Mayura

Krishna T M ಮಾತನಾಡುತ್ತಲೇ ಇರೋಣ ಟಿ ಎಂ ಕೃಷ್ಣ ಅವರೊಂದಿಗೆ ಮಾತುಕತೆ

ವೇಣುಗೋಪಾಲ್ ಟಿ ಎಸ್ ಮತ್ತು ಶೈಲಜಾ ಹೊಸ ತಲೆಮಾರಿನ ಕರ್ನಾಟಕ ಸಂಗೀತ ಕಲಾವಿದರಲ್ಲಿ ತುಸು ಒಡೆದುನಿಲ್ಲುವ ಕಲಾವಿದ ಶ್ರೀ ಟಿ ಎಂ ಕೃಷ್ಣ. ಕರ್ನಾಟಕ ಸಂಗೀತದ ಹೆಚ್ಚಿನ ಕಲಾವಿದರಂತೆ ಸಾಂಪ್ರದಾಯಿಕ ವೈದಿಕ ಕುಟುಂಬದಿಂದ ಬಂದು, ಸಂಗೀತವನ್ನು ತೀರಾ ಸಂಪ್ರದಾಯಿಕ ರೀತಿಯಲ್ಲಿ ಕಲಿತವರು. ತಾಯಿಯಿಂದ ಸಂಗೀತಕ್ಕೆ ಪ್ರವೇಶ ಪಡೆದ ಕೃಷ್ಣ, ಬಿ ಸೀತಾರಾಮ ಶರ್ಮ ಅವರಲ್ಲಿ ಹಲವು ವರ್ಷಗಳು ಕಲಿತು, ಮುಂದೆ ರಾಗ-ತಾನ-ಪಲ್ಲವಿಯ ತರಬೇತಿಯನ್ನು ವಿದ್ವಾನ್ ಚೆಂಗಲ್‌ಪೇಟ್ ರಂಗನಾಥನ್ ಪಡೆದರು. ಅನಂತರ ಅತ್ಯಂತ ಸಂಪ್ರದಾಯವಾದಿಯೂ, ಶ್ರೇಷ್ಠ ವಿದ್ವಾಂಸರೂ ಆದ […]

Krishna T M ಮಾತನಾಡುತ್ತಲೇ ಇರೋಣ ಟಿ ಎಂ ಕೃಷ್ಣ ಅವರೊಂದಿಗೆ ಮಾತುಕತೆ Read More »

Rajeev Taranath ಸರೋದ್ ಸರೋವರದ ನಡುವೆ ಸೌಗಂಧಿಕಾ ಪುಷ್ಪ

ಶೈಲಜಾ ಮತ್ತು ವೇಣುಗೋಪಾಲ್ ಅಸಾಧ್ಯ ಪ್ರತಿಭಾವಂತರೂ, ಲೋಕವಿಖ್ಯಾತರೂ ಆಗಿರುವವರ ಮಗನಾಗಿ ಹುಟ್ಟಿ ಬಾಳುವುದು ಸುಲಭವಲ್ಲ. ತಂದೆ ಲೋಕವಿಖ್ಯಾತ ಪಂಡಿತ ತಾರಾನಾಥರು. ಒಂದು ಇಡೀ ತಲೆಮಾರನ್ನು ತಮ್ಮ ಅಗಾಧ ಪ್ರತಿಭೆಯಿಂದ ಬೆರಗುಗೊಳಿಸಿದವರು. ತಾಯಿ ಸುಮತೀಬಾಯಿ ೧೯೨೫ರಷ್ಟು ಹಿಂದೆಯೇ ಮಹಿಳಾ ಹಕ್ಕುಗಳನ್ನು ಪ್ರತಿಪಾದಿಸಿ, ಪಂಡಿತ್ ನೆಹರೂ ಅಂತಹವರ ಮೆಚ್ಚುಗೆ ಗಳಿಸಿದವರು. ಇಂತಹವರ ಮಗನಾಗಿ ಸಾಧ್ಯವಿರುವುದು ಎರಡೇ ಆಯ್ಕೆ. ಅವರ ಅಗಾಧ ಪ್ರಭೆಯಲ್ಲಿ, ಅದರ ನೆರಳಿನಲ್ಲಿ, ಅವರ ಅಸ್ಮಿತೆಯಲ್ಲಿ ಕರಗಿಹೋಗುವುದು. ಇಲ್ಲವೇ ಅವರನ್ನು ಪ್ರೀತಿಸುತ್ತಾ, ಅನುಕರಿಸುತ್ತಾ, ಪ್ರಶ್ನಿಸುತ್ತಾ, ಹೋರಾಡುತ್ತಾ, ನಿರಾಕರಿಸುತ್ತಾ, ಮೆಚ್ಚುತ್ತಾ,

Rajeev Taranath ಸರೋದ್ ಸರೋವರದ ನಡುವೆ ಸೌಗಂಧಿಕಾ ಪುಷ್ಪ Read More »

Bhimasena Joshi- ಸಂಗೀತವನ್ನರಸಿ ಹೊರಟ ಭೀಮಸೇನ

ಸಂಗೀತವನ್ನರಸಿ ಹೊರಟ ಭೀಮಸೇನ ಶೈಲಜ ಮತ್ತು ವೇಣುಗೋಪಾಲ್ ಸಾಮಾನ್ಯವಾಗಿ ’ಪ್ರಯಾಣ’ ಎನ್ನುವುದು ಹುಡುಕಾಟಕ್ಕೆ, ಆತ್ಮಸಾಕ್ಷಾತ್ಕಾರಕ್ಕೆ ಬಳಸುವ ಒಂದು ಪ್ರತಿಮೆ. ಭೀಮಸೇನರಲ್ಲಿ ಪ್ರಯಾಣ ಎನ್ನುವುದು ಅಕ್ಷರಶಃ ಸಂಗೀತದ ಸಾಕ್ಷಾತ್ಕಾರವೇ ಆಗಿದೆ. ಇವರು ಹುಟ್ಟಿದ್ದು ೧೯೨೨ರ ಫೆಬ್ರುವರಿಯಲ್ಲಿ. ಅವರದ್ದು ಸಂಗೀತದ ಮನೆತನವಲ್ಲ. ಅಧ್ಯಯನಶೀಲತೆ ಮತ್ತು ವಿದ್ವತ್ತಿಗೆ ಹೆಸರಾದ ಮನೆ. ತಂದೆ ಗುರುರಾಜ ಜೋಶಿ ಬಹುಭಾಷಾ ಪಂಡಿತರು ಮತ್ತು ಶಿಕ್ಷಣತಜ್ಞರು. ಚಿಕ್ಕಪ್ಪ ಗೋವಿಂದಾಚಾರ್ಯರು ಪ್ರಖ್ಯಾತ ಮನೋಹರ ಗ್ರಂಥಮಾಲೆಯ ಸಂಸ್ಥಾಪಕರು. ಎಳೆಯ ಕಿವಿಗಳಿಗೆ ಸ್ವರಗಳು ಬಿದ್ದದ್ದು ಅಮ್ಮ ಹಾಡುತ್ತಿದ್ದ ದೇವರನಾಮಗಳಿಂದ. ಮನೆಯ ಬಳಿಯ

Bhimasena Joshi- ಸಂಗೀತವನ್ನರಸಿ ಹೊರಟ ಭೀಮಸೇನ Read More »