ಬಜೆಟ್ಟನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ-2024-1

ಚುನಾವಣೆಯ ವರ್ಷದಲ್ಲಿ ಪೂರ್ಣ ಪ್ರಮಾಣದ ಬಜೆಟ್ಟನ್ನು ಮಂಡಿಸುವುದಿಲ್ಲ. ಮುಂದಿನ ಸರ್ಕಾರ ಅಧಿಕಾರವಹಿಸಿಕೊಳ್ಳುವವರೆಗೆ ಸರ್ಕಾರಕ್ಕೆ ಅವಶ್ಯಕ ಖರ್ಚನ್ನು ಭರಿಸಲು ಅನುಕೂಲವಾಗುವ ಉದ್ದೇಶದಿಂದ ಮಂಡಿಸುವ ಮಧ್ಯಂತರ ಬಜೆಟ್ ಇದು. ಇದರಲ್ಲಿ ಯಾವುದೇ ಪ್ರಮುಖ ನೀತಿಯನ್ನು ಘೋಷಿಸುವುದಕ್ಕೆ ಚುನಾವಣಾ ನೀತಿಯ ಪ್ರಕಾರ ಅವಕಾಶವಿರುವುದಿಲ್ಲ. ಅದು ಚುನಾವಣೆಯ ಫಲಿತಾಂಶವನ್ನು ಪ್ರಭಾವಿಸುತ್ತದೆ ಅನ್ನುವ ಕಾರಣಕ್ಕಾಗಿ ಹಾಗೆ ಮಾಡಲಾಗುತ್ತದೆ. ಹೆಚ್ಚೆಂದರೆ ಸರ್ಕಾರ ಈ ಸಮಯದಲ್ಲಿ ತನ್ನ ಕಳೆದ ವರ್ಷದ ಅಥವಾ ಕಳೆದ ಹತ್ತು ವರ್ಷದ ಸಾಧನೆಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನು ಆಡಬಹುದು. ಹಾಗೆಯೇ ಸಾಮಾನ್ಯವಾಗಿ […]

ಬಜೆಟ್ಟನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ-2024-1 Read More »

ಎಂಎಸ್‌ಪಿ ಜಾರಿಯಾದರೆ ಸರ್ಕಾರ ದೀವಾಳಿಯಾಗಿಬಿಡುತ್ತದಾ?

T S Venugopal ಎಂಎಸ್‌ಪಿ ಅಂದರೆ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ೧೯೬೦ರಲ್ಲಿ ಪ್ರಾರಂಭವಾಯಿತು. ರೈತರ ಸ್ಥಿತಿ ಸುಧಾರಿಸುವ ಉದ್ದೇಶದಿಂದ ಯುಪಿಎ ಸರ್ಕಾರ ಎಂ ಎಸ್ ಸ್ವಾಮಿನಾಥನ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಕೃಷಿ ಆಯೋಗವನ್ನು ರಚಿಸಿತ್ತು. ಅದು ಐದು ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಅದರಲ್ಲಿ ಎಂಎಸ್‌ಪಿಯನ್ನು ನಿಗದಿಪಡಿಸುವುದಕ್ಕೆ ಸಮಗ್ರ ಉತ್ಪಾದನಾ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳಬೇಕೆಂಬ ಉಲ್ಲೇಖ ಬರುತ್ತದೆ. ಎಂಎಸ್‌ಪಿ ಲೆಕ್ಕಚಾರ ಮಾಡುವಾಗ ಸಮಗ್ರ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂಬುದು ಮೊದಲ ಬಾರಿಗೆ ಪ್ರಸ್ತಾಪನೆಗೆ ಬರುವುದು ಅಭಿಜಿತ್ ಸೇನ್

ಎಂಎಸ್‌ಪಿ ಜಾರಿಯಾದರೆ ಸರ್ಕಾರ ದೀವಾಳಿಯಾಗಿಬಿಡುತ್ತದಾ? Read More »

