Niyatha

ತೆರಿಗೆ ಕಳ್ಳರನ್ನು ಬೆನ್ನು ಹತ್ತಿದ ಗೇಬ್ರಿಯಲ್

  ಜೆರಾರ‍್ಡ್ ಡೆಪಾರ್‌ಡ್ಯು ಪ್ರಖ್ಯಾತ ಫ್ರೆಂಚ್ ನಟ, ಉದ್ಯಮಿ, ಅಪಾರ ಶ್ರೀಮಂತ. ಸ್ವಾಭಾವಿಕವಾಗಿಯೇ ದೊಡ್ಡ ಪ್ರಮಾಣದಲ್ಲಿ ತೆರಿಗೆಯನ್ನು ಕಟ್ಟಬೇಕಿತ್ತು. ಎಲ್ಲಾ ಬಿಲಿಯನೇರುಗಳಂತೆ ಅವನಿಗೂ ತೆರಿಗೆ ಕಟ್ಟುವ ಮನಸ್ಸಿಲ್ಲ. ಎಲ್ಲರೂ ಮಾಡುವಂತೆ ಅವನು ತೆರಿಗೆ ತಪ್ಪಿಸಿಕೊಳ್ಳುವುದಕ್ಕೆ ಪಕ್ಕದ ಬೆಲ್ಜಿಯಂಗೆ ಹೋಗಿಬಿಟ್ಟ. ಎಷ್ಟು ಸಲೀಸಾಗಿ ಹೋಗಿಬಿಟ್ಟ ಅಂದರೆ ೨೦೧೨ರಲ್ಲಿ ಇದು ದೊಡ್ಡ ಸುದ್ದಿಯಾಗಿತ್ತು. ಹಲವರು ಮರೆತರು. ಆದರೆ ಗೇಬ್ರಿಯಲ್ ಜುಕ್‌ಮನ್ ಅನ್ನೊ ಒಬ್ಬ ಯುವ ಅರ್ಥಶಾಸ್ತ್ರಜ್ಞನಿಗೆ ಇದು ತುಂಬಾ ಕಾಡಿತು. ಅವನು ಇಡೀ ಘಟನೆಯನ್ನು ತೀರಾ ಆಸಕ್ತಿಯಿಂದ ಗಮನಿಸುತ್ತಿದ್ದ. ಆಗಷ್ಟೇ […]

ತೆರಿಗೆ ಕಳ್ಳರನ್ನು ಬೆನ್ನು ಹತ್ತಿದ ಗೇಬ್ರಿಯಲ್ Read More »

ತಳ್ಳೊ ಮಾಡೆಲ್ ಗಾಡಿಯಿದು ತಳ್ಳಿಬಿಡಪ್ಪ

ಭಾರತದ ಆರ್ಥಿಕತೆಯ ಬಗ್ಗೆ ತುಂಬಾ ಚರ್ಚೆ ನಡೆಯುತ್ತಿದೆ. ಮೋದಿಯವರಂತೂ ೨೦೪೭ರ ವೇಳೆಗೆ ಅದೊಂದು ಬೃಹತ್ ಶಕ್ತಿಯಾಗಿ ರೂಪುಗೊಳ್ಳಲಿದೆ ಎಂದು ಹೇಳುತ್ತಿದ್ದಾರೆ. ಜಿಡಿಪಿಯ ಹೆಚ್ಚಳದಂತಹ ಆರ್ಥಿಕ ಸೂಚಿಗಳನ್ನು ಉಲ್ಲೇಖಿಸುತ್ತಾ ಭಾರತದ ಆರ್ಥಿಕತೆ ಅದ್ಭುತವಾಗಿದೆ ಅಂತ ಬನ್ನಿಸಲಾಗುತ್ತಿದೆ. ನಿಜ ಹೊರಗಿನಿಂದ ನೋಡೋಕೆ ಸುಂದರವಾಗಿದೆ. ಸ್ವಲ್ಪ ಒಳಗೆ ನೋಡಿ ಅನ್ನುತ್ತಾರೆ ರತಿನ್ ರಾಯ್ ಅಂತಹವರು. ಅವರು ಹೇಳುವಂತೆ ನಮ್ಮ ಆರ್ಥಿಕತೆ ಒಂದು ಕಾರ್ ಇದ್ದ ಹಾಗೆ. ಚಲಿಸುತ್ತಿರುವ ಕಾರಿನಲ್ಲಿ ಕೂತು ನೋಡಿದಾಗ ಎಲ್ಲವೂ ಚೆನ್ನಾಗಿ ಕಾಣುತ್ತದೆ. ಒಮ್ಮೆ ಬಾನೆಟ್ಟನ್ನು ಬಿಚ್ಚಿ ನೋಡಿದರೆ

ತಳ್ಳೊ ಮಾಡೆಲ್ ಗಾಡಿಯಿದು ತಳ್ಳಿಬಿಡಪ್ಪ Read More »

ರಾಜೀವ್ ತಾರಾನಾಥರ ಗುಂಗಿನಲ್ಲಿ

  ಟಿ ಎಸ್ ವೇಣುಗೋಪಾಲ್ ಕೆಲ ವರ್ಷಗಳ ಹಿಂದೆ ರಾಜೀವ್ ತಾರಾನಾಥರ ಮನೆಗೆ ಹೋದಾಗ ಯಾವುದೋ ಮಲೆಯಾಳಂ ಪತ್ರಿಕೆಯೊಂದಕ್ಕೆ ಸಂದರ್ಶನ ನಡೆಯುತ್ತಿತ್ತು. ಶಾಸ್ತ್ರೀಯ ಸಂಗೀತದ ಬಗ್ಗೆ ವಿವರಿಸುತ್ತಿದ್ದರು, ಶಾಸ್ತ್ರೀಯ ಸಂಗೀತದಲ್ಲಿ ಸಂಗೀತಗಾರ ಹಾಗೂ ಕೇಳುಗನ ನಡುವೆ ಒಂದು ಟ್ರಾನ್ಸ್ಯಾಕ್ಷನ್ ನಡೆಯುತ್ತದೆ. ನೀವು ನೂರು ರೂಪಾಯಿ ಕೊಟ್ಟು ಒಂದು ಪೆನ್ನು ಕೊಂಡರೆ ಅದರ ಬೆಲೆ ನೂರು ರೂಪಾಯಿ ಅಂತ ಇಬ್ಬರೂ ಒಪ್ಪಿಕೊಂಡು ವ್ಯಾಪಾರ ಮಾಡುತ್ತಿರುತ್ತೇವೆ. ಪೆನ್ನು ಹೇಗಿರುತ್ತದೆ ಅನ್ನುವ ಅರಿವು ನಿಮಗಿರುತ್ತದೆ. ಅವನು ಪೆನ್ನು ಕೊಡದೆ ಬೇರೇನೊ ಕೊಟ್ಟರೆ

ರಾಜೀವ್ ತಾರಾನಾಥರ ಗುಂಗಿನಲ್ಲಿ Read More »