Mahalakshmi H S -ಮರೆಯಲ್ಲೇ ಉಳಿದು, ನಮ್ಮಿಂದ ದೂರವಾದ ಪ್ರತಿಭೆ
ವಿದುಷಿ ಎಚ್ ಎಸ್ ಮಹಾಲಕ್ಷ್ಮಿಯವರು ಇಂದು ನಮ್ಮೊಂದಿಗಿಲ್ಲ. ಅತ್ಯಂತ ಹಿರಿಯ ಕಲಾವಿದೆ. ಇಂದೋ ನಾಳೆಯೋ ಬಿದ್ದು ಹೋಗುತ್ತದೇನೋ ಅನ್ನುವಂತಿದ್ದ ಒಂದು ಪುಟ್ಟ ಮನೆಯಲ್ಲಿ ಬಹುಕಾಲ ಜೀವನನಡೆಸಿದರು. ಅಲ್ಲಿಂದ ಬೇರೆಡೆ ಹೋಗುವುದಕ್ಕೂ ಅವರ ಮನಸ್ಸು ಒಪ್ಪುತ್ತಿರಲಿಲ್ಲ. ಅದಕ್ಕೇ ಒಗ್ಗಿ ಹೋಗಿದ್ದರು. ಅದು ಅವರ ಮನಸ್ಥಿತಿಯ ದ್ಯೋತಕವೂ ಹೌದು. ಆ ಮನೆಯಲ್ಲೇ ಅವರ ಸಂಗೀತಜೀವನ ಮೂಡಿದ್ದು. ಅದರೊಂದಿಗೆ ಅವರ ಬದುಕಿನ ಸಾವಿರಾರು ನೆನಪುಗಳು ತೆಕ್ಕೆ ಹಾಕಿಕೊಂಡಿದ್ದವು. ಅದನ್ನು ಕಡಿದುಕೊಳ್ಳಲು ಅವರಿಗೆ ಇಷ್ಟವಿರಲಿಲ್ಲ. ಹಾಗಾಗಿ ಆ ಮನೆಯನ್ನು ಬಿಡಲು ಹಿಂದೇಟು ಹಾಕುತ್ತಿದ್ದರು. […]
Mahalakshmi H S -ಮರೆಯಲ್ಲೇ ಉಳಿದು, ನಮ್ಮಿಂದ ದೂರವಾದ ಪ್ರತಿಭೆ Read More »