Miscellany

ಆ ಹಾಡುಗಳು- ಸತ್ಯಜಿತ್ ರೇ

[ಇಂದು ಸತ್ಯಜಿತ್ ರೇ ಬದುಕಿದ್ದರೆ ಅವರಿಗೆ ನೂರು ವರ್ಷ. ಅತ್ಯಂತ ಪ್ರತಿಭಾವಂತ ಕಲಾವಿದರು. ಭಾರತೀಯ ಸಿನಿಮಾಕ್ಕೆ ಜಗತ್ಪ್ರಸಿದ್ಧಿಯನ್ನು ತಂದುಕೊಟ್ಟವರು. ಹಲವು ಕ್ಷೇತ್ರಗಳಲ್ಲಿ ಪ್ರತಿಭೆಯಿದ್ದವರು. ಅವರ ಜನ್ಮ ಶತಮಾನೋತ್ಸವದ ಈ ಸಂದರ್ಭದಲ್ಲಿ ಹಲವರು ಅವರ ಕೊಡುಗೆಯನ್ನು ಹಲವು ರೀತಿಗಳಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಸಂಗೀತಕ್ಕೆ ಅವರು ನೀಡಿದ ಕೊಡುಗೆ ಕಡಿಮೆಯೇನಲ್ಲ. ಅವರು ತುಂಬಾ ಇಷ್ಟಪಡುತ್ತಿದ್ದ ಕ್ಷೇತ್ರಗಳಲ್ಲಿ ಸಂಗೀತವೂ ಒಂದು. ಅವರಿಗೆ ಅದರ ಬಗ್ಗೆ ಒಂದು ಸ್ಪಷ್ಟ ಕಲ್ಪನೆಯಿತ್ತು. ಮೊದಲಿಗೆ ರವಿಶಂಕರ್, ಅಲಿ ಅಕ್ಬರ್ ಖಾನ್, ಇಂತಹ ಪ್ರಖ್ಯಾತರೊಂದಿಗೆ ಕೆಲಸ ಮಾಡಿದ […]

ಆ ಹಾಡುಗಳು- ಸತ್ಯಜಿತ್ ರೇ Read More »

ಮಣಿಪುರ ಹೊತ್ತಿ ಉರಿದಾಗ ಭುಗಿಲೆದ್ದ ಪ್ರಶ್ನೆಗಳು

[ವಾರ್ತಾಭಾರತಿಯಲ್ಲಿ ಪ್ರಕಟವಾದ ಶೈಲಜ ಲೇಖನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.] ಶೈಲಜ ವೇಣುಗೋಪಾಲ್ ಮಣಿಪುರ ಇಂದು ಹೊತ್ತಿ ಉರಿಯುತ್ತಿದೆ. ಕುಕಿ ಮತ್ತು ಮೈತೈ ಸಮುದಾಯಗಳ ನಡುವಿನ ಅಂತರ್ಯುದ್ಧದಲ್ಲಿ ೬೦,೦೦೦ ಜನ ಮನೆ ಮಠ, ಹಾಗೂ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ನಿರಾಶ್ರಿತರು, ನಿರ್ಗತಿಕರು, ಅನಾಥರು ಆಗಿದ್ದಾರೆ. ನೆರೆಹೊರೆಯವರು, ಸರ್ಕಾರ, ಪೋಲಿಸ್, ಸೈನ್ಯ ಮತ್ತು ತಮ್ಮ ಸಹಮಾನವರ ಬಗ್ಗೆ ನಿರಂತರ ಭಯ ಹಾಗೂ ಅಪನಂಬಿಕೆಯಲ್ಲಿ ತೊಳಲಾಡುತ್ತಿದ್ದಾರೆ. ೫೦ ದಿನಗಳಿಂದ ಮಣಿಪುರದಲ್ಲಿ ಅಂತರ್ಜಾಲದ ಸಂಪರ್ಕ ಇಲ್ಲವಾಗಿದೆ. ಹರ ಕೊಲ್ಲಲ್ ಪರ ಕಾಯ್ವನೆ ಎಂಬಂತೆ ತಂದೆಯ

ಮಣಿಪುರ ಹೊತ್ತಿ ಉರಿದಾಗ ಭುಗಿಲೆದ್ದ ಪ್ರಶ್ನೆಗಳು Read More »

