RAGAMALA

Balasubramanya S P ಹಿನ್ನೆಲೆಗಾಯನಕ್ಕೊಂದು ವ್ಯಾಖ್ಯಾನ ನೀಡಿದ ಎಸ್‌ಪಿಬಿ

ವೇಣುಗೋಪಾಲ್ ಟಿ.ಎಸ್  ಮತ್ತು ಶೈಲಜ ಮದ್ರಾಸಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ೧೭ರ ಹರೆಯದ ಒಬ್ಬ ಯುವಕ ಸಂಗೀತ ಸ್ಪರ್ಧೆಯೊಂದರಲ್ಲಿ ಹಾಡುತ್ತಾನೆ. ಎರಡನೇ ಬಹುಮಾನ ಬರುತ್ತದೆ. ಬಹುಮಾನ ವಿತರಣೆಯ ಸಂದರ್ಭದಲ್ಲಿ ಬಹುಮಾನ ವಿಜೇತರು ಹಾಡಬೇಕು ಅನ್ನೋದು ಅಲ್ಲಿಯ ಪದ್ಧತಿ. ಬಹುಮಾನ ವಿತರಣೆಗೆ ಬಂದ ಎಸ್ ಜಾನಕಿಯವರು ಹಾಡು ಕೇಳಿ ಸಿಟ್ಟಾಗುತ್ತಾರೆ. ಏನ್ರಿ ಇದ? ಈ ಹುಡುಗ ಎಷ್ಟು ಚೆನ್ನಾಗಿ ಹಾಡ್ತಾನೆ. ಇವನಿಗೆ ಎರಡನೇ ಬಹುಮಾನ ಕೊಟ್ಟಿದ್ದೀರಿ. ಮೊದಲ ಬಹುಮಾನ ಕೊಡಬೇಕಿತ್ತು ಅಂತ ಸಂಘಟಕರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಹುಡುಗನನ್ನು ಕರೆದು […]

Balasubramanya S P ಹಿನ್ನೆಲೆಗಾಯನಕ್ಕೊಂದು ವ್ಯಾಖ್ಯಾನ ನೀಡಿದ ಎಸ್‌ಪಿಬಿ Read More »

Bhimasena Joshi- ಸಂಗೀತವನ್ನರಸಿ ಹೊರಟ ಭೀಮಸೇನ

ಸಂಗೀತವನ್ನರಸಿ ಹೊರಟ ಭೀಮಸೇನ ಶೈಲಜ ಮತ್ತು ವೇಣುಗೋಪಾಲ್ ಸಾಮಾನ್ಯವಾಗಿ ’ಪ್ರಯಾಣ’ ಎನ್ನುವುದು ಹುಡುಕಾಟಕ್ಕೆ, ಆತ್ಮಸಾಕ್ಷಾತ್ಕಾರಕ್ಕೆ ಬಳಸುವ ಒಂದು ಪ್ರತಿಮೆ. ಭೀಮಸೇನರಲ್ಲಿ ಪ್ರಯಾಣ ಎನ್ನುವುದು ಅಕ್ಷರಶಃ ಸಂಗೀತದ ಸಾಕ್ಷಾತ್ಕಾರವೇ ಆಗಿದೆ. ಇವರು ಹುಟ್ಟಿದ್ದು ೧೯೨೨ರ ಫೆಬ್ರುವರಿಯಲ್ಲಿ. ಅವರದ್ದು ಸಂಗೀತದ ಮನೆತನವಲ್ಲ. ಅಧ್ಯಯನಶೀಲತೆ ಮತ್ತು ವಿದ್ವತ್ತಿಗೆ ಹೆಸರಾದ ಮನೆ. ತಂದೆ ಗುರುರಾಜ ಜೋಶಿ ಬಹುಭಾಷಾ ಪಂಡಿತರು ಮತ್ತು ಶಿಕ್ಷಣತಜ್ಞರು. ಚಿಕ್ಕಪ್ಪ ಗೋವಿಂದಾಚಾರ್ಯರು ಪ್ರಖ್ಯಾತ ಮನೋಹರ ಗ್ರಂಥಮಾಲೆಯ ಸಂಸ್ಥಾಪಕರು. ಎಳೆಯ ಕಿವಿಗಳಿಗೆ ಸ್ವರಗಳು ಬಿದ್ದದ್ದು ಅಮ್ಮ ಹಾಡುತ್ತಿದ್ದ ದೇವರನಾಮಗಳಿಂದ. ಮನೆಯ ಬಳಿಯ

