Musicians

Mahalakshmi H S -ಮರೆಯಲ್ಲೇ ಉಳಿದು, ನಮ್ಮಿಂದ ದೂರವಾದ ಪ್ರತಿಭೆ

ವಿದುಷಿ ಎಚ್ ಎಸ್ ಮಹಾಲಕ್ಷ್ಮಿಯವರು ಇಂದು ನಮ್ಮೊಂದಿಗಿಲ್ಲ. ಅತ್ಯಂತ ಹಿರಿಯ ಕಲಾವಿದೆ. ಇಂದೋ ನಾಳೆಯೋ ಬಿದ್ದು ಹೋಗುತ್ತದೇನೋ ಅನ್ನುವಂತಿದ್ದ ಒಂದು ಪುಟ್ಟ ಮನೆಯಲ್ಲಿ ಬಹುಕಾಲ ಜೀವನನಡೆಸಿದರು. ಅಲ್ಲಿಂದ ಬೇರೆಡೆ ಹೋಗುವುದಕ್ಕೂ ಅವರ ಮನಸ್ಸು ಒಪ್ಪುತ್ತಿರಲಿಲ್ಲ. ಅದಕ್ಕೇ ಒಗ್ಗಿ ಹೋಗಿದ್ದರು. ಅದು ಅವರ ಮನಸ್ಥಿತಿಯ ದ್ಯೋತಕವೂ ಹೌದು. ಆ ಮನೆಯಲ್ಲೇ ಅವರ ಸಂಗೀತಜೀವನ ಮೂಡಿದ್ದು. ಅದರೊಂದಿಗೆ ಅವರ ಬದುಕಿನ ಸಾವಿರಾರು ನೆನಪುಗಳು ತೆಕ್ಕೆ ಹಾಕಿಕೊಂಡಿದ್ದವು. ಅದನ್ನು ಕಡಿದುಕೊಳ್ಳಲು ಅವರಿಗೆ ಇಷ್ಟವಿರಲಿಲ್ಲ. ಹಾಗಾಗಿ ಆ ಮನೆಯನ್ನು ಬಿಡಲು ಹಿಂದೇಟು ಹಾಕುತ್ತಿದ್ದರು. […]

Mahalakshmi H S -ಮರೆಯಲ್ಲೇ ಉಳಿದು, ನಮ್ಮಿಂದ ದೂರವಾದ ಪ್ರತಿಭೆ Read More »

ನನ್ನ ತಂದೆಯ ರಸಯಾತ್ರೆಯ ಅಂತ್ಯ

[ಮಲ್ಲಿಕಾರ್ಜುನ ಮನ್ಸೂರು ಬರೆದ ನನ್ನ ರಸಯಾತ್ರೆ ಪುಸ್ತಕವನ್ನು ತಂದೆ ನಿಲ್ಲಿಸಿದ ಕಡೆಯಿಂದ ರಾಜಶೇಖರ ಮನ್ಸೂರರು ಬರೆದಿದ್ದಾರೆ. ಅದರ ಅನುವಾದವನ್ನು ಈ ಹಿಂದೆ ಮಾಡಿದ್ದೆವು. ಈ ಸಂದರ್ಭದಲ್ಲಿ ಅದನ್ನು ಮತ್ತೆ ನೆನಪು ಮಾಡಿಕೊಳ್ಳುತ್ತಿದ್ದೇವೆ.] ೧೯೮೧ರಲ್ಲಿ ನನ್ನ ತಂದೆ ತಮ್ಮ ರಸಯಾತ್ರೆಯ ನಿರೂಪಣೆಯನ್ನು ನಿಲ್ಲಿಸಿದ್ದರು. ಆಮೇಲೂ ಅವರು ಹನ್ನೊಂದು ವರ್ಷಗಳು ನಮ್ಮೊಡನಿದ್ದರು. ಅವರು ನಮ್ಮನ್ನಗಲಿದ್ದು ೧೯೯೨ರ ಸೆಪ್ಟೆಂಬರ್ ೧೨ರಂದು. ಅವರ ರಸಯಾತ್ರೆಯಲ್ಲಿ ಅವರ ಸುಖದುಃಖಗಳಿಗೆ ಹೆಗಲುಕೊಟ್ಟು ಅಚಲವಾಗಿ ನಿಂತವಳು ನನ್ನವ್ವ ಗಂಗಮ್ಮ. ಅಮ್ಮ ೧೯೮೩ರಲ್ಲಿ ತೀರಿಹೋದಳು. ಅದು ಅಪ್ಪನಿಗೆ ಸಹಿಸಲಾರದ

