Translation

ಭಾರತದ ಆರ್ಥಿಕ ಬೇನೆಯ ಹಿಂದಿನ ಕಾರಣ

ಮನಮೋಹನ್ ಸಿಂಗ್ ಅನುವಾದ : ಟಿ ಎಸ್ ವೇಣುಗೋಪಾಲ್ ಭಾರತದ ಆರ್ಥಿಕತೆಯ ಸ್ಥಿತಿ ತುಂಬಾ ಆತಂಕಕಾರಿಯಾಗಿದೆ. ನಾನು ಇದನ್ನು ಒಬ್ಬ ವಿರೋಧ ರಾಜಕೀಯ ಪಕ್ಷದ ಸದಸ್ಯನಾಗಿ ಹೇಳುತ್ತಿಲ್ಲ. ಈ ದೇಶದ ಪ್ರಜೆಯಾಗಿ, ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿ ಹೇಳುತ್ತಿದ್ದೇನೆ. ಈ ವೇಳೆಗೆ ಎಲ್ಲರಿಗೂ ವಾಸ್ತವ ಸ್ಥಿತಿ ಸ್ಪಷ್ಟವಾಗಿದೆ. ನಾಮಿನಲ್ ಜಿಡಿಪಿ ಬೆಳವಣಿಗೆಯ ದರ ೧೫ ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ನಿರುದ್ಯೋಗ ದರ ೪೫ ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ಗ್ರಾಹಕರ ಬಳಕೆಯ ಪ್ರಮಾಣ ನಾಲ್ಕು ದಶಕಗಳಲ್ಲಿ ಎಂದೂ ಇಷ್ಟು […]

ಭಾರತದ ಆರ್ಥಿಕ ಬೇನೆಯ ಹಿಂದಿನ ಕಾರಣ Read More »

ಏಕತೆಯ ಸಂಸ್ಕೃತಿಯೊಂದೇ ನಮ್ಮನ್ನು ಉಳಿಸಬಲ್ಲದು

[ಇದು ಪ್ರಭಾತ್ ಪಟ್ನಾಯಕ್ ಮಾಡಿದ ಒಂದು ಭಾಷಣದ ಅನುವಾದ. ಎಲ್ಲಿ ಪ್ರಕಟವಾಗಿದೆ ಅನ್ನುವುದು ನೆನಪಿಲ್ಲ.] ಸ್ನೇಹಿತರೇ ಹಾಗೂ ಕಾಮ್ರೇಡುಗಳೇ, ಜಗತ್ತು ಹಾಗೂ ಭಾರತ ಇಂದು ಕೋವಿಡ್-೧೯ ದಾಳಿಗೆ ಸಿಲುಕಿದೆ. ಕೋವಿಡ್-೧೯ ಒಂದು ವಿಚಿತ್ರವಾದ ವೈರಾಣು. ಅದು ತೀವ್ರವಾಗಿ ಹರಡುತ್ತದೆ. ಅದು ಬೇಧಭಾವ ಮಾಡುವುದಿಲ್ಲ. ನೀವು ಯಾರೇ ಆಗಿರಿ, ಎಷ್ಟೇ ಶ್ರೀಮಂತರಾಗಿರಿ, ಯಾವ ಧರ್ಮದವರಾಗಿರಿ ಇದು ಬರಬಹುದು. ಆ ಅರ್ಥದಲ್ಲಿ ಇದು ತಾರತಮ್ಯವಿಲ್ಲದ ವೈರಾಣು. ಇಂತಹ ಒಂದು ವೈರಾಣುವನ್ನು ನಾವು ಕಳೆದ ಒಂದು ಶತಮಾನದಲ್ಲಿ ಕಂಡಿರಲಿಲ್ಲ. ೧೯೧೮ರಲ್ಲಿ ನಮ್ಮನ್ನು

ಏಕತೆಯ ಸಂಸ್ಕೃತಿಯೊಂದೇ ನಮ್ಮನ್ನು ಉಳಿಸಬಲ್ಲದು Read More »

