Artha

ಕೈಯಲ್ಲಿರುವ ವೈನ್ ಬಿಡಲಾರೆ, ಅಂಗಡಿಯಲ್ಲಿ ಕೊಳ್ಳಲಾರೆ

ಒಂದು ಪ್ರಕಟಣೆ : ಆರು ವರ್ಷದ ಮುದ್ದಾದ ಮಗು. ತುಂಬಾ ಹುಷಾರಿಲ್ಲ. ತಕ್ಷಣ ಆಪರೇಷನ್ ಆಗಬೇಕು. ಆದರೆ ಆಪರೇಷನ್ ತುಂಬಾ ದುಬಾರಿ. ಅಪ್ಪ ಅಮ್ಮನ ಹತ್ತಿರ ಹಣ ಇಲ್ಲ. ನಮ್ಮ ಕರುಳು ಕಿವುಚುತ್ತದೆ. ಹಣ ಹರಿದು ಬರುತ್ತದೆ. ಇನ್ನೊಂದು ಸುದ್ದಿ ಅದೇ ಪತ್ರಿಕೆಯಲ್ಲಿ ಬಂದಿದೆ. ಒಂದು ದೊಡ್ಡ ಆಸ್ಪತ್ರೆ. ಇಲ್ಲಿಯವರೆಗೆ ಇಂತಹ ಸಾವಿರಾರು ತುರ್ತು ಶಸ್ತ್ರಚಿಕಿತ್ಸೆ ಮಾಡಿ ಜನರನ್ನು ಉಳಿಸಿದೆ. ಈಗ ತೆರಿಗೆ ಕಟ್ಟಲಾರದೆ ರೋಗಿಗೆ ಯಾವ ಸೌಲಭ್ಯವನ್ನು ಕೊಡುವ ಸ್ಥಿತಿಯಲ್ಲಿಲ್ಲ. ಜನ ನೆರವಾಗುವುದಿರಲಿ, ಬಹುಶಃ ಒಂದು […]

ಕೈಯಲ್ಲಿರುವ ವೈನ್ ಬಿಡಲಾರೆ, ಅಂಗಡಿಯಲ್ಲಿ ಕೊಳ್ಳಲಾರೆ Read More »

ನಾನು ನಿನ್ನನ್ನು ಒಪ್ಪಲಾರೆ ಅಂದವರು ಅಪ್ಪಿಕೊಂಡಾಗ

ಒಬ್ಬರ ನಿಲುವು ಇನ್ನೊಬ್ಬರಿಗೆ ಸರಿ ಅನ್ನಿಸದೇ ಹೋದರೆ ಹಲವು ಸಲ ಅದು ದ್ವೇಷಕ್ಕೋ, ಆವೇಶದ ಚರ್ಚೆಗೋ ಕಾರಣವಾಗುತ್ತದೆ. ಯಾರಿಗೂ ಇನ್ನೊಬ್ಬರ ನಿಲುವನ್ನು ಅರ್ಥಮಾಡಿಕೊಳ್ಳುವ ವ್ಯವಧಾನ ಇರುವುದಿಲ್ಲ. ತಾಳ್ಮೆಯಿಂದ ಯೋಚಿಸಿದರೆ ಎಷ್ಟೋ ವಿಷಯದಲ್ಲಿ ಒಮ್ಮತವೂ ಸಾಧ್ಯವಾಗುತ್ತದೆ. ಇನ್ನೊಬ್ಬರ ನಿಲುವನ್ನು ಗೌರವಿಸುವುದಕ್ಕೂ ಆಗುತ್ತದೆ. ಅದರಿಂದ ಹೊಸ ಅರಿವೂ ಸಾಧ್ಯವಾಗಬಹುದು. ವಿಭಿನ್ನ ವಿಚಾರಗಳು ಘೋರ ದ್ವೇಷಕ್ಕೆ, ಪ್ರತಿಕಾರಕ್ಕೆ ಕಾರಣವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಇಂತಹ ಸಹನೆಯ ಸಂವಾದದಿಂದ ಅನುಕೂಲವಾಗಬಹುದು. ಆರೋಗ್ಯಕರ ಪ್ರಜಾಸತ್ತೆಗೆ ಅದು ಅನಿವಾರ್ಯ. ಅಭಿಪ್ರಾಯಭೇಧ ಹಲವು ಸಂದರ್ಭಗಳಲ್ಲಿ ಭಾವನಾತ್ಮಕ ಮಟ್ಟದಲ್ಲಿ ಇರುತ್ತದೆಯೇ

ನಾನು ನಿನ್ನನ್ನು ಒಪ್ಪಲಾರೆ ಅಂದವರು ಅಪ್ಪಿಕೊಂಡಾಗ Read More »

ನಾವು ನಿಜವಾಗಿ ಅಂದುಕೊಂಡಷ್ಟು ನಾವು ಸಂಭಾವಿತರಾ?