Rashid Khan -ರಶೀದ್ ಖಾನ್

ನೀವಿಷ್ಟು ಬೇಗ ಹೋಗಬಾರದಿತ್ತು ಉಸ್ತಾದರೇ. ಒಮ್ಮೆ ಸಂದರ್ಶನವೊಂದರಲ್ಲಿ ಹಿಂದೂಸ್ತಾನಿ ಸಂಗೀತದ ಭವಿಷ್ಯದ ಬಗ್ಗೆ ಭೀಮಸೇನ ಜೋಷಿಯನ್ನು ಕೇಳಿದಾಗ ಹಿಂದುಸ್ತಾನಿ ಸಂಗೀತದ ಭವಿಷ್ಯ ರಶೀದ್ ಖಾನ್ ಅಂದಿದ್ದರು. ಅಷ್ಟೇ ಅಲ್ಲ ತನ್ನೊಂದಿಗೆ ಜುಗಲ್‌ಬಂದಿಯನ್ನು ಹಾಡಲು ಆಹ್ವಾನಿಸಿದ್ದರು. ರಷೀದ್ ಖಾನ್ ತುಂಬಾ ಸಣ್ಣ ವಯಸ್ಸಿನಲ್ಲೇ ಅಷ್ಟೊಂದು ಭರವಸೆ ಮೂಡಿಸಿದ್ದರು. ಅವರು ಕಲ್ಕತ್ತೆಯಲ್ಲಿ ತಮ್ಮ ಮೊದಲ ಕಚೇರಿ ಮಾಡಿದಾಗ ಅವರಿಗೆ ಕೇವಲ ೧೧ ವರ್ಷಗಳು. ಅಂದು ಅವರು ಹಾಡಿದ್ದು ಪಟದೀಪ್ ರಾಗದ ಬಂದಿಶ್. ಆ ಸಂಗೀತೋತ್ಸವದಲ್ಲಿ ಹಿಂದುಸ್ತಾನಿ ಸಂಗೀತದ ದಿಗ್ಗಜರೆಲ್ಲರೂ ಇದ್ದರು.

Rashid Khan -ರಶೀದ್ ಖಾನ್ Read More »

Sheik Chinna Moulana-ಷೇಕ್ ಚಿನ್ನ ಮೌಲಾನಾ ಸಾಹೇಬ್

ಸಂಗೀತ ನನ್ನ ಧರ್ಮ  ನೂರರ ನೆನಪು. ಸಂಗ್ರಹ: ಟಿ ಎಸ್ ವೇಣುಗೋಪಾಲ್ “ಸಂಗೀತ ನನ್ನ ಧರ್ಮ, ಪರಿಪೂರ್ಣತೆ ನನ್ನ ಗುರಿ” ಅಂತ ಬದುಕಿನುದ್ದಕ್ಕೂ ಭಾವಿಸಿದ್ದ ಷೇಕ್ ಚಿನ್ನ ಮೌಲಾನ ಸಾಹೇಬರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಮ್ಯೂಸಿಕ್ ಅಕಾಡೆಮಿಯಲ್ಲಿ ಅವರ ಮೊಮ್ಮಕ್ಕಳಾದ ಖಾಸಿಂ ಹಾಗೂ ಬಾಬು ಅವರು ನೀಡಿದ ಪ್ರಾತ್ಯಕ್ಷಿಯ ಸಂಗ್ರಹ ರೂಪ ಈ ಲೇಖನ. ಮೌಲಾನಾ ಅವರ ಹುಟ್ಟೂರು ೪೦-೫೦ ಕುಟುಂಬಗಳು ವಾಸಿಸುತ್ತಿದ್ದ ಆಂಧ್ರಪ್ರದೇಶದ ಒಂದು ಪುಟ್ಟ ಗ್ರಾಮ ಕರವಡಿ. ಆದರೆ ನಾಗಸ್ವರದ ದೃಷ್ಟಿಯಿಂದ ತುಂಬಾ ಮಹತ್ವದ

Sheik Chinna Moulana-ಷೇಕ್ ಚಿನ್ನ ಮೌಲಾನಾ ಸಾಹೇಬ್ Read More »

