ಹಣದುಬ್ಬರ ಏನು, ಯಾಕೆ, ಹೇಗೆ?
ಟಿ ಎಸ್ ವೇಣುಗೋಪಾಲ್ ಹಣದುಬ್ಬರ ಮತ್ತೆ ಮತ್ತೆ ಚರ್ಚೆಯಾಗುತ್ತಿರುವ ವಿಷಯ. ಸಾಮಾನ್ಯವಾಗಿ ಬೆಲೆಗಳ ಹೆಚ್ಚಳವನ್ನು ಹಣದುಬ್ಬರ ಅಂತ ಕರೆಯಲಾಗುತ್ತದೆ. ಆದರೆ ಯಾವುದೋ ಕೆಲವು ಸರಕು ಹಾಗೂ ಸೇವೆಗಳ ಬೆಲೆ ಹೆಚ್ಚಿದಾಗ ಅದು ಹಣದುಬ್ಬರ ಅನಿಸಿಕೊಳ್ಳುವುದಿಲ್ಲ. ಒಟ್ಟಾರೆ ವಿಭಿನ್ನ ಕ್ಷೇತ್ರಗಳ ಸರಕು ಹಾಗೂ ಸೇವೆಗಳ ಬೆಲೆಗಳ ಹೆಚ್ಚಳವನ್ನು ಹಣದುಬ್ಬರ ಅಂತ ಕರೆಯುವುದು ವಾಡಿಕೆ. ಹಣದುಬ್ಬರದ ಹೊಡೆತ ಮೊದಲಿಗೆ ಬೀಳುವುದು ಜನಸಾಮಾನ್ಯರ ಮೇಲೆ. ಅದರಲ್ಲೂ ಬೆಲೆ ಹೆಚ್ಚಿದ ಪ್ರಮಾಣದಲ್ಲಿ ಅವರ ಆದಾಯ ಹೆಚ್ಚದೇ ಹೋದರೆ ಅವರ ಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ. […]
ಹಣದುಬ್ಬರ ಏನು, ಯಾಕೆ, ಹೇಗೆ? Read More »