Articles

ಭಾರತದ ಆರ್ಥಿಕ ಬೇನೆಯ ಹಿಂದಿನ ಕಾರಣ

ಮನಮೋಹನ್ ಸಿಂಗ್ ಅನುವಾದ : ಟಿ ಎಸ್ ವೇಣುಗೋಪಾಲ್ ಭಾರತದ ಆರ್ಥಿಕತೆಯ ಸ್ಥಿತಿ ತುಂಬಾ ಆತಂಕಕಾರಿಯಾಗಿದೆ. ನಾನು ಇದನ್ನು ಒಬ್ಬ ವಿರೋಧ ರಾಜಕೀಯ ಪಕ್ಷದ ಸದಸ್ಯನಾಗಿ ಹೇಳುತ್ತಿಲ್ಲ. ಈ ದೇಶದ ಪ್ರಜೆಯಾಗಿ, ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿ ಹೇಳುತ್ತಿದ್ದೇನೆ. ಈ ವೇಳೆಗೆ ಎಲ್ಲರಿಗೂ ವಾಸ್ತವ ಸ್ಥಿತಿ ಸ್ಪಷ್ಟವಾಗಿದೆ. ನಾಮಿನಲ್ ಜಿಡಿಪಿ ಬೆಳವಣಿಗೆಯ ದರ ೧೫ ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ನಿರುದ್ಯೋಗ ದರ ೪೫ ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ಗ್ರಾಹಕರ ಬಳಕೆಯ ಪ್ರಮಾಣ ನಾಲ್ಕು ದಶಕಗಳಲ್ಲಿ ಎಂದೂ ಇಷ್ಟು […]

ಭಾರತದ ಆರ್ಥಿಕ ಬೇನೆಯ ಹಿಂದಿನ ಕಾರಣ Read More »

ಏಕತೆಯ ಸಂಸ್ಕೃತಿಯೊಂದೇ ನಮ್ಮನ್ನು ಉಳಿಸಬಲ್ಲದು

[ಇದು ಪ್ರಭಾತ್ ಪಟ್ನಾಯಕ್ ಮಾಡಿದ ಒಂದು ಭಾಷಣದ ಅನುವಾದ. ಎಲ್ಲಿ ಪ್ರಕಟವಾಗಿದೆ ಅನ್ನುವುದು ನೆನಪಿಲ್ಲ.] ಸ್ನೇಹಿತರೇ ಹಾಗೂ ಕಾಮ್ರೇಡುಗಳೇ, ಜಗತ್ತು ಹಾಗೂ ಭಾರತ ಇಂದು ಕೋವಿಡ್-೧೯ ದಾಳಿಗೆ ಸಿಲುಕಿದೆ. ಕೋವಿಡ್-೧೯ ಒಂದು ವಿಚಿತ್ರವಾದ ವೈರಾಣು. ಅದು ತೀವ್ರವಾಗಿ ಹರಡುತ್ತದೆ. ಅದು ಬೇಧಭಾವ ಮಾಡುವುದಿಲ್ಲ. ನೀವು ಯಾರೇ ಆಗಿರಿ, ಎಷ್ಟೇ ಶ್ರೀಮಂತರಾಗಿರಿ, ಯಾವ ಧರ್ಮದವರಾಗಿರಿ ಇದು ಬರಬಹುದು. ಆ ಅರ್ಥದಲ್ಲಿ ಇದು ತಾರತಮ್ಯವಿಲ್ಲದ ವೈರಾಣು. ಇಂತಹ ಒಂದು ವೈರಾಣುವನ್ನು ನಾವು ಕಳೆದ ಒಂದು ಶತಮಾನದಲ್ಲಿ ಕಂಡಿರಲಿಲ್ಲ. ೧೯೧೮ರಲ್ಲಿ ನಮ್ಮನ್ನು

ಏಕತೆಯ ಸಂಸ್ಕೃತಿಯೊಂದೇ ನಮ್ಮನ್ನು ಉಳಿಸಬಲ್ಲದು Read More »