Others

ಆರ್ಥಿಕತೆಯನ್ನು ಅಲ್ಲಾಡಿಸುತ್ತಿರುವ ಕ್ರಿಪ್ಟೊ ವ್ಯವಹಾರ

ಕ್ರಿಪ್ಟೊ ಗುಳ್ಳೆ ಮತ್ತೆ ಒಡೆದಿದೆ. ಕ್ರಿಪ್ಟೊ ಸಾಮ್ರಾಜ್ಯದ ದೊಡ್ಡ ಸಾಮ್ರಾಟ ಸ್ಯಾಂ ಬ್ಯಾಂಕ್‌ಮನ್ ಫ್ರೀಡ್ ದಿವಾಳಿಯಾಗಿದ್ದಾನೆ. ಕಳೆದ ಎರಡು ವರ್ಷಗಳಲ್ಲಿ ೩೦ ವರ್ಷದ ಸ್ಯಾಂ ೩೨ಬಿಲಿಯನ್ ಡಾಲರ್ ಮೌಲ್ಯದ ಕ್ರಿಪ್ಟೊ ವಿನಿಮಯ ಕಂಪೆನಿ ಎಫ್‌ಟಿಎಕ್ಸ್ ಕಟ್ಟಿದ್ದ. ಶೂನ್ಯದಿಂದ ಕೆಲವೇ ದಿನಗಳಲ್ಲಿ ೩ ಟ್ರಿಲಿಯನ್ ಮಾರುಕಟ್ಟೆಯಾಗಿ ಬೆಳೆದಿದ್ದ ಕ್ರಿಪ್ಟೊ ಜಗತ್ತಿನ ಎರಡನೆಯ ಅತಿ ದೊಡ್ಡ ಶ್ರೀಮಂತ ಎನಿಸಿಕೊಂಡಿದ್ದ. ಬೇರೆ ಕ್ರಿಪ್ಟೋ ಉದ್ದಿಮೆಗಳು ಸಂಕಟದಲ್ಲಿದ್ದಾಗ ನೂರಾರು ಮಿಲಿಯನ್ ಹಣ ಖರ್ಚು ಮಾಡಿದ್ದ. ಈಗ ಮತ್ತೆ ಅದು ಶೂನ್ಯಕ್ಕೆ ಹೋಗಲಿದೆಯೇ ಅನ್ನುವ […]

ಆರ್ಥಿಕತೆಯನ್ನು ಅಲ್ಲಾಡಿಸುತ್ತಿರುವ ಕ್ರಿಪ್ಟೊ ವ್ಯವಹಾರ Read More »

ಬಡವರ ಸಂಖ್ಯೆ ಕಡಿಮೆಯಾಗುತ್ತಿದೆಯೇ?

april, 2022 ಇತ್ತೀಚಿನ ದಿನಗಳಲ್ಲಿ ಬಡತನ ಹಾಗೂ ಅಸಮಾನತೆ ತುಂಬಾ ಸುದ್ದಿ ಮಾಡುತ್ತಿವೆ. ದಿನಪತ್ರಿಕೆಗಳಲ್ಲಿ ದೊಡ್ಡದಾಗಿ ಕಾಣಿಸಿಕೊಳ್ಳುತ್ತಿವೆ. ಪತ್ರಿಕೆಗಳು ಸಂಪಾದಕೀಯ ಬರೆಯುತ್ತಿವೆ. ತರಾವರಿ ವಿಶ್ಲೇಷಣೆಗಳು ಪ್ರಕಟಗೊಳ್ಳುತ್ತಿವೆ. ‘ಬಡತನ ನಿರ್ಮೂಲನವಾಗಿದೆ’ ಅಂತ ಒಂದು ಸುದ್ದಿ ಹೇಳಿದರೆ. ‘ಬಡತನದ ಪ್ರಮಾಣದಲ್ಲಿ ಎಂದೂ ಇಲ್ಲದ ಹೆಚ್ಚಳ’ ಅಂತ ಮತ್ತೊಂದು ಸುದ್ದಿ ಹೇಳುತ್ತದೆ. ಒಂದೊಂದು ಅಧ್ಯಯನಗಳು ಒಂದೊಂದು ಬಗೆಯ ತೀರ್ಮಾನಕ್ಕೆ ಬರುತ್ತಿವೆ. ಯಾಕೆ ಇಷ್ಟೊಂದು ವೈಪರಿತ್ಯ? ಕಾರಣ ತುಂಬಾ ಸರಳ. ಅಧ್ಯಯನಕ್ಕೆ ಅವು ಬಳಸಿರುವ ಕ್ರಮಗಳು ಬೇರೆ ಬೇರೆ. ಹಾಗೆಯೇ ಅಂಕಿ ಅಂಶಗಳೂ