ನನ್ನ ತಂದೆಯ ರಸಯಾತ್ರೆಯ ಅಂತ್ಯ Read More »

Karanth B V-ಸಂಗೀತವೆನ್ನುವುದು ವಾಚಿಕದ ಒಂದು ಭಾಗ

[ಬಿ ವಿ ಕಾರಂತರು ರಂಗ ಸಂಗೀತದ ಬಗ್ಗೆ ಅಲ್ಲಿ ಇಲ್ಲಿ ಮಾತನಾಡಿದ್ದನ್ನು ಇಲ್ಲಿ ಸಂಗ್ರಹಿಸಿದ್ದೇವೆ. ನಿಮ್ಮ ಬಳಿ ಇದಕ್ಕೆ ಸಂಬಂಧಿಸಿದಂತೆ ಕಾರಂತರ ಇನ್ಯಾವುದಾದರು ಸಂದರ್ಶನ ಅಥವಾ ಲೇಖನ ಇದ್ದರೆ ದಯಮಾಡಿ ಹಂಚಿಕೊಳ್ಳಿ. ಇದರ ಸಂಕ್ಷಿಪ್ತ ಭಾಗ ಈ ತಿಂಗಳ ತಿಲ್ಲಾನ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ.] -ಶೈಲಜಾ ಆಧುನಿಕ ರಂಗಭೂಮಿಯಲ್ಲಿ ಸಂಗೀತ ಮತ್ತು ಹಾಡುಗಳ ಬಳಕೆ ಹೆಚ್ಚುಕಡಿಮೆ ಮರೆಯಾಗಿ ಹೋಗಿದ್ದ ಹೊತ್ತಿನಲ್ಲಿ ಬಿ ವಿ ಕಾರಂತರು ಹಾಡು ಹಾಗೂ ಸಂಗೀತವನ್ನು ಮತ್ತೆ ರಂಗಕ್ಕೆ ತಂದರು ಆದರೆ ಸಂಪೂರ್ಣವಾಗಿ ಬೇರೆ ರೀತಿಯಲ್ಲಿ.

Karanth B V-ಸಂಗೀತವೆನ್ನುವುದು ವಾಚಿಕದ ಒಂದು ಭಾಗ Read More »

Murthy T K -ನೂರು ವರ್ಷದ ಹೊಸ್ತಿಲಲ್ಲಿರುವ ವಿದ್ವಾನ್ ಟಿ ಕೆ ಮೂರ್ತಿ

ಟಿ ಕೆ ಮೂರ್ತಿ ಸುಮಾರು ಐದಾರು ತಲೆಮಾರಿನ ಸಂಗೀತಗಾರರಿಗೆ ಮೃದಂಗ ಸಹಕಾರ ನೀಡಿದವರು. ತಂಜಾವೂರು ಶೈಲಿಯ ಶ್ರೇಷ್ಠ ಪ್ರತಿಪಾದಕರಲ್ಲಿ ಒಬ್ಬರು. ಮೃದಂಗವಾದನ ಬೆಳೆದು ಬದಲಾದ ಪರಿ, ಹೊಸ ಹೊಸ ವಾದನ ತಂತ್ರಗಳು ಮತ್ತು ಬೇರೆ ವಾದ್ಯಗಳ ಕೆಲವು ತಂತ್ರಗಳನ್ನು ಮೈಗೂಡಿಸಿಕೊಂಡು ಅದು ಬೆಳೆದದ್ದನ್ನು ಕುರಿತು ಈ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸ್ವತಃ ಮೂರ್ತಿ ಯವರು ಕೂಡ ತಮ್ಮ ತಲೆಮಾರಿನ ಹಲವರೊಡನೆ ಒಡನಾಡಿ, ಅವರಿಂದ ಕಲಿತು, ಅವೆಲ್ಲವನ್ನೂ ತಮ್ಮ ವಾದನದಲ್ಲಿ ಸೇರಿಸಿಕೊಂಡಿದ್ದಾರೆ. ಅವರ ಮಾತುಗಳು ಅಂದಿನ ಸಾಮಾಜಿಕ, ಸಾಂಸ್ಕೃತಿಕ ಪರಿಸರದ

Murthy T K -ನೂರು ವರ್ಷದ ಹೊಸ್ತಿಲಲ್ಲಿರುವ ವಿದ್ವಾನ್ ಟಿ ಕೆ ಮೂರ್ತಿ Read More »

