Samajamukhi

ದೇಶದ ಆರ್ಥಿಕತೆಗೆ ಬುನಾದಿ ಹಾಕಿಕೊಟ್ಟ ಆರ್ಥಿಕ ಪ್ರಯೋಗ

ಟಿ ಎಸ್ ವೇಣುಗೋಪಾಲ್ ಇತ್ತೀಚಿನ ದಿನಗಳಲ್ಲಿ ಭಾರತ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೂ ನೆಹರೂವನ್ನೇ ಕಾರಣ ಮಾಡೋದು ಕೆಲವರಿಗೆ ಗೀಳಾಗಿದೆ. ದೇಶದ ವಿಭಜನೆ, ಚೀನಾ, ಪಾಕಿಸ್ತಾನ, ಕೃಷಿ, ಬಡತನ, ಶಿಕ್ಷಣ ಯಾವುದೇ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಯಿರಲಿ ಅದಕ್ಕೆ ನೆಹರೂವನ್ನು ಹೊಣೆ ಮಾಡುವುದು ಸಾಮಾನ್ಯವಾಗಿದೆ. ಅವರು ಸತ್ತು ೬೦ ವರ್ಷವಾದರೂ ಸಂತೋಷವಾಗಿ ಬಯ್ಯುತ್ತಿರುತ್ತೇವೆ. ಇಂದಿನ ಆರ್ಥಿಕ ಬಿಕ್ಕಟ್ಟಿಗೂ ನೆಹರೂ ಆಗ ಅನುಸರಿಸಿದ ಮಾದರಿಯೇ ಕಾರಣ ಅನ್ನುವುದನ್ನು ಕೇಳಿದ್ದೇವೆ.   ಭಾರತ ಅನುಸರಿಸಿದ ಆರ್ಥಿಕ ಮಾದರಿಯನ್ನು ಸಾಮಾನ್ಯವಾಗಿ ನೆಹರೂ-ಮಹಾಲನೋಬಿಸ್ ಮಾದರಿ ಅಂತ […]

ದೇಶದ ಆರ್ಥಿಕತೆಗೆ ಬುನಾದಿ ಹಾಕಿಕೊಟ್ಟ ಆರ್ಥಿಕ ಪ್ರಯೋಗ Read More »

25ರ ನೋಬೆಲ್

[ಈ ವರ್ಷದ ಅರ್ಥಶಾಸ್ತ್ರದ ನೋಬೆಲ್ ಡೆರನ್ ಅಸಿಮೊಗ್ಲು, ಜೇಮ್ಸ್ ಎ ರಾಬಿನ್ಸನ್, ಹಾಗೂ ಸಿಮನ್ ಜಾನ್ಸನ್ ಅವರಿಗೆ ಲಭಿಸಿದೆ. ಡೆರನ್ ಅಸಿಮೊಗ್ಲು ಇಸ್ತಾಂಬುಲ್‌ನಲ್ಲಿ ಜನಿಸಿದರು. ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್‌ನಲ್ಲಿ ಪಿಎಚ್‌ಡಿ ಮಾಡಿದರು. ನಂತರ ಈಗ ಎಂಐಟಿಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಜೇಮ್ಸ್ ಎ ರಾಬಿನ್ಸನ್ ಯೇಲ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಮಾಡಿದರು. ಸದ್ಯ ಷಿಕ್ಯಾಗೋ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಸಿಮನ್ ಜಾನ್ಸನ್ ಎಂಐಟಿಯಲ್ಲಿ ಪಿಎಚ್‌ಡಿ ಮಾಡಿ, ಅಲ್ಲೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.] ಯಾಕೆ ಕೆಲ ದೇಶಗಳು

25ರ ನೋಬೆಲ್ Read More »

ಕ್ಷೇತ್ರ ಮರುವಿಂಗಡಣೆಯ ಚರ್ಚೆ: ಜನ ನಿಭಿಡ ಉತ್ತರ ವರ್ಸಸ್ ಜನ ಕಡಿಮೆ ಇರುವ ದಕ್ಷಿಣಕ್ಕೆ ಪರ್ಯಾಯಗಳಿವೆ