Ramanathan M D-ಎಂ.ಡಿ. ರಾಮನಾಥನ್ ಎಂದರೆ ಎಂಡಿ ಫಾರ್ ಮ್ಯೂಸಿಕ್

ಶೈಲಜಾ ಮಂಜಪರ ದೇವೇಶ ಭಾಗವತರ್ ರಾಮನಾಥನ್ ಪಾಲಕ್ಕಾಡ್ ವಿಕ್ಟೋರಿಯಾ ಕಾಲೇಜಿನಲ್ಲಿ ಓದಿದ್ದು ಭೌತಶಾಸ್ತ್ರದ ಬಿಎಸ್‌ಸಿ ಆದರೆ ಒಲಿದಿದ್ದು ಎಲೆಕ್ಟ್ರೋ ಮ್ಯಾಗನೆಟಿಕ್ ತರಂಗಗಳಿಗೆ ಬದಲಾಗಿ ನಾದ ತರಂಗಗಳಿಗೆ, ಸ್ವರಗಳ ರೆಸೊನೆನ್ಸ್‌ಗೆ. ಎಲ್ಲರಿಗೂ ಎಂಡಿಆರ್ ಎಂದೇ ಪರಿಚಿತರಾಗಿದ್ದ ರಾಮನಾಥನ್ ಕರ್ನಾಟಕ ಸಂಗೀತದ ಒಬ್ಬ ಅನನ್ಯ, ಅನನುಕರಣೀಯ, ವಿಶಿಷ್ಟ ಸಂಗೀತ ಪ್ರತಿಭೆ. ಹೊಕ್ಕುಳ ಆಳದಿಂದ, ಗಜಗಾಂಭೀರ್ಯದಿಂದ, ಮೂಡಿಬರುವ, ಹೆಬ್ಬಾವಿನಷ್ಟು ಭಾರವಾದ ಕೊರಲು ಎಂಡಿ ಅವರ ಹೆಗ್ಗುರುತು. ಇದು ಎಂಡಿ ಅವರ ನೂರನೇ ವರ್ಷ (೨೦/೦೫/೧೯೨೩ – ೨೭/೦೪/೧೯೮೪). ಎಂ ಡಿ ಸಂಗೀತ

Ramanathan M D-ಎಂ.ಡಿ. ರಾಮನಾಥನ್ ಎಂದರೆ ಎಂಡಿ ಫಾರ್ ಮ್ಯೂಸಿಕ್ Read More »

ಸ್ವಾತಂತ್ರ್ಯದ ಹಾದಿಯಲ್ಲಿ-ಜೋಸೆಫ್ ಸ್ಟಿಗ್‌ಲಿಟ್ಜ್ ಅವರ ಹೊಸ ಪುಸ್ತಕ

ಕೋವಿಡ್ ಪಿಡುಗಿನ ಸಮಯಲ್ಲಿ ಅಮೇರಿಕೆಯಲ್ಲಿ ಟ್ರಂಪ್‌ನ ಕೆಲವು ಗೆಳೆಯರು ತಾವು ಮಾಸ್ಕ್ ಧರಿಸುವುದಿಲ್ಲ. ಅದು ತಮ್ಮ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅಡ್ಡಿ ಅಂತ ಗಲಾಟೆ ಮಾಡುತ್ತಿದ್ದರು. ಮಾಸ್ಕ್ ಧರಿಸುವುದರಿಂದ ಸ್ವಲ್ಪ ಅನಾನುಕೂಲವಾಗಬಹುದು. ಆದರೆ ಮಾಸ್ಕ್ ಧರಿಸದೇ ಇರುವುದರಿಂದ ಉಳಿದವರ ಸ್ವಾತಂತ್ರಕ್ಕೆ ಅಂದರೆ ಅವರ ಬದುಕುವ ಹಕ್ಕಿಗೆ ಅಡ್ಡಿ ಮಾಡುತ್ತೇವೆ ಎಂದು ಜೋಸೆಫ್ ಸ್ಟಿಗ್‌ಲಿಟ್ಜ್ ವಾದಿಸುತ್ತಿದ್ದರು. ಒಬ್ಬರ ಸ್ವಾತಂತ್ರ್ಯ ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತದೆ. ಈ ಚಿಂತನೆ ಬೆಳೆದು “ರೋಡ್ ಟು ಫ್ರೀಡಂ: ಎಕನಾಮಿಕ್ಸ್ ಅಂಡ್ ದಿ ಗುಡ್ ಸೊಸೈಟಿ” ಒಂದು

ಸ್ವಾತಂತ್ರ್ಯದ ಹಾದಿಯಲ್ಲಿ-ಜೋಸೆಫ್ ಸ್ಟಿಗ್‌ಲಿಟ್ಜ್ ಅವರ ಹೊಸ ಪುಸ್ತಕ Read More »