ಬಡವರ ಸಂಖ್ಯೆ ಕಡಿಮೆಯಾಗುತ್ತಿದೆಯೇ? Read More »

ಗುಲಾಬಿ ನೋಟಿಗೆ ಬೈ ಬೈ

ಎರಡು ಸಾವಿರ ರೂಪಾಯಿ ನೋಟುಗಳು ಹಲವು ದಿನಗಳಿಂದಲೇ ಅಪರೂಪವಾಗಿತ್ತು, ಎಟಿಎಂಗಳಲ್ಲೂ ಸಿಗುತ್ತಿರಲಿಲ್ಲ. ಈಗ ಭಾರತೀಯ ರಿಸರ್ವ್ ಬ್ಯಾಂಕ್ ಅದನ್ನು ಹಿಂತೆಗೆದುಕೊಂಡಿದೆ. ತನ್ನ ’ಸ್ವಚ್ಛ ನೋಟು ನೀತಿ’ಗೆ ಅನುಗುಣವಾಗಿ ಅಂದರೆ ನೋಟುಗಳನ್ನು ಸ್ವಚ್ಛವಾಗಿ ಹಾಗೂ ಚಲಾವಣೆಯಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ಜಾರಿಯಾದ ನೀತಿಗೆ ಅನುಗುಣವಾಗಿ ೨೦೦೦ ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯಲು ನಿರ್ಧರಿಸಿದೆ. ಆದರೆ ೨೦೦೦ ರೂಪಾಯಿ ಮುಖಬೆಲೆಯ ನೋಟುಗಳು ಕಾನೂನುಬದ್ಧ ನೋಟಾಗಿಯೇ ಮುಂದುವರಿಯುತ್ತದೆ. ನೋಟುಗಳ ವಾಪಸಾತಿಯನ್ನು ಒಂದು ನಿರ್ದಿಷ್ಟ ಆವಧಿಯಲ್ಲಿ ಪೂರ್ಣಗೊಳಿಸಲು ಮತ್ತು ಇದಕ್ಕಾಗಿ

ಗುಲಾಬಿ ನೋಟಿಗೆ ಬೈ ಬೈ Read More »

