The State

ಭಯೋತ್ಪಾದನೆ ಹಾಗೂ ವರ್ತನ ಅರ್ಥಶಾಸ್ತ್ರ

ಅರ್ಥಶಾಸ್ತ್ರವು ಮನುಷ್ಯನ ವರ್ತನೆಗೂ ಮಹತ್ವಕೊಡಬೇಕು. ಆಗಷ್ಟೇ ಅದು ಹೆಚ್ಚು ನಿಖರವಾಗುವುದಕ್ಕೆ ಸಾಧ್ಯ ಅನ್ನುವುದನ್ನು ಒಪ್ಪಿಕೊಂಡರೆ, ಹಲವಾರು ಹೊಸ ಹೊಸ ವಿಷಯಗಳು ಅರ್ಥಶಾಸ್ತ್ರದ ಅಧ್ಯಯನದ ಭಾಗವಾಗುವುದಕ್ಕೆ ಸಾಧ್ಯವಾಗುತ್ತದೆ. ಸಂತೋಷ, ದುಃಖ, ನೋವು, ಭಯೋತ್ಪಾದನೆ ಹೀಗೆ ಹಲವಾರು ವಿಷಯಗಳು ಅರ್ಥಶಾಸ್ತ್ರದ ವ್ಯಾಪ್ತಿಗೆ ಬರುವುದಕ್ಕೆ ಸಾಧ್ಯವಾಗುತ್ತದೆ. ಸ್ವಿಟ್ಜರ್‌ಲ್ಯಾಂಡಿನ, ಜ್ಯೂರಿಚ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿರುವ ಬ್ರುನೊ ಎಸ್. ಫ್ರೆ ಹೀಗೆ ಭಯೋತ್ಪಾದನೆಯನ್ನು ಕುರಿತು ಒಂದು ಕುತೂಹಲಕಾರಿ ಅಧ್ಯಯನವನ್ನು ಮಾಡಿದ್ದಾರೆ. ಭಯೋತ್ಪಾದನೆಗೆ ಸಂಬಂಧಿಸಿದಂತೆ ನಮ್ಮ ಈವರೆಗಿನ ಹಲವಾರು ಆಲೋಚನೆಗಳನ್ನು ಮರುಚಿಂತಿಸುವಂತೆ ಈ ಅಧ್ಯಯನ […]

ಭಯೋತ್ಪಾದನೆ ಹಾಗೂ ವರ್ತನ ಅರ್ಥಶಾಸ್ತ್ರ Read More »

ವರ್ತನ-ಅರ್ಥಶಾಸ್ತ್ರದ ಪಿತಾಮಹ ಥೇಲರ್

ಈ ಬಾರಿ ಅರ್ಥಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ರಿಚರ್ಡ್ ಎಚ್ ಥೇಲರ್ ಅವರಿಗೆ ಸಂದಿದೆ. ಭಾರತೀಯರಿಗೆ ಥೇಲರ್ ಮತ್ತೂ ಒಂದು ಕಾರಣಕ್ಕೆ ಪರಿಚಿತರು. ನಿರ್ನೋಟಿಕರಣ ಜಾರಿಗೊಂಡಾಗ ಅವರು ಅದರಿಂದ ಭ್ರಷ್ಟಾಚಾರ ಕಮ್ಮಿಯಾಗುತ್ತದೆ ಅಂತ ಹೇಳಿದ್ದರು. ಈಗ ಆ ಕಾರಣಕ್ಕೆ ಕೆಲವರು ಅವರನ್ನು ಹೊಗಳಲು ಪ್ರಾರಂಭಿಸಿದ್ದಾರೆ. ೨೦೦೦ ರೂಪಾಯಿ ನೋಟು ಜಾರಿಗೆ ತರುತ್ತಿದ್ದಾರೆ ಅಂತ ಗೊತ್ತಾದಾಗ ಥೇಲರ್ ಅವರೇ ಬಯ್ದಿದ್ದರು. ಅವರ ಉದ್ದೇಶ ಹೆಚ್ಚಿನ ಮೌಲ್ಯದ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳಬೇಕು ಎಂಬುದು. ಹೋಗಲಿ ಬಿಡಿ ಮುಳುಗುತ್ತಿರುವವರಿಗೆ ಆಸರೆಗೆ ಒಂದು ಹುಳ್ಳುಕಡ್ಡಿ

ವರ್ತನ-ಅರ್ಥಶಾಸ್ತ್ರದ ಪಿತಾಮಹ ಥೇಲರ್ Read More »