ಘನತೆಯ ಬದುಕಿಗಾಗಿ

ಟಿ ಎಸ್ ವೇಣುಗೋಪಾಲ್ ‘ಕನ್ನಡದ ರಂಗಭೂಮಿಯು ಕೆಲವರನ್ನು ಮುಟ್ಟಿ ಸ್ಟೇಜಿಗೆ ಕೈ ಹಿಡಿದು ಕರೆದುಕೊಂಡರೆ, ಮತ್ತೆ ಕೆಲವರನ್ನು ದೂರದಲ್ಲಿ ಕೂತು ನಾಟಕ ನೋಡಲು ಮಾತ್ರ ಅವಕಾಶ ಕೊಟ್ಟಿದೆ. ಅಂದರೆ ಕನ್ನಡದ ರಂಗಭೂಮಿ ದಲಿತರನ್ನು ಮುಟ್ಟಿಸಿಕೊಳ್ಳದಂತೆ ಶತಮಾನಗಳ ಕಾಲ ಅಸ್ಪೃಶ್ಯತೆ ಆಚರಿಸಿದೆ. ಈ ಮಧ್ಯೆ ದಲಿತೇತರ ಕೆಲವರು ದಲಿತ ಸಮುದಾಯವನ್ನು ಪ್ರತಿನಿಧಿಸಿ ಕೆಲವು ಪ್ರಯೋಗಗಳನ್ನು ಮಾಡಿದ್ದಾರೆ. ಆದರೆ ದಲಿತ ಸಮುದಾಯದ ಹೊಸ ತಲೆಮಾರು ತನ್ನದೇ ಹಿರಿಯರ ಕಥೆ ಹೇಳುವ ಮಾದರಿ ಕನ್ನಡದಲ್ಲಿರಲಿಲ್ಲ”. ಎಂದು ಹೇಳುವ ಮೂಲಕ ಅರುಣ್ ಜೋಳದಕೂಡ್ಲಿಗಿ

ಘನತೆಯ ಬದುಕಿಗಾಗಿ Read More »

ಮಕ್ಕಳಿಗಾಗಿ ಅರ್ಥಶಾಸ್ತ್ರ

ಅಭಿಜಿತ್ ಬ್ಯಾನರ್ಜಿ ಹಾಗೂ ಎಸ್ಥರ್ ದುಫ್ಲೊ ಪೂರ್ ಎಕನಾಮಿಕ್ಸ್ – ರಿಥಿಂಕಿಂಗ್ ಪಾವರ್ಟಿ ಅಂಡ್ ವೇ ಟು ಎಂಡ್ ಇಟ್ ಪುಸ್ತಕವನ್ನು ೨೦೧೧ರಲ್ಲಿ ಪ್ರಕಟಿಸಿದ್ದರು. ಅದರ ಹೆಸರೇ ಸೂಚಿಸುವಂತೆ ಅದರಲ್ಲಿ ಬಡತನವನ್ನು ಕುರಿತಂತೆ ಮರುಚಿಂತನೆಯನ್ನು ಮಾಡಲಾಗಿದೆ. ಜೊತೆಗೆ ಅದನ್ನು ಕೊನೆಗಾಣಿಸುವ ಬಗೆಯೂ ಅದರಲ್ಲಿ ಚರ್ಚಿಸಲಾಗಿದೆ. ಇಲ್ಲಿ ಪೂರ್ ಅನ್ನುವ ಪದ ಇದು ಬಡತನದ ಬಗೆಗಿನ ಪುಸ್ತಕ ಅನ್ನುವುದನ್ನು ಸೂಚಿಸುತ್ತದೆ. ಜೊತೆಗೆ ಬಡತನವನ್ನು ಕುರಿತಂತೆ ಅರ್ಥಶಾಸ್ತ್ರದ ದಾರಿದ್ರ್ಯವನ್ನೂ ತೋರಿಸುತ್ತದೆ. ಅವರು ಹೇಳುವಂತೆ ಬಡತನವನ್ನು ಕುರಿತು ಇಂದು ನಡೆಯುತ್ತಿರುವ ಚರ್ಚೆಯಲ್ಲೇ

ಮಕ್ಕಳಿಗಾಗಿ ಅರ್ಥಶಾಸ್ತ್ರ Read More »

T S Satyavathi, ರಾಗ ಅನ್ನೋದು ಅಕ್ಷರವೆಂಬ ಅಚ್ಚಿನಲ್ಲಿ ಸುರಿದ ಪಾಕ. ಡಾ ಟಿ ಎಸ್ ಸತ್ಯವತಿಯವರೊಂದಿಗಿನ ಸಂದರ್ಶನ