ಆ ಹಾಡುಗಳು- ಸತ್ಯಜಿತ್ ರೇ

[ಇಂದು ಸತ್ಯಜಿತ್ ರೇ ಬದುಕಿದ್ದರೆ ಅವರಿಗೆ ನೂರು ವರ್ಷ. ಅತ್ಯಂತ ಪ್ರತಿಭಾವಂತ ಕಲಾವಿದರು. ಭಾರತೀಯ ಸಿನಿಮಾಕ್ಕೆ ಜಗತ್ಪ್ರಸಿದ್ಧಿಯನ್ನು ತಂದುಕೊಟ್ಟವರು. ಹಲವು ಕ್ಷೇತ್ರಗಳಲ್ಲಿ ಪ್ರತಿಭೆಯಿದ್ದವರು. ಅವರ ಜನ್ಮ ಶತಮಾನೋತ್ಸವದ ಈ ಸಂದರ್ಭದಲ್ಲಿ ಹಲವರು ಅವರ ಕೊಡುಗೆಯನ್ನು ಹಲವು ರೀತಿಗಳಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಸಂಗೀತಕ್ಕೆ ಅವರು ನೀಡಿದ ಕೊಡುಗೆ ಕಡಿಮೆಯೇನಲ್ಲ. ಅವರು ತುಂಬಾ ಇಷ್ಟಪಡುತ್ತಿದ್ದ ಕ್ಷೇತ್ರಗಳಲ್ಲಿ ಸಂಗೀತವೂ ಒಂದು. ಅವರಿಗೆ ಅದರ ಬಗ್ಗೆ ಒಂದು ಸ್ಪಷ್ಟ ಕಲ್ಪನೆಯಿತ್ತು. ಮೊದಲಿಗೆ ರವಿಶಂಕರ್, ಅಲಿ ಅಕ್ಬರ್ ಖಾನ್, ಇಂತಹ ಪ್ರಖ್ಯಾತರೊಂದಿಗೆ ಕೆಲಸ ಮಾಡಿದ

ಆ ಹಾಡುಗಳು- ಸತ್ಯಜಿತ್ ರೇ Read More »

ಮನಮೋಹನ್ ಸಿಂಗ್ ನೆನಪಿನಲ್ಲಿ

[ಮನಮೋಹನ್ ಸಿಂಗ್ ಬಗ್ಗೆ ಏನೂ ಬರೆಯಲಿಕ್ಕೆ ಆಗಿರಲಿಲ್ಲ. ಸಧ್ಯಕ್ಕೆ ಅಮರ್ತ್ಯಸೇನ್ ಅವರು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಬರೆದ ಲೇಖನದ ಶೈಲಜ ಮಾಡಿದ ಅನುವಾದವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.] ಮನ್‌ಮೋಹನ್‌ಸಿಂಗ್ ಅವರು ಒಬ್ಬ ಶ್ರೇಷ್ಠ ವ್ಯಕ್ತಿ ಎಂದು ಹೇಳಿದರೆ, ಎಲ್ಲರಿಗೂ ತಿಳಿದಿರುವುದನ್ನೇ ಮತ್ತೆ ಹೇಳಿದಂತೆ. ಅವರೊಬ್ಬ ಪ್ರತಿಭಾವಂತ ರಾಜಕೀಯ ಧುರೀಣ, ದಾರ್ಶನಿಕ, ಅಸಾಧಾರಣ ಅರ್ಥಶಾಸ್ತ್ರಜ್ಞ, ಅತ್ಯುತ್ತಮ ಅಧ್ಯಾಪಕ, ಅದ್ಭುತ ಆಡಳಿತಗಾರರು, ಒಳ್ಳೆಯ ಪತಿ, ತಂದೆ ಹಾಗೂ ತಾತ. ಎಲ್ಲದಕ್ಕಿಂತ ಹೆಚ್ಚಾಗಿ ಅಪಾರ ಸಹಾನುಭೂತಿಯುಳ್ಳ ಮನುಷ್ಯ. ನಮ್ಮಿಬ್ಬರದು ೭೦ ವರುಷಗಳಿಗೂ ಮೀರಿದ

ಮನಮೋಹನ್ ಸಿಂಗ್ ನೆನಪಿನಲ್ಲಿ Read More »

