Artha

ಮಕ್ಕಳಿಗಾಗಿ ಅರ್ಥಶಾಸ್ತ್ರ

ಅಭಿಜಿತ್ ಬ್ಯಾನರ್ಜಿ ಹಾಗೂ ಎಸ್ಥರ್ ದುಫ್ಲೊ ಪೂರ್ ಎಕನಾಮಿಕ್ಸ್ – ರಿಥಿಂಕಿಂಗ್ ಪಾವರ್ಟಿ ಅಂಡ್ ವೇ ಟು ಎಂಡ್ ಇಟ್ ಪುಸ್ತಕವನ್ನು ೨೦೧೧ರಲ್ಲಿ ಪ್ರಕಟಿಸಿದ್ದರು. ಅದರ ಹೆಸರೇ ಸೂಚಿಸುವಂತೆ ಅದರಲ್ಲಿ ಬಡತನವನ್ನು ಕುರಿತಂತೆ ಮರುಚಿಂತನೆಯನ್ನು ಮಾಡಲಾಗಿದೆ. ಜೊತೆಗೆ ಅದನ್ನು ಕೊನೆಗಾಣಿಸುವ ಬಗೆಯೂ ಅದರಲ್ಲಿ ಚರ್ಚಿಸಲಾಗಿದೆ. ಇಲ್ಲಿ ಪೂರ್ ಅನ್ನುವ ಪದ ಇದು ಬಡತನದ ಬಗೆಗಿನ ಪುಸ್ತಕ ಅನ್ನುವುದನ್ನು ಸೂಚಿಸುತ್ತದೆ. ಜೊತೆಗೆ ಬಡತನವನ್ನು ಕುರಿತಂತೆ ಅರ್ಥಶಾಸ್ತ್ರದ ದಾರಿದ್ರ್ಯವನ್ನೂ ತೋರಿಸುತ್ತದೆ. ಅವರು ಹೇಳುವಂತೆ ಬಡತನವನ್ನು ಕುರಿತು ಇಂದು ನಡೆಯುತ್ತಿರುವ ಚರ್ಚೆಯಲ್ಲೇ […]

ಮಕ್ಕಳಿಗಾಗಿ ಅರ್ಥಶಾಸ್ತ್ರ Read More »

ಮನಮೋಹನ್ ಸಿಂಗ್ ನೆನಪಿನಲ್ಲಿ

[ಮನಮೋಹನ್ ಸಿಂಗ್ ಬಗ್ಗೆ ಏನೂ ಬರೆಯಲಿಕ್ಕೆ ಆಗಿರಲಿಲ್ಲ. ಸಧ್ಯಕ್ಕೆ ಅಮರ್ತ್ಯಸೇನ್ ಅವರು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಬರೆದ ಲೇಖನದ ಶೈಲಜ ಮಾಡಿದ ಅನುವಾದವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.] ಮನ್‌ಮೋಹನ್‌ಸಿಂಗ್ ಅವರು ಒಬ್ಬ ಶ್ರೇಷ್ಠ ವ್ಯಕ್ತಿ ಎಂದು ಹೇಳಿದರೆ, ಎಲ್ಲರಿಗೂ ತಿಳಿದಿರುವುದನ್ನೇ ಮತ್ತೆ ಹೇಳಿದಂತೆ. ಅವರೊಬ್ಬ ಪ್ರತಿಭಾವಂತ ರಾಜಕೀಯ ಧುರೀಣ, ದಾರ್ಶನಿಕ, ಅಸಾಧಾರಣ ಅರ್ಥಶಾಸ್ತ್ರಜ್ಞ, ಅತ್ಯುತ್ತಮ ಅಧ್ಯಾಪಕ, ಅದ್ಭುತ ಆಡಳಿತಗಾರರು, ಒಳ್ಳೆಯ ಪತಿ, ತಂದೆ ಹಾಗೂ ತಾತ. ಎಲ್ಲದಕ್ಕಿಂತ ಹೆಚ್ಚಾಗಿ ಅಪಾರ ಸಹಾನುಭೂತಿಯುಳ್ಳ ಮನುಷ್ಯ. ನಮ್ಮಿಬ್ಬರದು ೭೦ ವರುಷಗಳಿಗೂ ಮೀರಿದ