ಉರುಳುವ ಕಲ್ಲಿನ ನೆನಪಿನ ಸುರುಳಿ

ಡಾ ಎನ್ ಗಾಯತ್ರಿಯವರು ಅನುವಾದಿಸಿರುವ ವೀಣಾ ಮಜುಂದಾರ್ ಅವರ ಆತ್ಮಕಥಾನಕ ಮೆಮೊರಿಸ ಆಫ್ ಅ ರೋಲಿಂಗ್ ಸ್ಟೋನ್ ಕೃತಿಯ ಕನ್ನಡ ಅನುವಾದ ’ಉರುಳುವ ಕಲ್ಲಿನ ನೆನಪಿನ ಸುರುಳಿ’ ಕೃತಿಯ ಪರಿಚಯವನ್ನು ಹಂಚಿಕೊಳ್ಳುತ್ತಿದ್ದೇವೆ. ಇದು ಈ ತಿಂಗಳ ಹೊಸತುವಿನಲ್ಲಿ ಪ್ರಕಟವಾಗಿದೆ. ಸಮಾನತೆ ಮತ್ತು ಪ್ರಜಾಪ್ರಭುತ್ವದ ಅಪರೂಪದ ದಾಖಲೆ ವೀಣಾ ಮಜುಂದಾರ್ ಅವರ ಆತ್ಮಕಥೆ ಖ್ಯಾತ ಸಮಾಜಶಾಸ್ತ್ರಜ್ಞೆ, ಮಹಿಳಾ ಅಧ್ಯಯನದ ಹರಿಕಾರ್ತಿ, ಭಾರತದಲ್ಲಿ ಮಹಿಳಾ ಚಳುವಳಿಯ ದಾಖಲಾತಿದಾರಳು ಮತ್ತು ದಕ್ಷಿಣ ಏಷ್ಯಾದಲ್ಲಿ ಮಹಿಳಾ ಅಧ್ಯಯನದ ಅಜ್ಜಿ, ಮತ್ತೆ ಇನ್ನೂ ಏನೇನೋ

ಉರುಳುವ ಕಲ್ಲಿನ ನೆನಪಿನ ಸುರುಳಿ Read More »

ನ್ಯಾಯಕ್ಕಾಗಿ ಕಾಯುತ್ತಿರುವ ಶಬರಿಯರು-ಶೈಲಜಾ

[ಕುಸ್ತಿಪಟುಗಳ ಹೋರಾಟ ಇಂದು ಜಗತ್ತಿನ ಸುದ್ದಿಯಾಗಿದೆ. ಆದರೂ ಪರಿಹಾರ ಕಾಣುತ್ತಿಲ್ಲ. ಸರ್ಕಾರ ಬ್ರಜ್ ಭೂಷಣ್ ಅನ್ನು ಯಾಕೆ ರಕ್ಷಿಸುವುದಕ್ಕೆ ಪಣ ತೊಟ್ಟಿದೆ ಅನ್ನುವುದೂ ತಿಳಿಯುತ್ತಿಲ್ಲ. ಅಷ್ಟೊಂದು ದುರ್ಬಲವಾಗಿದೆಯೇ ಅನ್ನುವ ಅನುಮಾನ ಕಾಡುತ್ತಿದೆ. ಕುಸ್ತಿಪಟುಗಳ ಹೋರಾಟವನ್ನು ಕುರಿತ ಶೈಲಜಾ ಬರೆದಿದ್ದ ಲೇಖನವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.] ಸೀತೆ, ದ್ರೌಪದಿ, ಬೌದ್ಧ ವಿಹಾರಗಳಲ್ಲಿನ ಭಿಕ್ಕುಣಿಯರು, ಸಾರ್ವಜನಿಕವಾಗಿ ಅತ್ಯಾರಕ್ಕೊಳಗಾದ ಭಾಂವ್ರೀದೇವಿ, ಹತರಸ್‌ನ ಸಂತ್ರಸ್ತೆ, ಬಲ್ಕಿಶ್‌ಬಾನು, ಹೀಗೆ ಆ ಕಾಲದಿಂದ ಈ ಕಾಲದ ತನಕ ನ್ಯಾಯಕ್ಕಾಗಿ ಕಾದಿದ್ದ ಮತ್ತು ಕಾಯುತ್ತಿರುವ ಹೆಣ್ಣುಮಕ್ಕಳ ಕ್ಯೂ ತುಂಬಾನೇ

ನ್ಯಾಯಕ್ಕಾಗಿ ಕಾಯುತ್ತಿರುವ ಶಬರಿಯರು-ಶೈಲಜಾ Read More »