ವದಂತಿಗಳ ಹರಡುವಿಕೆಯನ್ನು ತಡೆಗಟ್ಟುವಿಕೆ

  ದ ಹಿಂದು, ಏಪ್ರಿಲ್ ೧೫, ೨೦೨೦ ರಾಜೀವ್ ಭಾರ್ಗವ   ೧೯೮೪ರಲ್ಲಿ ಸಿಖ್‌ವಿರೋಧಿ ಅಲೆ ಇಡೀ ದೆಹಲಿಯನ್ನು ಆವರಿಸಿಕೊಂಡಿತ್ತು. ದೆಹಲಿಯಲ್ಲಿ ಸರಬರಾಜಾಗುವ ಕುಡಿಯುವ ನೀರಿಗೆ ಸಿಖ್ಖರು ವಿಷ ಹಾಕಿಬಿಟ್ಟಿದ್ದಾರೆ ಎಂಬ ದಟ್ಟವಾದ ವದಂತಿ ನಗರದಲ್ಲೆಲ್ಲಾ ಹರಡಿತ್ತು. ಇಂತಹ ವದಂತಿಗಳು ಹೊಸತೇನಲ್ಲ. ಯುರೋಪಿನಲ್ಲಿ ಯುದ್ಧಗಳು, ಸಾಂಕ್ರಾಮಿಕ ರೋಗಗಳು ಮತ್ತು ಅಂತರ್ಯುದ್ಧಗಳು ಆದಾಗೆಲ್ಲಾ ಭಾವಿಗೆ ವಿಷಹಾಕಿದ್ದಾರೆ ಎಂದು ಹಲವು ಶತಮಾನಗಳ ಕಾಲ ಯಹೂದಿಗಳನ್ನು ಆಪಾದಿಸುತ್ತಿದ್ದರು. ೧೮ನೇ ಶತಮಾನದ ಕೊನೆಯ ಭಾಗದಲ್ಲಿ ಪ್ಯಾರಿಸ್ಸಿನಲ್ಲಿ ಶ್ರೀಮಂತರು-ಬಡವರ ನಡುವೆ ವರ್ಗವೈಷಮ್ಯ ತುಂಬಾ ತೀವ್ರವಾಗಿತ್ತು.

ವದಂತಿಗಳ ಹರಡುವಿಕೆಯನ್ನು ತಡೆಗಟ್ಟುವಿಕೆ Read More »

ಭಾರತದ ಮುಂದಿರುವ ಅತಿದೊಡ್ಡ ಸವಾಲು ರಘುರಾಂ ರಾಜನ್

ಏಪ್ರಿಲ್ ೨೦೨೦ ಅನುವಾದ: ಟಿ ಎಸ್ ವೇಣುಗೋಪಾಲ್ ಆರ್ಥಿಕತೆಯ ದೃಷ್ಟಿಯಿಂದ ಮಾತನಾಡುವುದಾದರೆ, ಸ್ವಾತಂತ್ರ್ಯದ ನಂತರ ಇಂದು ಭಾರತ, ಅತಿದೊಡ್ಡ ತುರ್ತುಪರಿಸ್ಥಿಯನ್ನು ಎದುರಿಸುತ್ತಿದೆ. ೨೦೦೮-೦೯ರ ಜಗತ್ತನ್ನು ಕಾಡಿದ ಹಣಕಾಸು ಬಿಕ್ಕಟ್ಟಿನಿಂದ ಬೇಡಿಕೆಗೆ ಬಲವಾದ ಪೆಟ್ಟುಬಿದ್ದಿತ್ತು. ಆದರೂ ಕೆಲಸಗಾರರು ಕೆಲಸಕ್ಕೆ ಹೋಗುತ್ತಿದ್ದರು. ಬಿಕ್ಕಟ್ಟು ಕಳೆದ ಕೆಲವೇ ವರ್ಷಗಳಲ್ಲಿ ನಮ್ಮ ಉದ್ದಿಮೆಗಳು ಚೇತರಿಸಿಕೊಂಡವು. ನಮ್ಮ ಹಣಕಾಸು ವ್ಯವಸ್ಥೆ ಸುಮಾರಾಗಿ ಸುಸ್ಥಿತಿಯಲ್ಲೇ ಇತ್ತು. ಸರ್ಕಾರದ ಹಣಕಾಸು ಸ್ಥಿತಿಯೂ ಆರೋಗ್ಯವಾಗಿಯೇ ಇತ್ತು. ಆದರೆ ಇಂದು ಪರಿಸ್ಥಿತಿ ಅದಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. ಕೊರೋನ ಮಹಾಮಾರಿ ನಮ್ಮನ್ನು

ಭಾರತದ ಮುಂದಿರುವ ಅತಿದೊಡ್ಡ ಸವಾಲು ರಘುರಾಂ ರಾಜನ್ Read More »