ಮನಮೋಹನ್ ಸಿಂಗ್ ನೆನಪಿನಲ್ಲಿ Read More »

ಭಾರತದ ಮುಂದಿರುವ ಅತಿದೊಡ್ಡ ಸವಾಲು ರಘುರಾಂ ರಾಜನ್

ಏಪ್ರಿಲ್ ೨೦೨೦ ಅನುವಾದ: ಟಿ ಎಸ್ ವೇಣುಗೋಪಾಲ್ ಆರ್ಥಿಕತೆಯ ದೃಷ್ಟಿಯಿಂದ ಮಾತನಾಡುವುದಾದರೆ, ಸ್ವಾತಂತ್ರ್ಯದ ನಂತರ ಇಂದು ಭಾರತ, ಅತಿದೊಡ್ಡ ತುರ್ತುಪರಿಸ್ಥಿಯನ್ನು ಎದುರಿಸುತ್ತಿದೆ. ೨೦೦೮-೦೯ರ ಜಗತ್ತನ್ನು ಕಾಡಿದ ಹಣಕಾಸು ಬಿಕ್ಕಟ್ಟಿನಿಂದ ಬೇಡಿಕೆಗೆ ಬಲವಾದ ಪೆಟ್ಟುಬಿದ್ದಿತ್ತು. ಆದರೂ ಕೆಲಸಗಾರರು ಕೆಲಸಕ್ಕೆ ಹೋಗುತ್ತಿದ್ದರು. ಬಿಕ್ಕಟ್ಟು ಕಳೆದ ಕೆಲವೇ ವರ್ಷಗಳಲ್ಲಿ ನಮ್ಮ ಉದ್ದಿಮೆಗಳು ಚೇತರಿಸಿಕೊಂಡವು. ನಮ್ಮ ಹಣಕಾಸು ವ್ಯವಸ್ಥೆ ಸುಮಾರಾಗಿ ಸುಸ್ಥಿತಿಯಲ್ಲೇ ಇತ್ತು. ಸರ್ಕಾರದ ಹಣಕಾಸು ಸ್ಥಿತಿಯೂ ಆರೋಗ್ಯವಾಗಿಯೇ ಇತ್ತು. ಆದರೆ ಇಂದು ಪರಿಸ್ಥಿತಿ ಅದಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. ಕೊರೋನ ಮಹಾಮಾರಿ ನಮ್ಮನ್ನು

ಭಾರತದ ಮುಂದಿರುವ ಅತಿದೊಡ್ಡ ಸವಾಲು ರಘುರಾಂ ರಾಜನ್ Read More »

ಯುರೋಪ್ ಇಂದು ಸಂಕಷ್ಟದಲ್ಲಿದೆ.

  ಟಿ ಎಸ್ ವೇಣುಗೋಪಾಲ್ ಯುರೋಪ್ ಇಂದು ಸಂಕಷ್ಟದಲ್ಲಿದೆ. ಈ ಪ್ರಯುಕ್ತ ಬ್ರಿಟನ್ನಿನ ಲಿಜ್‌ ಟ್ರಸ್‌ ನೇತೃತ್ವದ ಸರ್ಕಾರವು ಮಿನಿ ಬಜೆಟ್ ಪ್ರಕಟಿಸಿದೆ. ವಿವಾದಕ್ಕೂ ಕಾರಣವಾಗಿದೆ. ಶ್ರೀಮಂತರ ಮೇಲಿನ ತೆರಿಗೆಯಲ್ಲಿ ಕಡಿತ ಮಾಡಲಾಗಿದೆ. ತೆರಿಗೆ ಕಡಿಮೆ ಮಾಡುವುದರಿಂದ ಶ್ರೀಮಂತರು ಹೂಡಿಕೆ ಹೆಚ್ಚಿಸುತ್ತಾರೆ, ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ ಎನ್ನುವುದು ಅದರ ಹಿಂದಿನ ತರ್ಕ. ಆದರೆ ತೆರಿಗೆ ಕಡಿತದಿಂದ ಆರ್ಥಿಕ ಪ್ರಗತಿ ಸಾಧಿಸಬಹುದೆಂಬ ಕಲ್ಪನೆಯೇ ಒಂದು ಮಿಥ್ಯೆ ಎಂಬುದನ್ನು ಪಾಲ್ ಕ್ರುಗ್ಮನ್ ಅಂತಹ ಅರ್ಥಶಾಸ್ತ್ರಜ್ಞರು ತೋರಿಸಿದ್ದಾರೆ. ಬ್ರಿಟನ್ನಿನ ಈ ಕ್ರಮಕ್ಕೆ