Bhimasena Joshi- ಸಂಗೀತವನ್ನರಸಿ ಹೊರಟ ಭೀಮಸೇನ Read More »

Miriam Makeba-ಬದುಕೇ ಹಾಡಾದ ಮೀರಿಯಂ ಮಕೇಬಾ,

ಶೈಲಜಾ ಹಾಡು-ನೃತ್ಯದೊಡನೆ ಆಫ್ರಿಕಾದವರಿಗೆ ಇರುವ ಸಂಬಂಧವೇ ಬೇರೆ ರೀತಿಯದ್ದು. ಅವರಲ್ಲಿ ಅದು ಒಡಲು ಉಸಿರಿನ ಸಂಬಂಧ. ಜೀವದೊಳಗಿರುವ ಹಸಿವು, ಬಾಯರಿಕೆ, ಸುಸ್ತು, ಸಂಕಟ, ಪ್ರೀತಿ, ಪ್ರಣಯದಂತೆ ಹಾಡು-ನೃತ್ಯಗಳು ಕೂಡ ಅವರ ಮೂಲಭೂತ ಪ್ರವೃತ್ತಿ. ಹೀಗೆ ಹಾಡೇ ಒಡಲಾಗಿದ್ದ ದಕ್ಷಿಣ ಆಫ್ರಿಕಾದ ಇತಿಹಾಸದಲ್ಲಿ ಮಕೇಬಾ ಬಹು ಮುಖ್ಯ ವ್ಯಕ್ತಿ. ಅವಳು ಮಾಮ್ಮಾ ಆಫ್ರಿಕಾ. ಅವಳ ಬದುಕು ಸಂಗೀತವಲ್ಲದೆ ಮತ್ತೇನಲ್ಲ. ಅವಳು ತನ್ನ ಹಾಡಿನ ಮೂಲಕವೇ ಇಡೀ ಆಫ್ರಿಕೆಯ ಬದುಕು, ಬವಣೆ, ದಬ್ಬಾಳಿಕೆ, ಹಿಂಸೆ, ರಾಜಕಾರಣ ಎಲ್ಲವನ್ನೂ ಬಿಚ್ಚಿಡುತ್ತಾ ಹೋಗುತ್ತಾಳೆ.

Miriam Makeba-ಬದುಕೇ ಹಾಡಾದ ಮೀರಿಯಂ ಮಕೇಬಾ, Read More »

Ananthaswamy Mysore – ಮೈಸೂರು ಅನಂತಸ್ವಾಮಿ

ಶೈಲಜಾ ಮೈಸೂರು ಅನಂತಸ್ವಾಮಿಯವರು ಕರ್ನಾಟಕ ಕಂಡ ಅತ್ಯಂತ ಪ್ರತಿಭಾನ್ವಿತ ಸಂಗೀತಗಾರರಲ್ಲಿ ಒಬ್ಬರು. ಸುಗಮ ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆ ಅನನ್ಯ. ಈ ಲೇಖನದಲ್ಲಿ ಅನಂತಸ್ವಾಮಿಯವರ ಬದುಕು ಮತ್ತು ಸಂಗೀತವನ್ನು ಅನಂತಸ್ವಾಮಿಯವರ ಜೊತೆಗಿನ ಸಂದರ್ಶನ, ಅವರನ್ನು ಕುರಿತ ಸಂದರ್ಶನ, ಅವರನ್ನು ಕುರಿತು ಖ್ಯಾತ ಕವಿಗಳು ಆಡಿರುವ ಮಾತುಗಳನ್ನು ಒಟ್ಟುಮಾಡಿ ಅವರ ಸಂಗೀತಾತ್ಮಕ ಬದುಕನ್ನು ಕಟ್ಟಲು ಪ್ರಯತ್ನವಿದೆ. ಕವಿ ಸುಮತೀಂದ್ರ ನಾಡಿಗರು ನಡೆಸಿಕೊಟ್ಟಿರುವ ಅನಂತಸ್ವಾಮಿಯವರ ಸಂದರ್ಶನ, ಅನಂತಸ್ವಾಮಿಯವರನ್ನು ಕುರಿತು ಪಂಡಿತ್ ರಾಜೀವ ತಾರಾನಾಥರ ಸಂದರ್ಶನ, ಪುತಿನ, ಲಕ್ಷ್ಮೀನಾರಾಯಣ ಭಟ್ಟರು, ಹೆಚ್