ಈ ಜಗತ್ತಿನಲ್ಲಿ ರಾಜಕಾರಣಿಗಳು ಸರಿ ಇಲ್ಲ. ಅಧಿಕಾರಿಗಳು ಭ್ರಷ್ಠರು. ಇತ್ಯಾದಿ, ಇತ್ಯಾದಿ. ಇವು ನಾವೆಲ್ಲಾ ಒಪ್ಪಿಕೊಂಡಿರುವ ಸತ್ಯ. ಈ ಭ್ರಷ್ಠರ ಜಗತ್ತಿನಲ್ಲಿ ನಾನು ಮಾತ್ರ ಒಳ್ಳೆಯವನು. ನೈತಿಕತೆಯನ್ನು ತುಂಬಾ ಜತನವಾಗಿ ಕಾಪಾಡಿಕೊಂಡು ಬಂದಿದ್ದೇನೆ. ಇದು ನನ್ನ ಅಚಲವಾದ ನಂಬಿಕೆ. ನನ್ನಂತೆ ಎಲ್ಲರ ನಂಬಿಕೆಯೂ. ನಾವು ಭ್ರಷ್ಠ ಅಂತ ಕರೆಯುವ ರಾಜಕಾರಣಿಯನ್ನೇ ಕೇಳಿನೋಡಿ. ಅವನು ತನ್ನನ್ನು ಶುದ್ಧ ಅಂತಲೇ ಅಂದುಕೊಂಡಿರುತ್ತಾನೆ. ಅಷ್ಟೇ ಅಲ್ಲ, ಜನ ರಾಜಕಾರಣಿಯನ್ನು ಮಾತ್ರವಲ್ಲ, ನನ್ನನ್ನೂ ಕೂಡ ’ಇವನು ಸಂಭಾವಿತ’ ಅಂತ ಯಾವಾಗಲೂ ಭಾವಿಸಿರಲಿಕ್ಕಿಲ್ಲ. ನಾನು

ನಾವು ನಿಜವಾಗಿ ಅಂದುಕೊಂಡಷ್ಟು ನಾವು ಸಂಭಾವಿತರಾ? Read More »

ಭಯೋತ್ಪಾದನೆ ಹಾಗೂ ವರ್ತನ ಅರ್ಥಶಾಸ್ತ್ರ

ಅರ್ಥಶಾಸ್ತ್ರವು ಮನುಷ್ಯನ ವರ್ತನೆಗೂ ಮಹತ್ವಕೊಡಬೇಕು. ಆಗಷ್ಟೇ ಅದು ಹೆಚ್ಚು ನಿಖರವಾಗುವುದಕ್ಕೆ ಸಾಧ್ಯ ಅನ್ನುವುದನ್ನು ಒಪ್ಪಿಕೊಂಡರೆ, ಹಲವಾರು ಹೊಸ ಹೊಸ ವಿಷಯಗಳು ಅರ್ಥಶಾಸ್ತ್ರದ ಅಧ್ಯಯನದ ಭಾಗವಾಗುವುದಕ್ಕೆ ಸಾಧ್ಯವಾಗುತ್ತದೆ. ಸಂತೋಷ, ದುಃಖ, ನೋವು, ಭಯೋತ್ಪಾದನೆ ಹೀಗೆ ಹಲವಾರು ವಿಷಯಗಳು ಅರ್ಥಶಾಸ್ತ್ರದ ವ್ಯಾಪ್ತಿಗೆ ಬರುವುದಕ್ಕೆ ಸಾಧ್ಯವಾಗುತ್ತದೆ. ಸ್ವಿಟ್ಜರ್‌ಲ್ಯಾಂಡಿನ, ಜ್ಯೂರಿಚ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿರುವ ಬ್ರುನೊ ಎಸ್. ಫ್ರೆ ಹೀಗೆ ಭಯೋತ್ಪಾದನೆಯನ್ನು ಕುರಿತು ಒಂದು ಕುತೂಹಲಕಾರಿ ಅಧ್ಯಯನವನ್ನು ಮಾಡಿದ್ದಾರೆ. ಭಯೋತ್ಪಾದನೆಗೆ ಸಂಬಂಧಿಸಿದಂತೆ ನಮ್ಮ ಈವರೆಗಿನ ಹಲವಾರು ಆಲೋಚನೆಗಳನ್ನು ಮರುಚಿಂತಿಸುವಂತೆ ಈ ಅಧ್ಯಯನ

ಭಯೋತ್ಪಾದನೆ ಹಾಗೂ ವರ್ತನ ಅರ್ಥಶಾಸ್ತ್ರ Read More »

ವರ್ತನ-ಅರ್ಥಶಾಸ್ತ್ರದ ಪಿತಾಮಹ ಥೇಲರ್

ಈ ಬಾರಿ ಅರ್ಥಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ರಿಚರ್ಡ್ ಎಚ್ ಥೇಲರ್ ಅವರಿಗೆ ಸಂದಿದೆ. ಭಾರತೀಯರಿಗೆ ಥೇಲರ್ ಮತ್ತೂ ಒಂದು ಕಾರಣಕ್ಕೆ ಪರಿಚಿತರು. ನಿರ್ನೋಟಿಕರಣ ಜಾರಿಗೊಂಡಾಗ ಅವರು ಅದರಿಂದ ಭ್ರಷ್ಟಾಚಾರ ಕಮ್ಮಿಯಾಗುತ್ತದೆ ಅಂತ ಹೇಳಿದ್ದರು. ಈಗ ಆ ಕಾರಣಕ್ಕೆ ಕೆಲವರು ಅವರನ್ನು ಹೊಗಳಲು ಪ್ರಾರಂಭಿಸಿದ್ದಾರೆ. ೨೦೦೦ ರೂಪಾಯಿ ನೋಟು ಜಾರಿಗೆ ತರುತ್ತಿದ್ದಾರೆ ಅಂತ ಗೊತ್ತಾದಾಗ ಥೇಲರ್ ಅವರೇ ಬಯ್ದಿದ್ದರು. ಅವರ ಉದ್ದೇಶ ಹೆಚ್ಚಿನ ಮೌಲ್ಯದ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳಬೇಕು ಎಂಬುದು. ಹೋಗಲಿ ಬಿಡಿ ಮುಳುಗುತ್ತಿರುವವರಿಗೆ ಆಸರೆಗೆ ಒಂದು ಹುಳ್ಳುಕಡ್ಡಿ

ವರ್ತನ-ಅರ್ಥಶಾಸ್ತ್ರದ ಪಿತಾಮಹ ಥೇಲರ್ Read More »