ಬದಲಾಗುತ್ತಾ ಬೆಳೆದ ಮೃಣಾಲ್ ಸೇನ್

ಟಿ ಎಸ್ ವೇಣುಗೋಪಾಲ್  ಹುಟ್ಟಿದ್ದು ಪೂರ್ವ ಬಂಗಾಲದಲ್ಲಿ. ಅಮೇಲೆ ಓದು ಮುಂದುವರೆಸಲು ಪಶ್ಚಿಮ ಬಂಗಾಳಕ್ಕೆ ಬಂದರು. ಬಂಗಾಳದ ವಿಭಜನೆಯ ನೋವು ಅವರನ್ನು ಗೀಳಾಗಿ ಕಾಡಲಿಲ್ಲ. ಕೊಲ್ಕತ್ತಾದಲ್ಲಿ ಬೆರೆತು ಕೊಲ್ಕತ್ತದವರೇ ಆಗಿಬಿಟ್ಟರು. ಜೀವನದುದ್ದಕ್ಕೂ ಅವರ ಕಾಳಜಿಯೆಲ್ಲಾ ಕೊಲ್ಕತ್ತಾ ಮತ್ತು ಅಲ್ಲಿಯ ಜನರ ಬಗ್ಗೆಯೇ ಆಗಿತ್ತು. ಕೊಲ್ಕತ್ತಾ ಅವರಿಗೆ ಸ್ಪೂರ್ತಿಯ ತಾಣವಾಗಿದ್ದಂತೆಯೇ ಕಿರಿಕಿರಿಯೂ ಜಾಗವೂ ಆಗಿತ್ತು. ತಮ್ಮ ಸುತ್ತಲ ಆಗುಹೋಗುಗಳ ಕುರಿತಂತೆ ಸದಾ ಅವರಿಗೆ ಒಂದು ರೀತಿಯ ಅತೃಪ್ತಿ ಕಾಡುತ್ತಿತ್ತು. ಈ ಅತೃಪ್ತಿಯನ್ನು ಒಂದಲ್ಲ ಒಂದು ರೀತಿಯಲ್ಲಿ ವ್ಯಕ್ತಪಡಿಸುತ್ತಲೇ ಇದ್ದರು.

ಬದಲಾಗುತ್ತಾ ಬೆಳೆದ ಮೃಣಾಲ್ ಸೇನ್ Read More »

ಸುಬ್ಬರಾಯನಕೆರೆಯ ಉರುಫ್ ಫ್ರೀಡಂ ಪಾರ್ಕ್‌ನ ಸ್ವಗತ

[ಈ ಲೇಖನವನ್ನು ಸದ್ವಿದ್ಯಾ ಸಂಸ್ಥೆಯವರು ಹೊರತಂದಿರುವ ಸ್ಮರಣ ಸಂಚಿಕೆಗಾಗಿ ಶೈಲಜಾ ಬರೆದದ್ದು. ಇದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ.] ನನ್ನ ಕಥೆ ನನ್ನ ವ್ಯಥೆ ಮೊದಲು ಈಗ ನಾನಿರೋ ಜಾಗ ಏನಾಗಿತ್ತೋ ತಿಳಿಯದು. ಮುಮ್ಮಡಿ ಕೃಷ್ಣರಾಜ ಒಡೆಯರ್ (೧೭೯೪-೧೮೬೮) ಅವರ ಕಾಲದಲ್ಲಿ ಜನ ಮತ್ತು ಜಾನುವಾರುಗಳಿಗೆ ನೀರಿನ ಅನುಕೂಲ ಇರಲಿ ಎಂದು ೧೮೬೫ರಲ್ಲಿ ಸುಬ್ಬರಾಯನ ಕಟ್ಟೆಯಾಗಿ ನಾನು ಹುಟ್ಟಿದೆ. ನನ್ನ ಪಕ್ಕದಲ್ಲಿಯೇ ಒಂದು ಕುಡಿಯುವ ನೀರಿನ ಬಾವಿಯೂ ಇತ್ತು. ೧೮೭೦-೭೫ರ ಹೊತ್ತಿಗೆ ನಾನು ಸುಬ್ಬರಾಯನ ಕೆರೆಯಾದೆ. ನನಗ್ಯಾಕೆ ಈ ಹೆಸರು

ಸುಬ್ಬರಾಯನಕೆರೆಯ ಉರುಫ್ ಫ್ರೀಡಂ ಪಾರ್ಕ್‌ನ ಸ್ವಗತ Read More »

ಕಾನ್ಸಂಟ್ರೇಷನ್ ಕ್ಯಾಂಪ್ ಎಂಬ ಸಾವಿನ ಲೋಕ.