Ananthaswamy Mysore – ಮೈಸೂರು ಅನಂತಸ್ವಾಮಿ Read More »

Dhanammal, ಧನಮ್ಮಾಳ್ ಜೀವಂತ ದಂತಕಥೆ

ಶೈಲಜಾ   ಸಂಗೀತ ಲೋಕದ ಮಾತೃದೇವತೆ ಎನಿಸಿಕೊಂಡು ಬದುಕಿದ್ದಾಗಲೇ ಒಂದು ಐತಿಹ್ಯವಾಗಿದ್ದ ಧನಮ್ಮಾಳ್ ತನ್ನ ಸಮಕಾಲೀನರು ಮತ್ತು ಮುಂದಿನ ಪೀಳಿಗೆಯವರಲ್ಲಿ ಗೌರವ, ಭಯ, ಬೆರಗನ್ನು ಹುಟ್ಟಿಸಿದ ಅಸಾಧಾರಣ ಕಲಾವಿದೆ. ಸಂಗೀತದ ಉತ್ಕೃಷ್ಟತೆಗೆ ಇಂದಿಗೂ ಒಂದು ರೆಫರೆನ್ಸ್ ಪಾಯಿಂಟ್. ಆನೆ ನಡೆದದ್ದೇ ದಾರಿ.-ಸಂ. ಧನಮ್ಮಾಳ್ ಹುಟ್ಟಿದ್ದು ೧೮೬೮ರಲ್ಲಿ ಮದ್ರಾಸಿನ ಜಾರ್ಜ್ ಟೌನಿನ ನಾಟ್ಟು ಪಿಳ್ಳೈಯಾರ್ ರಸ್ತೆಯಲ್ಲಿ. ಸಮುದಾಯದ ನೆನಪಿನಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದ ಏಳು ತಲೆಮಾರುಗಳ ಇತಿಹಾಸ ವೀಣಾ ಧನಮ್ಮಾಳ್ ಕುಟುಂಬಕ್ಕಿತ್ತು. ವೀಣಾ ಧನಮ್ಮಾಳ ಅಜ್ಜಿಯ ಅಜ್ಜಿ ಪಾಪಮ್ಮಾಳ್ ತಂಜಾವೂರು

Dhanammal, ಧನಮ್ಮಾಳ್ ಜೀವಂತ ದಂತಕಥೆ Read More »

Ariyakudi Ramanuja Iyengar – ಹೊಸಹಾದಿಯ ಹರಿಕಾರ ಅರಿಯಾಕುಡಿ ರಾಮಾನುಜ ಅಯ್ಯಂಗಾರ್

ಶೈಲಜಾ ಮತ್ತು ವೇಣುಗೋಪಾಲ್ ಒಮ್ಮೆ ರಾಮನಾಡ್ ಶ್ರೀನಿವಾಸ ಅಯ್ಯಂಗಾರ್ಯರನ್ನು ಭೇಟಿಯಾಗಲು ಮೈಸೂರು ವಾಸುದೇವಾಚಾರ್ಯರು ಹೋಗಿದ್ದರು. ಆಗ ಪೂಚಿ ಶ್ರೀನಿವಾಸ ಅಯ್ಯಂಗಾರ್ಯರು ಶಿಷ್ಯರಿಗೆ ಪಾಠ ಹೇಳುತ್ತಿದ್ದರು. ಪಾಠ ಮುಗಿದ ಮೇಲೆ ಆಚಾರ್ಯರೇ ಇಷ್ಟು ಮಂದಿ ಶಿಷ್ಯರು ಹಾಡಿದ್ದನ್ನು ಕೇಳಿದಿರಿ. ಇವರಲ್ಲಿ ಯಾರ ಹಾಡಿಕೆ ನಿಮ್ಮ ಮನಸ್ಸಿಗೆ ಬಂದಿತು? ಎಂದು ಕೇಳಿದರು. ಅದಕ್ಕೆ ಆಚಾರ್ಯರು ಎಲ್ಲರೂ ಚೆನ್ನಾಗಿಯೇ ಹಾಡಿದರು. ಆದರೂ ಆ ಮೂಲೆಯಲ್ಲಿ ಗೋಡೆಗೆ ಒರಗಿ ಕುಳಿತಿದ್ದ ವಿದ್ಯಾರ್ಥಿಗೆ ಉತ್ತಮ ಭವಿಷ್ಯವಿದೆ ಎನಿಸುತ್ತದೆ. ಆತನ ಹಾಡಿಕೆಯಲ್ಲಿ ಒಂದು ಬಿಗಿ ಹಾಗೂ

