The State

ಸಂತೋಷ ಅನ್ನೋದು ಕಾಸಿಗೆ ಸಿಗುತ್ತಾ?

ಒಂದು ಸೊಗಸಾದ ಸಂಗೀತದ ಕಾರ್ಯಕ್ರಮ ಕೇಳ್ತಾ ಇದ್ದೀರಿ. ಅರ್ಧ ಗಂಟೆ ಅದರ ಸುಖ ಅನುಭವಿಸಿದ್ದೀರಿ. ಅದ್ಭುತವಾದ ಅನುಭವ. ಕೊನೆಗೆ ಒಂದು ಕರ್ಕಶ ಶಬ್ದ. ಅಯ್ಯೋ, ಎಲ್ಲಾ ಹಾಳಾಯಿತು ಅಂತ ಚೀರುತ್ತೀರಿ. ಆದರೆ ನಿಜವಾಗಿ ಎಲ್ಲಾ ಹಾಳಾಯ್ತಾ? ಖಂಡಿತಾ ಇಲ್ಲ. ಅರ್ಧ ಗಂಟೆ ಸೊಗಸಾದ ಸಂಗೀತ ಅನುಭವಿಸಿದ್ದೀರಿ. ಆದರೂ ಎಲ್ಲಾ ನಾಶವಾಯ್ತು ಅಂತ ಪರಿತಪಿಸುತ್ತೀರಿ.ಹಾಗೇನೆ ರುಚಿರುಚಿಯಾದ ಕಡಲೇಕಾಯಿ ಬೀಜ ತಿನ್ನುತ್ತಿರುತ್ತೀರಿ. ಕೊನೆಗೆ ಒಂದು ಕಹಿಯಾದ ಬೀಜ ಸಿಕ್ಕರೆ ರುಚಿಯೆಲ್ಲಾ ಹಾಳಾಯ್ತು ಅಂತ ಒದ್ದಾಡುತ್ತೀರಿ. ನಿಜವಾಗಿ ನಾವು ಕಳೆದುಕೊಂಡದ್ದು ಏನು? […]

ಸಂತೋಷ ಅನ್ನೋದು ಕಾಸಿಗೆ ಸಿಗುತ್ತಾ? Read More »

ಕೈಯಲ್ಲಿರುವ ವೈನ್ ಬಿಡಲಾರೆ, ಅಂಗಡಿಯಲ್ಲಿ ಕೊಳ್ಳಲಾರೆ

ಒಂದು ಪ್ರಕಟಣೆ : ಆರು ವರ್ಷದ ಮುದ್ದಾದ ಮಗು. ತುಂಬಾ ಹುಷಾರಿಲ್ಲ. ತಕ್ಷಣ ಆಪರೇಷನ್ ಆಗಬೇಕು. ಆದರೆ ಆಪರೇಷನ್ ತುಂಬಾ ದುಬಾರಿ. ಅಪ್ಪ ಅಮ್ಮನ ಹತ್ತಿರ ಹಣ ಇಲ್ಲ. ನಮ್ಮ ಕರುಳು ಕಿವುಚುತ್ತದೆ. ಹಣ ಹರಿದು ಬರುತ್ತದೆ. ಇನ್ನೊಂದು ಸುದ್ದಿ ಅದೇ ಪತ್ರಿಕೆಯಲ್ಲಿ ಬಂದಿದೆ. ಒಂದು ದೊಡ್ಡ ಆಸ್ಪತ್ರೆ. ಇಲ್ಲಿಯವರೆಗೆ ಇಂತಹ ಸಾವಿರಾರು ತುರ್ತು ಶಸ್ತ್ರಚಿಕಿತ್ಸೆ ಮಾಡಿ ಜನರನ್ನು ಉಳಿಸಿದೆ. ಈಗ ತೆರಿಗೆ ಕಟ್ಟಲಾರದೆ ರೋಗಿಗೆ ಯಾವ ಸೌಲಭ್ಯವನ್ನು ಕೊಡುವ ಸ್ಥಿತಿಯಲ್ಲಿಲ್ಲ. ಜನ ನೆರವಾಗುವುದಿರಲಿ, ಬಹುಶಃ ಒಂದು

ಕೈಯಲ್ಲಿರುವ ವೈನ್ ಬಿಡಲಾರೆ, ಅಂಗಡಿಯಲ್ಲಿ ಕೊಳ್ಳಲಾರೆ Read More »