ಯುರೋಪ್ ಇಂದು ಸಂಕಷ್ಟದಲ್ಲಿದೆ. Read More »

ದೋಸೆ ಅರ್ಥಶಾಸ್ತ್ರ ಮತ್ತು ಹಣದುಬ್ಬರ

ಟಿ ಎಸ್ ವೇಣುಗೋಪಾಲ್   ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದಾಗ ಆರ್‌ಬಿಐ ಗವರ್ನರ್ ಆಗಿದ್ದ ಎಂ.ನರಸಿಂಹಂ ಅವರ ಮನೆಗೆ ಹೋಗಿದ್ದರಂತೆ. ಸ್ವತಃ ಆರ್ಥಿಕ ತಜ್ಞರಾಗಿದ್ದ ನರಸಿಂಹಂ, ಸಿಂಗ್ ಅವರನ್ನು ಉದ್ದೇಶಿಸಿ ‘ನೀವು ಹಣದುಬ್ಬರ ಕಡಿಮೆಯಾಗಿದೆ ಅನ್ನುತ್ತೀರಿ. ಆದರೆ ನಾನು ತರಕಾರಿ ಕೊಳ್ಳುವಾಗ ಮೊದಲಿಗಿಂತ ಹೆಚ್ಚು ಹಣ ಕೊಡುತ್ತಿದ್ದೇನೆ’ ಎಂದು ಕೇಳಿದರಂತೆ. ಅದಕ್ಕೆ ಸಿಂಗ್, ‘ಹೌದು, ನನ್ನ ಹೆಂಡತಿಯೂ ಇದೇ ಪ್ರಶ್ನೆ ಕೇಳುತ್ತಾಳೆ. ನನಗೆ ವಿವರಿಸೋದಕ್ಕೆ ಕಷ್ಟವಾಗುತ್ತೆ ಅಂತ ಅವಳಿಗೆ ಹೇಳಿದೆ’ ಅಂದರಂತೆ. ಇಬ್ಬರೂ ತಜ್ಞರು. ಅವರೇ

ದೋಸೆ ಅರ್ಥಶಾಸ್ತ್ರ ಮತ್ತು ಹಣದುಬ್ಬರ Read More »

25ರ ನೋಬೆಲ್

[ಈ ವರ್ಷದ ಅರ್ಥಶಾಸ್ತ್ರದ ನೋಬೆಲ್ ಡೆರನ್ ಅಸಿಮೊಗ್ಲು, ಜೇಮ್ಸ್ ಎ ರಾಬಿನ್ಸನ್, ಹಾಗೂ ಸಿಮನ್ ಜಾನ್ಸನ್ ಅವರಿಗೆ ಲಭಿಸಿದೆ. ಡೆರನ್ ಅಸಿಮೊಗ್ಲು ಇಸ್ತಾಂಬುಲ್‌ನಲ್ಲಿ ಜನಿಸಿದರು. ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್‌ನಲ್ಲಿ ಪಿಎಚ್‌ಡಿ ಮಾಡಿದರು. ನಂತರ ಈಗ ಎಂಐಟಿಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಜೇಮ್ಸ್ ಎ ರಾಬಿನ್ಸನ್ ಯೇಲ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಮಾಡಿದರು. ಸದ್ಯ ಷಿಕ್ಯಾಗೋ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಸಿಮನ್ ಜಾನ್ಸನ್ ಎಂಐಟಿಯಲ್ಲಿ ಪಿಎಚ್‌ಡಿ ಮಾಡಿ, ಅಲ್ಲೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.] ಯಾಕೆ ಕೆಲ ದೇಶಗಳು

25ರ ನೋಬೆಲ್ Read More »

ಮಧ್ಯಮ ವರಮಾನದ ದೇಶಗಳ ಪಟ್ಟಿಯಲ್ಲಿರುವ ಭಾರತ ಶ್ರೀಮಂತ ರಾಷ್ಟ್ರವಾಗುವುದು ಹೇಗೆ?