ಅಭಿಜಿತ್ ಬ್ಯಾನರ್ಜಿ-ಪೌಷ್ಠಿಕಾಂಶದ ಕೊರತೆ

[ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಅಭಿಜಿತ್ ಬ್ಯಾನರ್ಜಿ ಒಂದು ಅಂಕಣ ಬರೆಯುತ್ತಾರೆ. ಸಾಕಷ್ಟು ಭಿನ್ನವಾಗಿದೆ. ಅದರಲ್ಲಿ ಅರ್ಥಶಾಸ್ತ್ರ, ಚರಿತ್ರೆ, ಅಡುಗೆ ಹೀಗೆ ಏನೇನೊ ಬರುತ್ತದೆ. ಈ ಬಾರಿ ಅಡುಗೆ ರೆಸಿಪಿ ಇತ್ತಿಲ್ಲ. ನಾನೇ ಅವರು ಉಲ್ಲೇಖಿಸಿರುವ ಗುರುದ್ವಾರದಲ್ಲಿ ಕೊಡುವ ದಾಲ್‌ನ ಒಂದು ರೆಸಿಪಿಯನ್ನು ಸೇರಿಸಿದ್ದೇನೆ. ಒಮ್ಮೆ ಓದಿ ನೋಡಿ.] ನನ್ನ ಅಜ್ಜ ವಿಚಿತ್ರ. ಸ್ಥಿತವಂತನಲ್ಲದಿದ್ದರೂ ತುಂಬಾ ಹಣ ಖರ್ಚು ಮಾಡುತ್ತಿದ್ದ. ಸಾಮಾಜಿಕವಾಗಿ ವಿಶಾಲವಾದ ಮನಸ್ಸು. ಅವನಿಗೆ ತೀರಾ ಅತ್ಮೀಯನಾಗಿದ್ದವನು ಒಬ್ಬ ಮುಸ್ಲಿಂ ಗೆಳೆಯ. ಅವರಿಬ್ಬರೂ ಓದೋದಕ್ಕೆ ಎಡಿನ್‌ಬರ್ಗ್‌ಗೆ

ಅಭಿಜಿತ್ ಬ್ಯಾನರ್ಜಿ-ಪೌಷ್ಠಿಕಾಂಶದ ಕೊರತೆ Read More »

ಯಂತ್ರಗಳನ್ನು ಕಳಚಬೇಕೆ?

ಗಾಂಧಿಯನ್ನು ಹಲವು ಜನ ಹಲವು ರೀತಿಯಲ್ಲಿ ಅರ್ಥಮಾಡಿಕೊಂಡಿದ್ದಾರೆ. ಅದು ಸಹಜ ಕೂಡ. ಗಾಂಧಿ ಮಾತುಗಳು ಎಷ್ಟೋ ಬಾರಿ ಗೋಜಲು ಗೋಜಲಾಗಿ ಕಾಣುತ್ತದೆ. ಇಂದು ಮಾತನಾಡಿದ್ದಕ್ಕಿಂತ ನಾಳೆ ಭಿನ್ನವಾಗಿ ಮಾತನಾಡಿರುತ್ತಾರೆ. ಅಥವಾ ಹಾಗೆ ತೋರುತ್ತದೆ. ಅಂದಿನ ಸಂದರ್ಭ ಬೇರೆಯಿತ್ತು ಅದಕ್ಕೆ ಹಾಗೆ ಮಾತನಾಡಿದ್ದಾರಾ, ಇರಬಹುದು. ಅಥವಾ ಅವರ ಅಭಿಪ್ರಾಯ ಬದಲಾಗಿದ್ದಿರಬಹುದೇ ಅದೂ ಇರಬಹುದು. ಹಾಗಾಗಿ ಗಾಂಧಿ ಒಂದು ವಿಷಯದ ಬಗ್ಗೆ ಹೀಗೆ ಹೇಳಿದ್ದಾರೆ ಅಂತ ಹೇಳಿದರೆ ಇನ್ನೊಬ್ಬರು ಬೇರೆ ಉಲ್ಲೇಖಗಳನ್ನು ನೀಡಿ ಗಾಂಧಿಯನ್ನು ಬೇರೆಯದೇ ರೀತಿಯಲ್ಲಿ ವ್ಯಾಖ್ಯಾನಿಸಬಹುದು. ಇನ್ನೂ

ಯಂತ್ರಗಳನ್ನು ಕಳಚಬೇಕೆ? Read More »

ಕಾಪ್ ೨೮ ಹವಾಮಾನದ ಬಿಸಿಯನ್ನು ತಣಿಸಬಲ್ಲದೆ?