ನಾನು ನಿನ್ನನ್ನು ಒಪ್ಪಲಾರೆ ಅಂದವರು ಅಪ್ಪಿಕೊಂಡಾಗ

ಒಬ್ಬರ ನಿಲುವು ಇನ್ನೊಬ್ಬರಿಗೆ ಸರಿ ಅನ್ನಿಸದೇ ಹೋದರೆ ಹಲವು ಸಲ ಅದು ದ್ವೇಷಕ್ಕೋ, ಆವೇಶದ ಚರ್ಚೆಗೋ ಕಾರಣವಾಗುತ್ತದೆ. ಯಾರಿಗೂ ಇನ್ನೊಬ್ಬರ ನಿಲುವನ್ನು ಅರ್ಥಮಾಡಿಕೊಳ್ಳುವ ವ್ಯವಧಾನ ಇರುವುದಿಲ್ಲ. ತಾಳ್ಮೆಯಿಂದ ಯೋಚಿಸಿದರೆ ಎಷ್ಟೋ ವಿಷಯದಲ್ಲಿ ಒಮ್ಮತವೂ ಸಾಧ್ಯವಾಗುತ್ತದೆ. ಇನ್ನೊಬ್ಬರ ನಿಲುವನ್ನು ಗೌರವಿಸುವುದಕ್ಕೂ ಆಗುತ್ತದೆ. ಅದರಿಂದ ಹೊಸ ಅರಿವೂ ಸಾಧ್ಯವಾಗಬಹುದು. ವಿಭಿನ್ನ ವಿಚಾರಗಳು ಘೋರ ದ್ವೇಷಕ್ಕೆ, ಪ್ರತಿಕಾರಕ್ಕೆ ಕಾರಣವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಇಂತಹ ಸಹನೆಯ ಸಂವಾದದಿಂದ ಅನುಕೂಲವಾಗಬಹುದು. ಆರೋಗ್ಯಕರ ಪ್ರಜಾಸತ್ತೆಗೆ ಅದು ಅನಿವಾರ್ಯ. ಅಭಿಪ್ರಾಯಭೇಧ ಹಲವು ಸಂದರ್ಭಗಳಲ್ಲಿ ಭಾವನಾತ್ಮಕ ಮಟ್ಟದಲ್ಲಿ ಇರುತ್ತದೆಯೇ

ನಾನು ನಿನ್ನನ್ನು ಒಪ್ಪಲಾರೆ ಅಂದವರು ಅಪ್ಪಿಕೊಂಡಾಗ Read More »

ನಾವು ನಿಜವಾಗಿ ಅಂದುಕೊಂಡಷ್ಟು ನಾವು ಸಂಭಾವಿತರಾ?

ಈ ಜಗತ್ತಿನಲ್ಲಿ ರಾಜಕಾರಣಿಗಳು ಸರಿ ಇಲ್ಲ. ಅಧಿಕಾರಿಗಳು ಭ್ರಷ್ಠರು. ಇತ್ಯಾದಿ, ಇತ್ಯಾದಿ. ಇವು ನಾವೆಲ್ಲಾ ಒಪ್ಪಿಕೊಂಡಿರುವ ಸತ್ಯ. ಈ ಭ್ರಷ್ಠರ ಜಗತ್ತಿನಲ್ಲಿ ನಾನು ಮಾತ್ರ ಒಳ್ಳೆಯವನು. ನೈತಿಕತೆಯನ್ನು ತುಂಬಾ ಜತನವಾಗಿ ಕಾಪಾಡಿಕೊಂಡು ಬಂದಿದ್ದೇನೆ. ಇದು ನನ್ನ ಅಚಲವಾದ ನಂಬಿಕೆ. ನನ್ನಂತೆ ಎಲ್ಲರ ನಂಬಿಕೆಯೂ. ನಾವು ಭ್ರಷ್ಠ ಅಂತ ಕರೆಯುವ ರಾಜಕಾರಣಿಯನ್ನೇ ಕೇಳಿನೋಡಿ. ಅವನು ತನ್ನನ್ನು ಶುದ್ಧ ಅಂತಲೇ ಅಂದುಕೊಂಡಿರುತ್ತಾನೆ. ಅಷ್ಟೇ ಅಲ್ಲ, ಜನ ರಾಜಕಾರಣಿಯನ್ನು ಮಾತ್ರವಲ್ಲ, ನನ್ನನ್ನೂ ಕೂಡ ’ಇವನು ಸಂಭಾವಿತ’ ಅಂತ ಯಾವಾಗಲೂ ಭಾವಿಸಿರಲಿಕ್ಕಿಲ್ಲ. ನಾನು

ನಾವು ನಿಜವಾಗಿ ಅಂದುಕೊಂಡಷ್ಟು ನಾವು ಸಂಭಾವಿತರಾ? Read More »