ಅರಿಯಬೇಕಿದೆ ‘ಸಿರಿವಂತಿಕೆ’ಯ ಗುಟ್ಟು –––––––––– ಭಾರತ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುವ ಗುರಿ ಇರಿಸಿಕೊಂಡಿದೆ. ಸದ್ಯಕ್ಕೆ ದೇಶಗಳ ಶ್ರೀಮಂತಿಕೆಯನ್ನು ಅಳೆಯುವುದಕ್ಕೆ ತಲಾ ವರಮಾನವನ್ನು ಮಾಪನವನ್ನಾಗಿ ಬಳಸಲಾಗುತ್ತಿದೆ. ಯಾವುದೇ ದೇಶದ ತಲಾ ವರಮಾನವು ಅಮೆರಿಕದ 13,845 ಡಾಲರ್‌ಗಿಂತ (ಒಂದು ಡಾಲರ್‌ಗೆ ಸುಮಾರು ₹ 85) ಹೆಚ್ಚಾಗಿದ್ದರೆ ಅದು ಶ್ರೀಮಂತ ರಾಷ್ಟ್ರ ಎನಿಸಿಕೊಳ್ಳುತ್ತದೆ. ಭಾರತದ ತಲಾ ವರಮಾನವು 2,500 ಡಾಲರ್ ಇದೆ. ನಮ್ಮ ದೇಶ ಈಗ ಮಧ್ಯಮ ವರಮಾನದ ದೇಶಗಳ ಪಟ್ಟಿಯಲ್ಲಿದೆ. ಇದು ಶ್ರೀಮಂತ ರಾಷ್ಟ್ರವಾಗಬೇಕಾದರೆ ಹೆಚ್ಚು ವೇಗವಾಗಿ

ಮಧ್ಯಮ ವರಮಾನದ ದೇಶಗಳ ಪಟ್ಟಿಯಲ್ಲಿರುವ ಭಾರತ ಶ್ರೀಮಂತ ರಾಷ್ಟ್ರವಾಗುವುದು ಹೇಗೆ? Read More »

ವೇತನ ತಾರತಮ್ಯ ಇನ್ನೂ ಯಾಕಿದೆ?

೧೯೭೦ರಲ್ಲಿ ಸಾಮಾಜಿಕ ಚರಿತ್ರೆಯ ಬಗ್ಗೆ, ಕುಟುಂಬ ಹಾಗೂ ಕುಟುಂಬದ ಆರ್ಥಿಕತೆಯ ಬಗ್ಗೆ ಅಧ್ಯಯನ ಮಾಡೋ ಆಸಕ್ತಿ ಪ್ರಾರಂಭವಾಗಿತ್ತು. ಆದರೆ ಒಬ್ಬ ವ್ಯಕ್ತಿಯ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಆಕೆ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಳು. ಅದ್ಯಾಕೊ ಎಲ್ಲರೂ ಮನೆಯೊಳಗೆ ದುಡಿಯುತ್ತಿದ್ದ ಮಡದಿ, ತಾಯಿಯನ್ನು ಯಾರೂ ಗಮನಿಸಿಯೇ ಇರಲಿಲ್ಲ. ಅವಳ ಬಗ್ಗೆ ಮಾಹಿತಿಯೇ ಇರಲಿಲ್ಲ. ಇನ್ನೂ ಮಾತನಾಡೋದು ಎಲ್ಲಿಂದ ಬಂತು. ಅವಳ ಚರಿತ್ರೆಯನ್ನು ಬರೆಯಬೇಕು ಅಂತ ತೀರ್ಮಾನಿಸಿದೆ. ಹೀಗೆ ಶುರು ಆಯಿತು ಕ್ಲಾಡಿಯಾ ಗೋಲ್ಡಿನ್ ಅವರ ಜೆಂಡರ್ ಗ್ಯಾಪ್ ಕುರಿತ

ವೇತನ ತಾರತಮ್ಯ ಇನ್ನೂ ಯಾಕಿದೆ? Read More »

ಯಾಕೆ ಕೆಲ ದೇಶಗಳು ಬಡವಾಗಿವೆ?