ನಾವು ಗೆದ್ದೇ ಗೆಲ್ಲುತ್ತೇವೆ ಅಂತ ಅವಳಿಗೆ ಭರವಸೆ ಕೊಡಬೇಕಾಗಿದೆ

ವಿನೇಶ್ ಪೋಗಟ್ [ಬ್ರಿಜುಭೂಷಣ್ ದೌರ್ಜನ್ಯದ ವಿರುದ್ಧ ಹಲವು ಕುಸ್ತಿಪಟುಗಳು ಪ್ರತಿಭಟನೆ ಮಾಡಿದ್ದರು. ಅವರ ಹೋರಾಟ ಈ ಸಮಯದಲ್ಲಿ ತುಂಬಾ ಕಾಡುತ್ತೆ. ಆ ಸಮಯದಲ್ಲಿ ವಿನೇಶ್ ಪೋಗಟ್ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಒಂದು ಲೇಖನ ಬರೆದಿದ್ದರು. ಅದನ್ನು ಸುಮ್ಮನೆ ಅನುವಾದಿಸಿ ಹಂಚಿಕೊಳ್ಳುತ್ತಿದ್ದೇನೆ.] ನ್ಯಾಯಕ್ಕಾಗಿ ನಮ್ಮ ಹೋರಾಟ ಪ್ರಾರಂಭವಾಗಿ ಒಂದು ತಿಂಗಳಷ್ಟೇ ಆಗಿದೆ. ಆದರೆ ಒಂದು ವರ್ಷದಿಂದ ಜಂತರ್ ಮಂತರನಲ್ಲಿದ್ದೇವೆ ಅನಿಸುತ್ತಿದೆ. ಬಿಸಿಲಿನಲ್ಲಿ ಫುಟ್‌ಪಾತಿನಲ್ಲಿ ಮಲಗುತ್ತಿದ್ದೇವೆ, ಸೊಳ್ಳೆಗಳು ಕಚ್ಚುತ್ತಿವೆ, ಸಂಜೆಯಾದ ಮೇಲೆ ಬೀದಿನಾಯಿಗಳು ಜೊತೆಗೆ ಬರುತ್ತವೆ ಅಥವಾ ಒಳ್ಳೆಯ ಟಾಯಲೆಟ್

ನಾವು ಗೆದ್ದೇ ಗೆಲ್ಲುತ್ತೇವೆ ಅಂತ ಅವಳಿಗೆ ಭರವಸೆ ಕೊಡಬೇಕಾಗಿದೆ Read More »

ಕ್ಷೇತ್ರ ಮರುವಿಂಗಡಣೆಯ ಚರ್ಚೆ: ಜನ ನಿಭಿಡ ಉತ್ತರ ವರ್ಸಸ್ ಜನ ಕಡಿಮೆ ಇರುವ ದಕ್ಷಿಣಕ್ಕೆ ಪರ್ಯಾಯಗಳಿವೆ

ಮೂಲ: ಅಂಜಿಶ್ನು ದಾಸ್ ಇಂಡಿಯನ್ ಎಕ್ಸ್‌ಪ್ರೆಸ್, ಮಾರ್ಚಿ ೧೮, ೨೦೨೫   ಈಗ ಕ್ಷೇತ್ರ ಮರುವಿಂಗಡನೆ ಕುರಿತ ಚರ್ಚೆ ತೀವ್ರವಾಗುತ್ತಿದೆ. ೨೦೨೬ರೊಳಗೆ ಅದು ನಿರ್ಧಾರವಾಗಬೇಕು. ಲೋಕಸಭೆಯಲ್ಲಿ ಸ್ಥಾನಗಳನ್ನು ನಿಗದಿಪಡಿಸಲು ಕೇವಲ ಜನಸಂಖ್ಯೆಯನ್ನು ಆಧಾರವಾಗಿ ಇಟ್ಟುಕೊಳ್ಳಬಾರದು ಎಂದು ಬಹುತೇಕ ಎಲ್ಲಾ ವಿರೋಧ ಪಕ್ಷಗಳು ಒಪ್ಪಿಕೊಂಡಿವೆ. ಯಾಕೆಂದರೆ ಇದರಿಂದ ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಿರುವ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ಇದಕ್ಕೆ ಹಲವು ಪರ್ಯಾಯ ಕ್ರಮಗಳನ್ನು ಹಲವು ವರ್ಷಗಳಿಂದ ಸೂಚಿಸುತ್ತಾ ಬರಲಾಗಿದೆ. ಫಲವತ್ತತೆಯ ದರವನ್ನು ಕ್ಷೇತ್ರಗಳ ಸಂಖ್ಯೆಯನ್ನು ನಿರ್ಧರಿಸುವುದಕ್ಕೆ ಪರಿಗಣಿಸಬೇಕು ಅನ್ನುವುದರಿಂದ ಮೊದಲುಗೊಂಡು ರಾಜ್ಯಸಭಾದ

ಕ್ಷೇತ್ರ ಮರುವಿಂಗಡಣೆಯ ಚರ್ಚೆ: ಜನ ನಿಭಿಡ ಉತ್ತರ ವರ್ಸಸ್ ಜನ ಕಡಿಮೆ ಇರುವ ದಕ್ಷಿಣಕ್ಕೆ ಪರ್ಯಾಯಗಳಿವೆ Read More »