ಸಂಯುಕ್ತ ರಾಷ್ಟ್ರಗಳ ಹವಾಮಾನ ಬದಲಾವಣೆಯ ೨೮ನೇ ಸಮ್ಮೇಳನ ಅಥವಾ ಕಾನ್ಪರೆನ್ಸ್ ಆಫ್ ಪಾರ್ಟಿಸ್- ಸಿಒಪಿ೨೮ ದುಬೈನ ಎಕ್ಸಪೊ ಸಿಟಿಯಲ್ಲಿ ನಡೆಯುತ್ತಿದೆ. ಜಾಗತಿಕ ತಾಪಮಾನವನ್ನು ನಿಯಂತ್ರಿಸಲು ಹವಾಮಾನದ ಬದಲಾವಣೆಯ ಪರಿಣಾಮವನ್ನು ತಗ್ಗಿಸುವ ನಿಟ್ಟಿನಿಂದ ನೀತಿಗಳನ್ನು ರೂಪಿಸಲು ಎಲ್ಲಾ ದೇಶಗಳು ಸೇರಿವೆ. ಪರಿಸರಕ್ಕೆ ಕಾರ್ಬನ್ ಡೈಆಕ್ಸೈಡ್ ಸೇರ್ಪಡೆಯ ಪ್ರಮಾಣವನ್ನು ತಗ್ಗಿಸುವುದು, ನವೀಕರಿಸಬಹುದಾದ ಇಂಧನದ ಬಳಕೆಯನ್ನು ಹಾಗೂ ಇಂಧನದ ಕ್ಷಮತೆಯನ್ನು ಹೆಚ್ಚಿಸುವುದು, ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ನೀತಿಗಳನ್ನು ರೂಪಿಸುವುದು, ಸಂಪನ್ಮೂಲವನ್ನು ಕ್ರೋಡೀಕರಿಸುವುದು ಈ ಬಗ್ಗೆ ಚರ್ಚಿಸಿ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗಿದೆ. ಸಿಒಪಿ ಸಮ್ಮೇಳನ

ಕಾಪ್ ೨೮ ಹವಾಮಾನದ ಬಿಸಿಯನ್ನು ತಣಿಸಬಲ್ಲದೆ? Read More »

ಬಜೆಟ್ ಹಾಗೂ ವಿತ್ತೀಯ ಕೊರತೆ

ಬಜೆಟ್ -2024 ಹಲವು ಪತ್ರಿಕೆಗಳಲ್ಲಿ ಚುನಾವಣೆ ಹತ್ತಿರದಲ್ಲಿದ್ದರೂ ದೊಡ್ಡ ಘೋಷಣೆಗಳನ್ನು ಬಜೆಟ್ಟಿನಲ್ಲಿ ಮಾಡಿಲ್ಲ ಅನ್ನುವ ಅಭಿಪ್ರಾಯವನ್ನು ಪ್ರಕಟಿಸಿವೆ. ಇದು ಚುನಾವಣಾ ವರ್ಷವಾಗಿರುವುದರಿಂದಲೇ ದೊಡ್ಡ ದೊಡ್ಡ ಭರವಸೆಗಳನ್ನು ಕೊಡಲು ಸಾಧ್ಯವಿಲ್ಲ ಅನ್ನುವುದನ್ನು ಗಮನಿಸಬೇಕು. ಈ ಸಮಯದಲ್ಲಿ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ಟನ್ನು ಮಂಡಿಸುವುದಿಲ್ಲ. ಚುನಾವಣೆಯ ನಂತರ ಸರ್ಕಾರ ಬದಲಾಗುವ ಸಾಧ್ಯತೆಗಳು ಇರುವುದರಿಂದ ಕೇವಲ ಮಧ್ಯಂತರ ಬಜೆಟ್ಟನ್ನು ಮಂಡಿಸಬಹುದು. ಆದರೆ ಮಧ್ಯಂತರ ಬಜೆಟ್ಟಿಗೆ ಸಂವಿಧಾನದಲ್ಲಿ ಅವಕಾಶವಿಲ್ಲದೇ ಇರುವುದರಿಂದ ಸರ್ಕಾರ ಚುನಾವಣೆಯ ಪ್ರಕ್ರಿಯೆ ಮುಗಿಯುವ ತನಕ ಆಡಳಿತ ನಡೆಸುವುದಕ್ಕಾಗಿ ಬೇಕಾದ ಹಣದ