ಮಾನವ ಕ್ರೌರ್ಯದ ವೈವಿಧ್ಯಗಳು.   ೧೯೭೬ರಿಂದ ೧೯೮೧ರ ಅವಧಿಯಲ್ಲಿ ಇತಿಹಾಸ ಮತ್ತು ಇಂಗ್ಲಿಷ್ ಸಾಹಿತ್ಯವನ್ನು ಓದುವಾಗ ನನ್ನನ್ನು ಪದೇ ಪದೇ ಕಾಡಿ, ಕಲಕಿ, ನಿದ್ದೆ ಕೆಡಿಸಿದ್ದು ಯಹೂದಿಗಳ ಸಾಮೂಹಿಕ ಕಗ್ಗೊಲೆ ಮತ್ತು ಸಿನಿಮಾಗಳಲ್ಲಿ ನೋಡಿದ್ದ ಕಾನ್ಸಂಟ್ರೇಷನ್ ಕ್ಯಾಂಪಿನ ಕ್ರೌರ್ಯ. ಯುರೋಪಿಗೆ ಹೋಗಬೇಕು, ಅವುಗಳನ್ನು ನಾನೇ ಸ್ವತಃ ನೋಡಬೇಕು ಎನ್ನುವುದು ನನ್ನ ಬಹು ದೊಡ್ಡ ಆಸೆಯಾಗಿತ್ತು. ಆದರೆ ಅದಕ್ಕಾಗಿ ನಾನು ನಿವೃತ್ತಳಾಗುವ ತನಕ, ಅಂದರೆ, ೩೮ ವರ್ಷಗಳು ಕಾಯಬೇಕಾಯಿತು. ೨೦೧೮ರಲ್ಲಿ ಬರ್ಲಿನ್ ಸಮೀಪದ ಸ್ಯಾಕ್ಸನ್ ಹೌಸೆನ್ ಮತ್ತು ೨೦೨೩ರಲ್ಲಿ

ಕಾನ್ಸಂಟ್ರೇಷನ್ ಕ್ಯಾಂಪ್ ಎಂಬ ಸಾವಿನ ಲೋಕ. Read More »

ಘನತೆಯ ಬದುಕಿಗಾಗಿ

ಟಿ ಎಸ್ ವೇಣುಗೋಪಾಲ್ ‘ಕನ್ನಡದ ರಂಗಭೂಮಿಯು ಕೆಲವರನ್ನು ಮುಟ್ಟಿ ಸ್ಟೇಜಿಗೆ ಕೈ ಹಿಡಿದು ಕರೆದುಕೊಂಡರೆ, ಮತ್ತೆ ಕೆಲವರನ್ನು ದೂರದಲ್ಲಿ ಕೂತು ನಾಟಕ ನೋಡಲು ಮಾತ್ರ ಅವಕಾಶ ಕೊಟ್ಟಿದೆ. ಅಂದರೆ ಕನ್ನಡದ ರಂಗಭೂಮಿ ದಲಿತರನ್ನು ಮುಟ್ಟಿಸಿಕೊಳ್ಳದಂತೆ ಶತಮಾನಗಳ ಕಾಲ ಅಸ್ಪೃಶ್ಯತೆ ಆಚರಿಸಿದೆ. ಈ ಮಧ್ಯೆ ದಲಿತೇತರ ಕೆಲವರು ದಲಿತ ಸಮುದಾಯವನ್ನು ಪ್ರತಿನಿಧಿಸಿ ಕೆಲವು ಪ್ರಯೋಗಗಳನ್ನು ಮಾಡಿದ್ದಾರೆ. ಆದರೆ ದಲಿತ ಸಮುದಾಯದ ಹೊಸ ತಲೆಮಾರು ತನ್ನದೇ ಹಿರಿಯರ ಕಥೆ ಹೇಳುವ ಮಾದರಿ ಕನ್ನಡದಲ್ಲಿರಲಿಲ್ಲ”. ಎಂದು ಹೇಳುವ ಮೂಲಕ ಅರುಣ್ ಜೋಳದಕೂಡ್ಲಿಗಿ

ಘನತೆಯ ಬದುಕಿಗಾಗಿ Read More »