Ariyakudi Ramanuja Iyengar – ಹೊಸಹಾದಿಯ ಹರಿಕಾರ ಅರಿಯಾಕುಡಿ ರಾಮಾನುಜ ಅಯ್ಯಂಗಾರ್ Read More »

Begum Akhtar – ನೋವೇ ದನಿಯಾದ – ನೋವಿಗೆ ದನಿಯಾದ ಬೇಗಂ ಅಖ್ತರ್

ನೋವೇ ದನಿಯಾದ – ನೋವಿಗೆ ದನಿಯಾದ ಬೇಗಂ ಅಖ್ತರ್ ಶೈಲಜಾ ಭಾರತೀಯ ಸಂಗೀತ ಕ್ಷೇತ್ರದ ಉಜ್ವಲ ತಾರೆ ಬೇಗಂ ಅಖ್ತರ್. ಬದುಕು ಮತ್ತು ಸಂಗೀತವನ್ನು ಅದಮ್ಯವಾಗಿ ಪ್ರೀತಿಸುತ್ತಿದ್ದ ಅತ್ಯಂತ ಭಾವುಕ ಗಾಯಕಿ. ಸದಾ ಪ್ರೀತಿ ಪ್ರೀತಿಗಾಗಿ ಹಂಬಲಿಸುತ್ತಿದ್ದ ಮತ್ತು ಅದು ದೊರಕದಿದ್ದಾಗ ವ್ಯಥೆಯಿಂದ ತೀವ್ರ ವಿಷಾದದಲ್ಲಿ ಪರಿತಪಿಸುತ್ತಿದ್ದ, ತಮ್ಮೆದೆಯ ನೋವು, ಸಂತೋಷಗಳೆಲ್ಲವನ್ನೂ ಹಾಡಾಗಿಸುತ್ತಿದ್ದ ಅಪರೂಪದ ಗಾಯಕಿ. ಅವರ ಕಂಠ ಅವರ ನೋವಿನ ಧ್ವನಿಯೇ ಆಗಿತ್ತು. ಹೀಗೆ ನೋವೇ ಬದುಕಾಗಿದ್ದ ಬೇಗಂ ಅಖ್ತರ್ ಹುಟ್ಟಿದ್ದು ೧೯೧೪ರ ಅಕ್ಟೋಬರ್ ೭ರಂದು

Begum Akhtar – ನೋವೇ ದನಿಯಾದ – ನೋವಿಗೆ ದನಿಯಾದ ಬೇಗಂ ಅಖ್ತರ್ Read More »

Wedded to Music – The life and music of Yoganarasimham

A man, who didn’t hurt anybody’s feelings and allowed everybody to pursue the call of their heart was none other than H. Y.Yoganarasimham. His humane nature very often made one feel that he was some extra-terrestrial creature, who has come to visit this earth. He was born to HolenaraseepuraNaranappa and PalalliLakshmidevamma couple on 17 May

Wedded to Music – The life and music of Yoganarasimham Read More »