ಬಜೆಟ್ ಹಾಗೂ ವಿತ್ತೀಯ ಕೊರತೆ Read More »

ಬಜೆಟ್ಟನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ-2024-1

ಚುನಾವಣೆಯ ವರ್ಷದಲ್ಲಿ ಪೂರ್ಣ ಪ್ರಮಾಣದ ಬಜೆಟ್ಟನ್ನು ಮಂಡಿಸುವುದಿಲ್ಲ. ಮುಂದಿನ ಸರ್ಕಾರ ಅಧಿಕಾರವಹಿಸಿಕೊಳ್ಳುವವರೆಗೆ ಸರ್ಕಾರಕ್ಕೆ ಅವಶ್ಯಕ ಖರ್ಚನ್ನು ಭರಿಸಲು ಅನುಕೂಲವಾಗುವ ಉದ್ದೇಶದಿಂದ ಮಂಡಿಸುವ ಮಧ್ಯಂತರ ಬಜೆಟ್ ಇದು. ಇದರಲ್ಲಿ ಯಾವುದೇ ಪ್ರಮುಖ ನೀತಿಯನ್ನು ಘೋಷಿಸುವುದಕ್ಕೆ ಚುನಾವಣಾ ನೀತಿಯ ಪ್ರಕಾರ ಅವಕಾಶವಿರುವುದಿಲ್ಲ. ಅದು ಚುನಾವಣೆಯ ಫಲಿತಾಂಶವನ್ನು ಪ್ರಭಾವಿಸುತ್ತದೆ ಅನ್ನುವ ಕಾರಣಕ್ಕಾಗಿ ಹಾಗೆ ಮಾಡಲಾಗುತ್ತದೆ. ಹೆಚ್ಚೆಂದರೆ ಸರ್ಕಾರ ಈ ಸಮಯದಲ್ಲಿ ತನ್ನ ಕಳೆದ ವರ್ಷದ ಅಥವಾ ಕಳೆದ ಹತ್ತು ವರ್ಷದ ಸಾಧನೆಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನು ಆಡಬಹುದು. ಹಾಗೆಯೇ ಸಾಮಾನ್ಯವಾಗಿ

ಬಜೆಟ್ಟನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ-2024-1 Read More »

ಎಂಎಸ್‌ಪಿ ಜಾರಿಯಾದರೆ ಸರ್ಕಾರ ದೀವಾಳಿಯಾಗಿಬಿಡುತ್ತದಾ?

T S Venugopal ಎಂಎಸ್‌ಪಿ ಅಂದರೆ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ೧೯೬೦ರಲ್ಲಿ ಪ್ರಾರಂಭವಾಯಿತು. ರೈತರ ಸ್ಥಿತಿ ಸುಧಾರಿಸುವ ಉದ್ದೇಶದಿಂದ ಯುಪಿಎ ಸರ್ಕಾರ ಎಂ ಎಸ್ ಸ್ವಾಮಿನಾಥನ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಕೃಷಿ ಆಯೋಗವನ್ನು ರಚಿಸಿತ್ತು. ಅದು ಐದು ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಅದರಲ್ಲಿ ಎಂಎಸ್‌ಪಿಯನ್ನು ನಿಗದಿಪಡಿಸುವುದಕ್ಕೆ ಸಮಗ್ರ ಉತ್ಪಾದನಾ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳಬೇಕೆಂಬ ಉಲ್ಲೇಖ ಬರುತ್ತದೆ. ಎಂಎಸ್‌ಪಿ ಲೆಕ್ಕಚಾರ ಮಾಡುವಾಗ ಸಮಗ್ರ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂಬುದು ಮೊದಲ ಬಾರಿಗೆ ಪ್ರಸ್ತಾಪನೆಗೆ ಬರುವುದು ಅಭಿಜಿತ್ ಸೇನ್

ಎಂಎಸ್‌ಪಿ ಜಾರಿಯಾದರೆ ಸರ್ಕಾರ ದೀವಾಳಿಯಾಗಿಬಿಡುತ್ತದಾ? Read More »