧರಿಸುವುದಿಲ್ಲ. ಅದು ತಮ್ಮ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅಡ್ಡಿ ಅಂತ ಗಲಾಟೆ ಮಾಡುತ್ತಿದ್ದರು. ಮಾಸ್ಕ್ ಧರಿಸುವುದರಿಂದ ಸ್ವಲ್ಪ ಅನಾನುಕೂಲವಾಗಬಹುದು. ಆದರೆ ಮಾಸ್ಕ್ ಧರಿಸದೇ ಇರುವುದರಿಂದ ಉಳಿದವರ ಸ್ವಾತಂತ್ರಕ್ಕೆ ಅಂದರೆ ಅವರ ಬದುಕುವ ಹಕ್ಕಿಗೆ ಅಡ್ಡಿ ಮಾಡುತ್ತೇವೆ ಎಂದು ಜೋಸೆಫ್ ಸ್ಟಿಗ್‌ಲಿಟ್ಜ್ ವಾದಿಸುತ್ತಿದ್ದರು. ಒಬ್ಬರ ಸ್ವಾತಂತ್ರ್ಯ ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತದೆ. ಈ ಚಿಂತನೆ ಬೆಳೆದು “ರೋಡ್ ಟು ಫ್ರೀಡಂ: ಎಕನಾಮಿಕ್ಸ್ ಅಂಡ್ ದಿ ಗುಡ್ ಸೊಸೈಟಿ” ಒಂದು

ಸ್ವಾತಂತ್ರ್ಯದ ಹಾದಿಯಲ್ಲಿ-ಜೋಸೆಫ್ ಸ್ಟಿಗ್‌ಲಿಟ್ಜ್ ಅವರ ಹೊಸ ಪುಸ್ತಕ Read More »

25ರ ನೋಬೆಲ್

[ಈ ವರ್ಷದ ಅರ್ಥಶಾಸ್ತ್ರದ ನೋಬೆಲ್ ಡೆರನ್ ಅಸಿಮೊಗ್ಲು, ಜೇಮ್ಸ್ ಎ ರಾಬಿನ್ಸನ್, ಹಾಗೂ ಸಿಮನ್ ಜಾನ್ಸನ್ ಅವರಿಗೆ ಲಭಿಸಿದೆ. ಡೆರನ್ ಅಸಿಮೊಗ್ಲು ಇಸ್ತಾಂಬುಲ್‌ನಲ್ಲಿ ಜನಿಸಿದರು. ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್‌ನಲ್ಲಿ ಪಿಎಚ್‌ಡಿ ಮಾಡಿದರು. ನಂತರ ಈಗ ಎಂಐಟಿಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಜೇಮ್ಸ್ ಎ ರಾಬಿನ್ಸನ್ ಯೇಲ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಮಾಡಿದರು. ಸದ್ಯ ಷಿಕ್ಯಾಗೋ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಸಿಮನ್ ಜಾನ್ಸನ್ ಎಂಐಟಿಯಲ್ಲಿ ಪಿಎಚ್‌ಡಿ ಮಾಡಿ, ಅಲ್ಲೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.] ಯಾಕೆ ಕೆಲ ದೇಶಗಳು

25ರ ನೋಬೆಲ್ Read More »

ವೇತನ ತಾರತಮ್ಯ ಇನ್ನೂ ಯಾಕಿದೆ?

೧೯೭೦ರಲ್ಲಿ ಸಾಮಾಜಿಕ ಚರಿತ್ರೆಯ ಬಗ್ಗೆ, ಕುಟುಂಬ ಹಾಗೂ ಕುಟುಂಬದ ಆರ್ಥಿಕತೆಯ ಬಗ್ಗೆ ಅಧ್ಯಯನ ಮಾಡೋ ಆಸಕ್ತಿ ಪ್ರಾರಂಭವಾಗಿತ್ತು. ಆದರೆ ಒಬ್ಬ ವ್ಯಕ್ತಿಯ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಆಕೆ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಳು. ಅದ್ಯಾಕೊ ಎಲ್ಲರೂ ಮನೆಯೊಳಗೆ ದುಡಿಯುತ್ತಿದ್ದ ಮಡದಿ, ತಾಯಿಯನ್ನು ಯಾರೂ ಗಮನಿಸಿಯೇ ಇರಲಿಲ್ಲ. ಅವಳ ಬಗ್ಗೆ ಮಾಹಿತಿಯೇ ಇರಲಿಲ್ಲ. ಇನ್ನೂ ಮಾತನಾಡೋದು ಎಲ್ಲಿಂದ ಬಂತು. ಅವಳ ಚರಿತ್ರೆಯನ್ನು ಬರೆಯಬೇಕು ಅಂತ ತೀರ್ಮಾನಿಸಿದೆ. ಹೀಗೆ ಶುರು ಆಯಿತು ಕ್ಲಾಡಿಯಾ ಗೋಲ್ಡಿನ್ ಅವರ ಜೆಂಡರ್ ಗ್ಯಾಪ್ ಕುರಿತ

ವೇತನ ತಾರತಮ್ಯ ಇನ್ನೂ ಯಾಕಿದೆ? Read More »