Ananthaswamy Mysore – ಮೈಸೂರು ಅನಂತಸ್ವಾಮಿ

  ಮೈಸೂರು ಅನಂತಸ್ವಾಮಿಯವರು ಕರ್ನಾಟಕ ಕಂಡ ಅತ್ಯಂತ ಪ್ರತಿಭಾನ್ವಿತ ಸಂಗೀತಗಾರರಲ್ಲಿ ಒಬ್ಬರು. ಸುಗಮ ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆ ಅನನ್ಯ. ಈ ಲೇಖನದಲ್ಲಿ ಅನಂತಸ್ವಾಮಿಯವರ ಬದುಕು ಮತ್ತು ಸಂಗೀತವನ್ನು ಅನಂತಸ್ವಾಮಿಯವರ ಜೊತೆಗಿನ ಸಂದರ್ಶನ, ಅವರನ್ನು ಕುರಿತ ಸಂದರ್ಶನ, ಅವರನ್ನು ಕುರಿತು ಖ್ಯಾತ ಕವಿಗಳು ಆಡಿರುವ ಮಾತುಗಳನ್ನು ಒಟ್ಟುಮಾಡಿ ಅವರ ಸಂಗೀತಾತ್ಮಕ ಬದುಕನ್ನು ಕಟ್ಟಲು ಪ್ರಯತ್ನವಿದೆ. ಕವಿ ಸುಮತೀಂದ್ರ ನಾಡಿಗರು ನಡೆಸಿಕೊಟ್ಟಿರುವ ಅನಂತಸ್ವಾಮಿಯವರ ಸಂದರ್ಶನ, ಅನಂತಸ್ವಾಮಿಯವರನ್ನು ಕುರಿತು ಪಂಡಿತ್ ರಾಜೀವ ತಾರಾನಾಥರ ಸಂದರ್ಶನ, ಪುತಿನ, ಲಕ್ಷ್ಮೀನಾರಾಯಣ ಭಟ್ಟರು, ಹೆಚ್

Ananthaswamy Mysore – ಮೈಸೂರು ಅನಂತಸ್ವಾಮಿ Read More »

Balasubramanyam G N – ಹೊಸ ಹಾದಿಯ ಹರಿಕಾರ-ಜಿ.ಎನ್. ಬಾಲಸುಬ್ರಹ್ಮಣ್ಯಂ

(೦೬/೦೬/೧೯೧೦- ೦೧/೦೫/೧೯೬೫)   [ಒಬ್ಬ ವ್ಯಕ್ತಿಯಲ್ಲಿ ಅತ್ಯುತ್ತಮವಾದ ಎಲ್ಲಾ ಗುಣಗಳು ಮೇಳೈಸುವುದಕ್ಕೆ ಹಾಗೂ ಒಬ್ಬ ಸಂಗೀತಗಾರ ಏಕಕಾಲಕ್ಕೆ ವಾಗ್ಗೇಯಕಾರ, ಸಂಗೀತಶಾಸ್ತ್ರಜ್ಞ, ಗುರು, ಲೇಖಕ ಎಲ್ಲವೂ ಆಗಿರುವುದಕ್ಕೆ ಸಾಧ್ಯವೇ? ಹಾಗೊಂದು ವೇಳೆ ಈ ಎಲ್ಲಾ ಗುಣಲಕ್ಷಣಗಳನ್ನೂ ಒಬ್ಬ ವ್ಯಕ್ತಿಯೇನಾದರೂ ಹೊಂದಿದ್ದರೆ ಅದು ಖಂಡಿತವಾಗಿ ಜಿ.ಎನ್. ಬಾಲಸುಬ್ರಹ್ಮಣ್ಯಂ- ಖ್ಯಾತ ವೀಣಾವಾದಕ ಎಸ್.ಬಾಲಚಂದರ್.]   ಬಹುತೇಕ ಎಲ್ಲರೂ ಜಿ.ಎನ್.ಬಾಲಸುಬ್ರಹ್ಮಣ್ಯಂ ಅವರನ್ನು ಒಬ್ಬ ಪರಿಪೂರ್ಣ ಸಂಗೀತಗಾರ ಎಂದು ಗುರುತಿಸುತ್ತಾರೆ. ಅವರ ಬದುಕು ಮತ್ತು ಸಂಗೀತದ ಕಥೆ ಈವರೆಗೆ ನಾವು ಕೇಳಿದ ಕಲಾವಿದರೆಲ್ಲರ ಬದುಕಿನ

Balasubramanyam G N – ಹೊಸ ಹಾದಿಯ ಹರಿಕಾರ-ಜಿ.ಎನ್. ಬಾಲಸುಬ್ರಹ್ಮಣ್ಯಂ Read More »