RAGAMALA

Um Ulsam – ಈಜಿಪ್ಟಿನ ನಾಲ್ಕನೆಯ ಪಿರಮಿಡ್ ಉಮ್ ಉಲ್ಸಮ್

  ಈಜಿಪ್ಟ್‌ನ ದನಿ, ಈಜಿಪ್ಟಿನ ನಾಲ್ಕನೆಯ ಪಿರಮಿಡ್ ಎನಿಸಿಕೊಂಡು ಅರಬ್ ದೇಶಗಳಲ್ಲೆಲ್ಲಾ ನಿರಾತಂಕವಾಗಿ ಓಡಾಡುತ್ತಾ, ಅರಬ್-ಈಜಿಪ್ಟ್ ಸಂಗೀತದ ಅಸಲೀ ಪ್ರತಿನಿಧಿ ಎನಿಸಿಕೊಂಡು, ಅರಬ್ ಸಂಗೀತಕ್ಕೆ ಹೊಸ ವ್ಯಾಖ್ಯಾನ ಬರೆದವರು ಈಜಿಪ್ಟಿನ ಮಹಾನ್ ಗಾಯಕಿ ಉಮ್ ಕುಲ್ಸುಂ. ಉಮ್ ಕುಲ್ಸುಂ ತೀರಿಹೋದ ೩೦ ವರ್ಷಗಳ ಬಳಿಕವೂ ಅರಬ್ ಸಂಗೀತ ಏನೆಂದು ತಿಳಿದುಕೊಳ್ಳ ಬೇಕಾದರೆ ನೀವು ಉಮ್ ಕುಲ್ಸುಂ ಅವರ ಗಾಯನ ಕೇಳಬೇಕು ಎನ್ನುತ್ತಾರೆ ಅರಬ್ ಲೋಕದ ಹೊಸಪೀಳಿಗೆಯ ಕಲಾವಿದರು. ಉಮ್ ನನ್ನ ಬಹು ಮೆಚ್ಚಿನ ಗಾಯಕಿ. ಎನ್ನುತ್ತಾರೆ ಸಂಗೀತ […]

Um Ulsam – ಈಜಿಪ್ಟಿನ ನಾಲ್ಕನೆಯ ಪಿರಮಿಡ್ ಉಮ್ ಉಲ್ಸಮ್ Read More »

ಬದುಕೇ ಹಾಡಾದ ಮೀರಿಯಂ ಮಕೇಬಾ

ಹಾಡು-ನೃತ್ಯದೊಡನೆ ಆಫ್ರಿಕಾದವರಿಗೆ ಇರುವ ಸಂಬಂಧವೇ ಬೇರೆ ರೀತಿಯದ್ದು. ಅವರಲ್ಲಿ ಅದು ಒಡಲು ಉಸಿರಿನ ಸಂಬಂಧ. ಜೀವದೊಳಗಿರುವ ಹಸಿವು, ಬಾಯರಿಕೆ, ಸುಸ್ತು, ಸಂಕಟ, ಪ್ರೀತಿ, ಪ್ರಣಯದಂತೆ ಹಾಡು-ನೃತ್ಯಗಳು ಕೂಡ ಅವರ ಮೂಲಭೂತ ಪ್ರವೃತ್ತಿ. ಹೀಗೆ ಹಾಡೇ ಒಡಲಾಗಿದ್ದ ದಕ್ಷಿಣ ಆಫ್ರಿಕಾದ ಇತಿಹಾಸದಲ್ಲಿ ಮಕೇಬಾ ಬಹು ಮುಖ್ಯ ವ್ಯಕ್ತಿ. ಅವಳು ಮಾಮ್ಮಾ ಆಫ್ರಿಕಾ. ಅವಳ ಬದುಕು ಸಂಗೀತವಲ್ಲದೆ ಮತ್ತೇನಲ್ಲ. ಅವಳು ತನ್ನ ಹಾಡಿನ ಮೂಲಕವೇ ಇಡೀ ಆಫ್ರಿಕಾದ ದ ಬದುಕು, ಬವಣೆ, ದಬ್ಬಾಳಿಕೆ, ಹಿಂಸೆ, ರಾಜಕಾರಣ ಎಲ್ಲವನ್ನೂ ಬಿಚ್ಚಿಡುತ್ತಾ ಹೋಗುತ್ತಾಳೆ.

ಬದುಕೇ ಹಾಡಾದ ಮೀರಿಯಂ ಮಕೇಬಾ Read More »