ಟಿ ಎಸ್ ವೇಣುಗೋಪಾಲ್ [ಈ ವರ್ಷದ ಅರ್ಥಶಾಸ್ತ್ರದ ನೋಬೆಲ್ ಡೆರನ್ ಅಸಿಮೊಗ್ಲು, ಜೇಮ್ಸ್ ಎ ರಾಬಿನ್ಸನ್, ಹಾಗೂ ಸಿಮನ್ ಜಾನ್ಸನ್ ಅವರಿಗೆ ಲಭಿಸಿದೆ. ಡೆರನ್ ಅಸಿಮೊಗ್ಲು ಇಸ್ತಾಂಬುಲ್‌ನಲ್ಲಿ ಜನಿಸಿದರು. ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್‌ನಲ್ಲಿ ಪಿಎಚ್‌ಡಿ ಮಾಡಿದರು. ನಂತರ ಈಗ ಎಂಐಟಿಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಜೇಮ್ಸ್ ಎ ರಾಬಿನ್ಸನ್ ಯೇಲ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಮಾಡಿದರು. ಸದ್ಯ ಷಿಕ್ಯಾಗೋ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಸಿಮನ್ ಜಾನ್ಸನ್ ಎಂಐಟಿಯಲ್ಲಿ ಪಿಎಚ್‌ಡಿ ಮಾಡಿ, ಅಲ್ಲೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.]

ಯಾಕೆ ಕೆಲ ದೇಶಗಳು ಬಡವಾಗಿವೆ? Read More »

ಸಂತೋಷ ಅನ್ನೋದು ಕಾಸಿಗೆ ಸಿಗುತ್ತಾ?

ಒಂದು ಸೊಗಸಾದ ಸಂಗೀತದ ಕಾರ್ಯಕ್ರಮ ಕೇಳ್ತಾ ಇದ್ದೀರಿ. ಅರ್ಧ ಗಂಟೆ ಅದರ ಸುಖ ಅನುಭವಿಸಿದ್ದೀರಿ. ಅದ್ಭುತವಾದ ಅನುಭವ. ಕೊನೆಗೆ ಒಂದು ಕರ್ಕಶ ಶಬ್ದ. ಅಯ್ಯೋ, ಎಲ್ಲಾ ಹಾಳಾಯಿತು ಅಂತ ಚೀರುತ್ತೀರಿ. ಆದರೆ ನಿಜವಾಗಿ ಎಲ್ಲಾ ಹಾಳಾಯ್ತಾ? ಖಂಡಿತಾ ಇಲ್ಲ. ಅರ್ಧ ಗಂಟೆ ಸೊಗಸಾದ ಸಂಗೀತ ಅನುಭವಿಸಿದ್ದೀರಿ. ಆದರೂ ಎಲ್ಲಾ ನಾಶವಾಯ್ತು ಅಂತ ಪರಿತಪಿಸುತ್ತೀರಿ.ಹಾಗೇನೆ ರುಚಿರುಚಿಯಾದ ಕಡಲೇಕಾಯಿ ಬೀಜ ತಿನ್ನುತ್ತಿರುತ್ತೀರಿ. ಕೊನೆಗೆ ಒಂದು ಕಹಿಯಾದ ಬೀಜ ಸಿಕ್ಕರೆ ರುಚಿಯೆಲ್ಲಾ ಹಾಳಾಯ್ತು ಅಂತ ಒದ್ದಾಡುತ್ತೀರಿ. ನಿಜವಾಗಿ ನಾವು ಕಳೆದುಕೊಂಡದ್ದು ಏನು?

ಸಂತೋಷ ಅನ್ನೋದು ಕಾಸಿಗೆ ಸಿಗುತ್ತಾ? Read More »