Rashid Khan -ರಶೀದ್ ಖಾನ್

ನೀವಿಷ್ಟು ಬೇಗ ಹೋಗಬಾರದಿತ್ತು ಉಸ್ತಾದರೇ. ಒಮ್ಮೆ ಸಂದರ್ಶನವೊಂದರಲ್ಲಿ ಹಿಂದೂಸ್ತಾನಿ ಸಂಗೀತದ ಭವಿಷ್ಯದ ಬಗ್ಗೆ ಭೀಮಸೇನ ಜೋಷಿಯನ್ನು ಕೇಳಿದಾಗ ಹಿಂದುಸ್ತಾನಿ ಸಂಗೀತದ ಭವಿಷ್ಯ ರಶೀದ್ ಖಾನ್ ಅಂದಿದ್ದರು. ಅಷ್ಟೇ ಅಲ್ಲ ತನ್ನೊಂದಿಗೆ ಜುಗಲ್‌ಬಂದಿಯನ್ನು ಹಾಡಲು ಆಹ್ವಾನಿಸಿದ್ದರು. ರಷೀದ್ ಖಾನ್ ತುಂಬಾ ಸಣ್ಣ ವಯಸ್ಸಿನಲ್ಲೇ ಅಷ್ಟೊಂದು ಭರವಸೆ ಮೂಡಿಸಿದ್ದರು. ಅವರು ಕಲ್ಕತ್ತೆಯಲ್ಲಿ ತಮ್ಮ ಮೊದಲ ಕಚೇರಿ ಮಾಡಿದಾಗ ಅವರಿಗೆ ಕೇವಲ ೧೧ ವರ್ಷಗಳು. ಅಂದು ಅವರು ಹಾಡಿದ್ದು ಪಟದೀಪ್ ರಾಗದ ಬಂದಿಶ್. ಆ ಸಂಗೀತೋತ್ಸವದಲ್ಲಿ ಹಿಂದುಸ್ತಾನಿ ಸಂಗೀತದ ದಿಗ್ಗಜರೆಲ್ಲರೂ ಇದ್ದರು.

Rashid Khan -ರಶೀದ್ ಖಾನ್ Read More »

Sheik Chinna Moulana-ಷೇಕ್ ಚಿನ್ನ ಮೌಲಾನಾ ಸಾಹೇಬ್

ಸಂಗೀತ ನನ್ನ ಧರ್ಮ  ನೂರರ ನೆನಪು. ಸಂಗ್ರಹ: ಟಿ ಎಸ್ ವೇಣುಗೋಪಾಲ್ “ಸಂಗೀತ ನನ್ನ ಧರ್ಮ, ಪರಿಪೂರ್ಣತೆ ನನ್ನ ಗುರಿ” ಅಂತ ಬದುಕಿನುದ್ದಕ್ಕೂ ಭಾವಿಸಿದ್ದ ಷೇಕ್ ಚಿನ್ನ ಮೌಲಾನ ಸಾಹೇಬರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಮ್ಯೂಸಿಕ್ ಅಕಾಡೆಮಿಯಲ್ಲಿ ಅವರ ಮೊಮ್ಮಕ್ಕಳಾದ ಖಾಸಿಂ ಹಾಗೂ ಬಾಬು ಅವರು ನೀಡಿದ ಪ್ರಾತ್ಯಕ್ಷಿಯ ಸಂಗ್ರಹ ರೂಪ ಈ ಲೇಖನ. ಮೌಲಾನಾ ಅವರ ಹುಟ್ಟೂರು ೪೦-೫೦ ಕುಟುಂಬಗಳು ವಾಸಿಸುತ್ತಿದ್ದ ಆಂಧ್ರಪ್ರದೇಶದ ಒಂದು ಪುಟ್ಟ ಗ್ರಾಮ ಕರವಡಿ. ಆದರೆ ನಾಗಸ್ವರದ ದೃಷ್ಟಿಯಿಂದ ತುಂಬಾ ಮಹತ್ವದ

Sheik Chinna Moulana-ಷೇಕ್ ಚಿನ್ನ ಮೌಲಾನಾ ಸಾಹೇಬ್ Read More »