ಮೂಲ: ಅಂಜಿಶ್ನು ದಾಸ್ ಇಂಡಿಯನ್ ಎಕ್ಸ್‌ಪ್ರೆಸ್, ಮಾರ್ಚಿ ೧೮, ೨೦೨೫   ಈಗ ಕ್ಷೇತ್ರ ಮರುವಿಂಗಡನೆ ಕುರಿತ ಚರ್ಚೆ ತೀವ್ರವಾಗುತ್ತಿದೆ. ೨೦೨೬ರೊಳಗೆ ಅದು ನಿರ್ಧಾರವಾಗಬೇಕು. ಲೋಕಸಭೆಯಲ್ಲಿ ಸ್ಥಾನಗಳನ್ನು ನಿಗದಿಪಡಿಸಲು ಕೇವಲ ಜನಸಂಖ್ಯೆಯನ್ನು ಆಧಾರವಾಗಿ ಇಟ್ಟುಕೊಳ್ಳಬಾರದು ಎಂದು ಬಹುತೇಕ ಎಲ್ಲಾ ವಿರೋಧ ಪಕ್ಷಗಳು ಒಪ್ಪಿಕೊಂಡಿವೆ. ಯಾಕೆಂದರೆ ಇದರಿಂದ ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಿರುವ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ಇದಕ್ಕೆ ಹಲವು ಪರ್ಯಾಯ ಕ್ರಮಗಳನ್ನು ಹಲವು ವರ್ಷಗಳಿಂದ ಸೂಚಿಸುತ್ತಾ ಬರಲಾಗಿದೆ. ಫಲವತ್ತತೆಯ ದರವನ್ನು ಕ್ಷೇತ್ರಗಳ ಸಂಖ್ಯೆಯನ್ನು ನಿರ್ಧರಿಸುವುದಕ್ಕೆ ಪರಿಗಣಿಸಬೇಕು ಅನ್ನುವುದರಿಂದ ಮೊದಲುಗೊಂಡು ರಾಜ್ಯಸಭಾದ

ಕ್ಷೇತ್ರ ಮರುವಿಂಗಡಣೆಯ ಚರ್ಚೆ: ಜನ ನಿಭಿಡ ಉತ್ತರ ವರ್ಸಸ್ ಜನ ಕಡಿಮೆ ಇರುವ ದಕ್ಷಿಣಕ್ಕೆ ಪರ್ಯಾಯಗಳಿವೆ Read More »

ಕೆಂದ್ರದಿಂದ ರಾಜ್ಯಗಳಿಗೆ ನ್ಯಾಯವಾಗಿ ಸಿಗಬೇಕಾದ್ದು ಸಿಗುತ್ತಿದೆಯೇ?

ಆರ್.  ರಾಂಕುಮಾರ್ ಅನುವಾದ: ಟಿ ಎಸ್ ವೇಣುಗೋಪಾಲ್ ಇತ್ತೀಚೆಗೆ ಕೇರಳ ಹಾಗೂ ಕರ್ನಾಟಕದ ಸರ್ಕಾರಗಳು ಚಳುವಳಿ ನಡೆಸಿದವು. ಹಲವು ರಾಜ್ಯ ಸರ್ಕಾರಗಳು ಅದಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದವು. ಈ ಚಳುವಳಿ ಭಾರತದಲ್ಲಿನ ವಿತ್ತೀಯ ಒಕ್ಕೂಟ ವ್ಯವಸ್ಥೆಯಲ್ಲಿನ ಹಲವು ಸಮಸ್ಯಾತ್ಮಕ ಅಂಶಗಳನ್ನು ಮುನ್ನೆಲೆಗೆ ತಂದಿದೆ. ಹಣಕಾಸಿನ ವಿತರಣೆಗೆ ಸಂಬಂಧಿಸಿದಂತೆ ರಾಜ್ಯಗಳ ನಡುವೆ ಅಸಮಾನ ವಿತರಣೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳಿವೆ. ಹಾಗೆಯೇ ಕೇಂದ್ರದಿಂದ ರಾಜ್ಯಗಳಿಗೆ ಆಗುತ್ತಿರುವ ಹಂಚಿಕೆಯ ಬಗ್ಗೆಯೂ ಪ್ರಶ್ನೆಗಳಿವೆ. ಹೊಸದಾಗಿ ರಚನೆಯಾಗಿರುವ ೧೬ನೇ ಹಣಕಾಸು ಆಯೋಗ ಈ ಪ್ರಶ್ನೆಗಳನ್ನು

ಕೆಂದ್ರದಿಂದ ರಾಜ್ಯಗಳಿಗೆ ನ್ಯಾಯವಾಗಿ ಸಿಗಬೇಕಾದ್ದು ಸಿಗುತ್ತಿದೆಯೇ? Read More »