ಸಂದರ್ಶಕರು – ಶೈಲಜ   ಡಾ ಟಿ ಎಸ್ ಸತ್ಯವತಿಯವರು ಹೆಸರಾಂತ ಕರ್ನಾಟಕ ಸಂಗೀತ ಗಾಯಕಿ, ಸಂಗೀತಶಾಸ್ತ್ರಜ್ಞೆ ಹಾಗೂ ಸಂಸ್ಕೃತ ವಿದುಷಿ. ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು. ಎರಡರ ಹರೆಯದಲ್ಲಿಯೇ ಮೈಸೂರು ಮಹಾರಾಣಿಯ ಮುಂದೆ ಹಾಡಿದ ಬಾಲಪ್ರತಿಭೆ. ಸಂಗೀತದಲ್ಲಿ ಅಭಿರುಚಿ ಹಾಗೂ ಪರಿಶ್ರಮವಿದ್ದ ತಾಯಿಯ ಕಟ್ಟುನಿಟ್ಟಾದ ಮೇಲ್ವಿಚಾರಣೆಯಲ್ಲಿ ಅವರ ಸಂಗೀತ ಪ್ರತಿಭೆ ಅರಳಿತು. ಹಿರಿಯಕ್ಕ ವಿದುಷಿ ವಸಂತ ಮಾಧವಿ, ವಿದ್ವಾನ್ ಆರ್ ಕೆ ಶ್ರೀಕಂಠನ್ ಅವರ ಮಾರ್ಗದರ್ಶನದಲ್ಲಿ ಅವರ ಕಲೆ ಅರಳಿ, ಪಕ್ವಗೊಂಡಿತು. ವಿದ್ವಾನ್ ಬೆಂಗಳೂರು ಕೆ ವೆಂಕಟರಾಂ

T S Satyavathi, ರಾಗ ಅನ್ನೋದು ಅಕ್ಷರವೆಂಬ ಅಚ್ಚಿನಲ್ಲಿ ಸುರಿದ ಪಾಕ. ಡಾ ಟಿ ಎಸ್ ಸತ್ಯವತಿಯವರೊಂದಿಗಿನ ಸಂದರ್ಶನ Read More »

ಮನಮೋಹನ್ ಸಿಂಗ್ ನೆನಪಿನಲ್ಲಿ

[ಮನಮೋಹನ್ ಸಿಂಗ್ ಬಗ್ಗೆ ಏನೂ ಬರೆಯಲಿಕ್ಕೆ ಆಗಿರಲಿಲ್ಲ. ಸಧ್ಯಕ್ಕೆ ಅಮರ್ತ್ಯಸೇನ್ ಅವರು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಬರೆದ ಲೇಖನದ ಶೈಲಜ ಮಾಡಿದ ಅನುವಾದವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.] ಮನ್‌ಮೋಹನ್‌ಸಿಂಗ್ ಅವರು ಒಬ್ಬ ಶ್ರೇಷ್ಠ ವ್ಯಕ್ತಿ ಎಂದು ಹೇಳಿದರೆ, ಎಲ್ಲರಿಗೂ ತಿಳಿದಿರುವುದನ್ನೇ ಮತ್ತೆ ಹೇಳಿದಂತೆ. ಅವರೊಬ್ಬ ಪ್ರತಿಭಾವಂತ ರಾಜಕೀಯ ಧುರೀಣ, ದಾರ್ಶನಿಕ, ಅಸಾಧಾರಣ ಅರ್ಥಶಾಸ್ತ್ರಜ್ಞ, ಅತ್ಯುತ್ತಮ ಅಧ್ಯಾಪಕ, ಅದ್ಭುತ ಆಡಳಿತಗಾರರು, ಒಳ್ಳೆಯ ಪತಿ, ತಂದೆ ಹಾಗೂ ತಾತ. ಎಲ್ಲದಕ್ಕಿಂತ ಹೆಚ್ಚಾಗಿ ಅಪಾರ ಸಹಾನುಭೂತಿಯುಳ್ಳ ಮನುಷ್ಯ. ನಮ್ಮಿಬ್ಬರದು ೭೦ ವರುಷಗಳಿಗೂ ಮೀರಿದ

ಮನಮೋಹನ್ ಸಿಂಗ್ ನೆನಪಿನಲ್ಲಿ Read More »