Ramanathan M D-ಎಂ.ಡಿ. ರಾಮನಾಥನ್ ಎಂದರೆ ಎಂಡಿ ಫಾರ್ ಮ್ಯೂಸಿಕ್

ಶೈಲಜಾ ಮಂಜಪರ ದೇವೇಶ ಭಾಗವತರ್ ರಾಮನಾಥನ್ ಪಾಲಕ್ಕಾಡ್ ವಿಕ್ಟೋರಿಯಾ ಕಾಲೇಜಿನಲ್ಲಿ ಓದಿದ್ದು ಭೌತಶಾಸ್ತ್ರದ ಬಿಎಸ್‌ಸಿ ಆದರೆ ಒಲಿದಿದ್ದು ಎಲೆಕ್ಟ್ರೋ ಮ್ಯಾಗನೆಟಿಕ್ ತರಂಗಗಳಿಗೆ ಬದಲಾಗಿ ನಾದ ತರಂಗಗಳಿಗೆ, ಸ್ವರಗಳ ರೆಸೊನೆನ್ಸ್‌ಗೆ. ಎಲ್ಲರಿಗೂ ಎಂಡಿಆರ್ ಎಂದೇ ಪರಿಚಿತರಾಗಿದ್ದ ರಾಮನಾಥನ್ ಕರ್ನಾಟಕ ಸಂಗೀತದ ಒಬ್ಬ ಅನನ್ಯ, ಅನನುಕರಣೀಯ, ವಿಶಿಷ್ಟ ಸಂಗೀತ ಪ್ರತಿಭೆ. ಹೊಕ್ಕುಳ ಆಳದಿಂದ, ಗಜಗಾಂಭೀರ್ಯದಿಂದ, ಮೂಡಿಬರುವ, ಹೆಬ್ಬಾವಿನಷ್ಟು ಭಾರವಾದ ಕೊರಲು ಎಂಡಿ ಅವರ ಹೆಗ್ಗುರುತು. ಇದು ಎಂಡಿ ಅವರ ನೂರನೇ ವರ್ಷ (೨೦/೦೫/೧೯೨೩ – ೨೭/೦೪/೧೯೮೪). ಎಂ ಡಿ ಸಂಗೀತ

Ramanathan M D-ಎಂ.ಡಿ. ರಾಮನಾಥನ್ ಎಂದರೆ ಎಂಡಿ ಫಾರ್ ಮ್ಯೂಸಿಕ್ Read More »

T S Satyavathi, ರಾಗ ಅನ್ನೋದು ಅಕ್ಷರವೆಂಬ ಅಚ್ಚಿನಲ್ಲಿ ಸುರಿದ ಪಾಕ. ಡಾ ಟಿ ಎಸ್ ಸತ್ಯವತಿಯವರೊಂದಿಗಿನ ಸಂದರ್ಶನ

ಸಂದರ್ಶಕರು – ಶೈಲಜ   ಡಾ ಟಿ ಎಸ್ ಸತ್ಯವತಿಯವರು ಹೆಸರಾಂತ ಕರ್ನಾಟಕ ಸಂಗೀತ ಗಾಯಕಿ, ಸಂಗೀತಶಾಸ್ತ್ರಜ್ಞೆ ಹಾಗೂ ಸಂಸ್ಕೃತ ವಿದುಷಿ. ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು. ಎರಡರ ಹರೆಯದಲ್ಲಿಯೇ ಮೈಸೂರು ಮಹಾರಾಣಿಯ ಮುಂದೆ ಹಾಡಿದ ಬಾಲಪ್ರತಿಭೆ. ಸಂಗೀತದಲ್ಲಿ ಅಭಿರುಚಿ ಹಾಗೂ ಪರಿಶ್ರಮವಿದ್ದ ತಾಯಿಯ ಕಟ್ಟುನಿಟ್ಟಾದ ಮೇಲ್ವಿಚಾರಣೆಯಲ್ಲಿ ಅವರ ಸಂಗೀತ ಪ್ರತಿಭೆ ಅರಳಿತು. ಹಿರಿಯಕ್ಕ ವಿದುಷಿ ವಸಂತ ಮಾಧವಿ, ವಿದ್ವಾನ್ ಆರ್ ಕೆ ಶ್ರೀಕಂಠನ್ ಅವರ ಮಾರ್ಗದರ್ಶನದಲ್ಲಿ ಅವರ ಕಲೆ ಅರಳಿ, ಪಕ್ವಗೊಂಡಿತು. ವಿದ್ವಾನ್ ಬೆಂಗಳೂರು ಕೆ ವೆಂಕಟರಾಂ

T S Satyavathi, ರಾಗ ಅನ್ನೋದು ಅಕ್ಷರವೆಂಬ ಅಚ್ಚಿನಲ್ಲಿ ಸುರಿದ ಪಾಕ. ಡಾ ಟಿ ಎಸ್ ಸತ್ಯವತಿಯವರೊಂದಿಗಿನ ಸಂದರ್ಶನ Read More »

Kishori Amonkar -ನಾದತಪಸ್ಸಿನಲ್ಲಿ ಕಿಶೋರಿತಾಯಿ

Photo by Avinash paascricha   “ನನ್ನಪ್ಪ ತೀರಿಕೊಂಡಾಗ ನಾನು ತುಂಬಾ ಸಣ್ಣವಳು. ಆಗ ನಮ್ಮಮ್ಮನ ಬಳಿ ಹಣವಿರಲಿಲ್ಲ, ಬೇರೆಯವರ ಬೆಂಬಲವೂ ಇರಲಿಲ್ಲ. ನಾವು ಮೂವರು ಒಡಹುಟ್ಟಿದವರು. ನಾನೇ ದೊಡ್ಡವಳು, ನನ್ನ ನಂತರ ತಮ್ಮ ಮತ್ತು ತಂಗಿ ಕೊನೆಯವಳು. ಮೂವರನ್ನು ಓದಿಸಿ, ಸಂಗೀತ ಮುಂತಾದ್ದನ್ನು ಕಲಿಸುವ ಹೊಣೆ ಅವರ ಮೇಲೆ ಬಿತ್ತು. ತುಂಬಾ ಕಷ್ಟಪಟ್ಟರು. ಆದರೆ ಕಷ್ಟದ ಅನುಭವ ಒಂದಿಷ್ಟೂ ನಮಗಾಗದಂತೆ ಬೆಳೆಸಿದರು. ನಮ್ಮನ್ನು ಚೆನ್ನಾಗಿ ಓದಿಸಿದರು. ಅಮ್ಮ ಪಟ್ಟ ಕಷ್ಟಗಳನ್ನು ನಾನಿಲ್ಲಿ ವಿವರಿಸುತ್ತಿಲ್ಲ. ಕಾರ್ಯಕ್ರಮ ನೀಡಲು

Kishori Amonkar -ನಾದತಪಸ್ಸಿನಲ್ಲಿ ಕಿಶೋರಿತಾಯಿ Read More »

Balasubramanya S P ಹಿನ್ನೆಲೆಗಾಯನಕ್ಕೊಂದು ವ್ಯಾಖ್ಯಾನ ನೀಡಿದ ಎಸ್‌ಪಿಬಿ

ವೇಣುಗೋಪಾಲ್ ಟಿ.ಎಸ್  ಮತ್ತು ಶೈಲಜ ಮದ್ರಾಸಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ೧೭ರ ಹರೆಯದ ಒಬ್ಬ ಯುವಕ ಸಂಗೀತ ಸ್ಪರ್ಧೆಯೊಂದರಲ್ಲಿ ಹಾಡುತ್ತಾನೆ. ಎರಡನೇ ಬಹುಮಾನ ಬರುತ್ತದೆ. ಬಹುಮಾನ ವಿತರಣೆಯ ಸಂದರ್ಭದಲ್ಲಿ ಬಹುಮಾನ ವಿಜೇತರು ಹಾಡಬೇಕು ಅನ್ನೋದು ಅಲ್ಲಿಯ ಪದ್ಧತಿ. ಬಹುಮಾನ ವಿತರಣೆಗೆ ಬಂದ ಎಸ್ ಜಾನಕಿಯವರು ಹಾಡು ಕೇಳಿ ಸಿಟ್ಟಾಗುತ್ತಾರೆ. ಏನ್ರಿ ಇದ? ಈ ಹುಡುಗ ಎಷ್ಟು ಚೆನ್ನಾಗಿ ಹಾಡ್ತಾನೆ. ಇವನಿಗೆ ಎರಡನೇ ಬಹುಮಾನ ಕೊಟ್ಟಿದ್ದೀರಿ. ಮೊದಲ ಬಹುಮಾನ ಕೊಡಬೇಕಿತ್ತು ಅಂತ ಸಂಘಟಕರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಹುಡುಗನನ್ನು ಕರೆದು

Balasubramanya S P ಹಿನ್ನೆಲೆಗಾಯನಕ್ಕೊಂದು ವ್ಯಾಖ್ಯಾನ ನೀಡಿದ ಎಸ್‌ಪಿಬಿ Read More »